ಪ್ರಯಾಗರಾಜ ಕುಂಭಮೇಳ 2025
ಪ್ರಯಾಗರಾಜ – ‘ನರ ಸೇವೆ ಇದೇ ನಾರಾಯಣ ಸೇವೆ’ ಈ ಭಾವದಿಂದ ಸೇವಾ ನಿರತವಾಗಿರುವ ‘ಅಖಿಲ ಭಾರತೀಯ ಸಾಹೂ ಸೇವಾ ದಳ’ ದ ಶ್ರೀ ಚಂದ್ರಿಕಾ ಪ್ರಸಾದ ಸಾಹೂ ಇವರು ಕಳೆದ ೧೮ ವರ್ಷಗಳಿಂದ ನಿರಂತರ ಭಕ್ತರಿಗಾಗಿ ಉಚಿತ ವಸತಿ ಮತ್ತು ಭೋಜನ ಸೇವೆ ಒದಗಿಸುತ್ತಿದ್ದಾರೆ.
ಈ ವರ್ಷದ ಮಹಾಕುಂಭಮೇಳದ ಮುಕ್ತಿ ಮಾರ್ಗದಲ್ಲಿ ‘ಸಾಹೂ ಸೇವಾ ದಳ’ ದಿಂದ ಕುಂಭಮೇಳಕ್ಕೆ ಬರುವ ಭಕ್ತರಿಗಾಗಿ ಒಂದೇ ಸಮಯದಲ್ಲಿ 300 ಭಕ್ತರು ವಾಸಿಸಬಹುದು ಅಂತಹ ಉಚಿತ ವಸತಿ ಮತ್ತು ಭೋಜನ ವ್ಯವಸ್ಥೆ ಒದಗಿಸಿ ಕೊಟ್ಟಿದ್ದಾರೆ. ಈ ಸ್ಥಳದಲ್ಲಿ ಭಕ್ತರಿಗಾಗಿ ಚಹಾ, ಉಪಾಹಾರ, ಬಿಸಿನೀರು, ಆಧುನಿಕ ಸ್ನಾನಗೃಹಗಳು, ಶೌಚಾಲಯಗಳು ಹೀಗೆ ಸೌಲಭ್ಯಗಳನ್ನು ಕೂಡ ಒದಗಿಸಿದ್ದಾರೆ. ಇಲ್ಲಿಯ ಪ್ರತಿಯೊಂದು ವ್ಯವಸ್ಥೆ ಸ್ವತಹ ಚಂದ್ರಿಕಾ ಪ್ರಸಾದ ಮತ್ತು ಅವರ ಕಾರ್ಯಕರ್ತರು ನೋಡಿಕೊಳ್ಳುತ್ತಿದ್ದಾರೆ. ದೇಶ-ವಿದೇಶಗಳಿಂದ ಕೂಡ ಕೆಲವು ಭಕ್ತರು ಇಲ್ಲಿಗೆ ಬಂದು ಈ ಸೌಲಭ್ಯದ ಲಾಭ ಪಡೆಯುತ್ತಾರೆ. ಈ ವರ್ಷ ಡಿಸೆಂಬರ್ ೨೯ ರಿಂದ ಪ್ರಯಾಗರಾಜ ಮಹಾಕುಂಭಮೇಳದಲ್ಲಿ ಅವರು ಈ ಸೇವೆಯನ್ನು ಆರಂಭಿಸಿದ್ದಾರೆ, ಇಲ್ಲಿಯವರೆಗೆ ೩ ಸಾವಿರಗಿಂತಲೂ ಹೆಚ್ಚಿನ ಭಕ್ತರು ಇದರ ಲಾಭ ಪಡೆದಿದ್ದಾರೆ. ಈ ಸೇವೆಯು ಮಹಾಶಿವರಾತ್ರಿಯವರೆಗೆ ಮುಂದುವರೆಯುವುದಾಗಿ ಚಂದ್ರಿಕಾ ಪ್ರಸಾದ ಇವರು ಹೇಳಿದ್ದಾರೆ.
ಸಾಮೂಹಿಕ ವಿವಾಹ ಸಮಾರಂಭ
‘ಸಾಹೂ ಸೇವಾ ದಳ’ ದಿಂದ ಪ್ರತಿ ವರ್ಷ ಪ್ರಯಾಗರಾಜದಲ್ಲಿ ಸಾಮೂಹಿಕ ವಿವಾಹ ಸಮಾರಂಭ ಆಯೋಜನೆ ಮಾಡುತ್ತಾರೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ೫೧ ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭ ನೆರವೇರಿದೆ. ಇಲ್ಲಿಯವರೆಗೆ ೧ ಸಾವಿರಗಿಂತಲೂ ಹೆಚ್ಚಿನ ಜೋಡಿಗಳ ವಿವಾಹವನ್ನು ಸಾಹೂ ಸೇವಾದಳದಿಂದ ನಡೆಸಲಾಗಿದೆ.