ಸಂಗಮದಲ್ಲಿ ಇಂದು ಮೂರನೆಯ ಅಮೃತ ಸ್ನಾನ ; ಪೊಲೀಸರು ಮತ್ತು ಸರಕಾರ ಸಜ್ಜು !

ಪ್ರಯಾಗರಾಜ ಕುಂಭಮೇಳ 2025

ದುರಂತದಿಂದ ಪಾಠ ಕಲಿತು ದಿಟ್ಟ ವ್ಯವಸ್ಥೆ !

ಶ್ರೀ ನಿಲೇಶ ಕುಲಕರ್ಣಿ, ವಿಶೇಷ ಪ್ರತಿನಿಧಿ, ಪ್ರಯಾಗರಾಜ

ಪ್ರಯಾಗರಾಜ, ಫೆಬ್ರವರಿ ೨ (ಸುದ್ಧಿ) – ಇಲ್ಲಿ ಜನವರಿ ೨೯ ರಂದು ದ್ವಿತೀಯ ಅಮೃತ ಸ್ನಾನದ ದಿನದಂದು ನಡೆದ ಕಾಲ್ತುಳಿತದ ಘಟನೆಯ ಹಿನ್ನೆಲೆಯಲ್ಲಿ ವಸಂತ ಪಂಚಮಿಯ ಮುಹೂರ್ತದಲ್ಲಿ ಎಂದರೆ ಇಂದು ಸಾಧು-ಸಂತರು ಮೂರನೇ ಮತ್ತು ಕೊನೆಯ ಅಮೃತ ಸ್ನಾನ ಮಾಡಿದರು. ಮುಂದೆ ಫೆಬ್ರುವರಿ ೧೨ ಮತ್ತು ಫೆಬ್ರುವರಿ ೨೬ ರಂದು ಇರುವ ಸ್ನಾನ ಇದು ಪರ್ವಸ್ನಾನ ಆಗಿದೆ. ಜನವರಿ ೨೯ ರಂದು ನಡೆದಿರುವ ಘಟನೆಯಲ್ಲಿ ೩೦ ಭಕ್ತರು ಅವರ ಪ್ರಾಣ ಕಳೆದುಕೊಂಡಿದ್ದರು ಹಾಗೂ ೯೦ ಜನರು ಗಾಯಗೊಂಡಿದ್ದರು. ಆದ್ದರಿಂದ ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರದ ಬಗ್ಗೆ ಟಿಕೆಗಳ ಸುರಿಮಳೆಗೆ ನಡೆದಿತ್ತು. ಇದರ ಹಿನ್ನೆಲೆಯಲ್ಲಿ ಮೂರನೆಯ ಅಮೃತ ಸ್ನಾನ ಸುಲಲಿತವಾಗಿ ನೆರವೇರಲು ಸರಕಾರದ ಮೇಲೆ ಬಹಳ ಒತ್ತಡವಿದೆ.

ಈ ಅಮೃತ ಸ್ನಾನದ ಹಿನ್ನೆಲೆಯಲ್ಲಿ ಪೊಲೀಸರಿಂದ ಮತ್ತು ಸರಕಾರದಿಂದ ಫೆಬ್ರುವರಿ ೨ ರಿಂದ ೪ ವರೆಗೆ ಕುಂಭಕ್ಷೇತ್ರದಲ್ಲಿ ವಾಹನ ಪ್ರವೇಶ ನಿಷೇಧಿಸಲಾಗಿದೆ. ಇದರ ಜೊತೆಗೆ ವಿಐಪಿ ವ್ಯಕ್ತಿಗಳಿಗಾಗಿ ಇರುವ ಪಾಸ್ ರದ್ದುಪಡಿಸಲಾಗಿದೆ. ಜನವರಿ ೨೯ ರಂದು ಇದೇ ವಿಐಪಿ ‘ಪಾಸ್ ನಿಂದಾಗಿ ಗಣ್ಯ ವ್ಯಕ್ತಿಗಳ ಸುರಕ್ಷೆಯಲ್ಲಿ ಪೊಲೀಸರು ಸಿಲುಕಿದ್ದರೂ ಮತ್ತು ಸಾಮಾನ್ಯ ಭಕ್ತರ ವ್ಯವಸ್ಥೆಯಲ್ಲಿ ಅವರಿಂದ ದುರ್ಲಕ್ಷವಾಗಿರುವುದರಿಂದ ಘಟನೆ ನಡೆಯಿತು, ಎಂದು ವಿರೋಧ ಪಕ್ಷದವರು ಆರೋಪಿಸಿದ್ದರು. ಇದರ ಹಿನ್ನೆಲೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಅದರ ಜೊತೆಗೆ ಎಲ್ಲಾ ೩೦ ಪಾಂಟುನ ಸೇತುವೆಗಳು (ನದಿಯ ಮೇಲೆ ಬಂದು ಹೋಗುವುದಕ್ಕಾಗಿ ಕಟ್ಟಲಾದ ತಾತ್ಕಾಲಿಕ ಸೇತುವೆ) ಸಾಮಾನ್ಯ ಭಕ್ತರಿಗಾಗಿ ತೆರೆಯಲಾಗಿದೆ. ಕಳೆದ ಸಮಯದಲ್ಲಿ ಬಹಳಷ್ಟು ಸೇತುವೆಗಳು ಮುಚ್ಚಲಾಗಿರುವ ಕಾರಣ ಒಂದೇ ಸ್ಥಳದಲ್ಲಿ ಗದ್ದಲವಾಗಿ ಕಾಲ್ತುಳಿತ ನಡೆದಿತ್ತು.

ಸಾಧು ಸಂತರಲ್ಲಿ ಮತ್ತು ಭಕ್ತರಲ್ಲಿ ಬಹಳಷ್ಟು ಉತ್ಸಾಹ !

ಘಟನೆಯ ನಂತರ ಕೂಡ ಇಂದಿನವರೆಗೆ ಪ್ರತಿದಿನ ಲಕ್ಷಾಂತರ ಭಕ್ತರು ಗಂಗಾ ಸ್ನಾನ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು ಸುಮಾರು ೩೪ ಕೋಟಿ ಭಕ್ತರು ಗಂಗಾ ಸ್ನಾನ ಮಾಡಿದ್ದಾರೆ. ಇದರಿಂದ ಭಕ್ತರ ಮೇಲೆ ಘಟನೆಯ ಯಾವುದೇ ನಕಾರಾತ್ಮಕ ಪರಿಣಾಮ ಬೀರಿಲ್ಲ’, ಹೀಗೆ ಕಂಡು ಬರುತ್ತಿದೆ. ಮೂರನೆಯ ಅಮೃತ ಸ್ನಾನಕ್ಕಾಗಿ ಸಾಧು ಸಂತರು ಮತ್ತು ಭಕ್ತರಲ್ಲಿ ಬಹಳ ಉತ್ಸಾಹ ಕಂಡು ಬರುತ್ತಿದೆ. ನಮ್ಮ (ಶ್ರೀ ಪಂಚಾಯತಿ ನಿರಂಜನಿ) ಅಖಾಡದಲ್ಲಿ ವಸಂತ ಪಂಚಮಿಯ ಮುಹೂರ್ತದಲ್ಲಿ ಅಮೃತ ಸ್ನಾನದ ಕುರಿತು ಭರ್ಜರಿ ಸಿದ್ಧತೆಗಳು ನಡೆಯುತ್ತಿದೆ. ನಮ್ಮ ರಥಗಳು ಅಲಂಕಾರ ಕೊಳ್ಳುತ್ತಿವೆ. ಎಲ್ಲಾ ಸಂತರು ಸ್ನಾನಕ್ಕಾಗಿ ಹೋಗುವರು. ನಾವೆಲ್ಲರೂ ಸ್ನಾನ ಉತ್ಸಾಹದಲ್ಲಿ ಆಗಬೇಕು ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದೇವೆ. ವಸಂತ ಪಂಚಮಿಯ ಸ್ನಾನ ಇದು ಉರ್ಜೆಯ ಸ್ನಾನವಾಗಿದೆ, ಎಂದು ಅಖಿಲ ಭಾರತೀಯ ಅಖಾಡಾ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಶ್ರೀ ಮಹಂತ ರವೀಂದ್ರಪುರಿಜಿ ಮಹಾರಾಜ್ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಭಕ್ತರು ಸಂಗಮದಲ್ಲಿ ಸ್ನಾನ ಮಾಡಲು ಹಠ ಹಿಡಿಯಬಾರದು ! – ಅಖಾಡ ಪರಿಷತ್

‘ಸನಾತನ ಪ್ರಭಾತ’ದ ಪ್ರತಿನಿಧಿಗಳ ಜೊತೆಗೆ ಮಾತನಾಡುವಾಗ ಅಖಿಲ ಭಾರತೀಯ ಅಖಾಡ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಶ್ರೀ ಮಹಂತ ರವೀಂದ್ರಪುರಿ ಜಿ ಮಹಾರಾಜ್ ಇವರು, ‘ಗಂಗಾ ನದಿ ಇದು ೫ ಮೈಲಿ (೧೫ ಕಿಲೋಮೀಟರ್) ವರೆಗೆ ಹಬ್ಬಿದೆ. ಆದ್ದರಿಂದ ಗಂಗೆಯ ಪಾತ್ರದಲ್ಲಿ ಎಲ್ಲಿಯೂ ಸ್ನಾನ ಮಾಡಿದರು, ಅದು ಸಂಗಮ ಸ್ನಾನದ ಫಲವೇ ಸಿಗುವುದು. ‘ಸಂಗಮ ನೊಜ’ (ಸ್ನಾನದ ಮುಖ್ಯಸ್ಥಾನ) ಯಾವುದನ್ನು ಹೇಳುತ್ತೇವೆ, ಅದು ಪ್ರತಿ ವರ್ಷ ಬದಲಾಗುತ್ತದೆ. ಆದ್ದರಿಂದ ಭಕ್ತರು ಸಂಗಮ ಸ್ಥಾನದಲ್ಲಿ ಸ್ನಾನ ಮಾಡಲು ಹಠ ಮಾಡದೆ ಎಲ್ಲಿ ಹತ್ತಿರದಲ್ಲಿ ಗಂಗಾ ನದಿ ಇದೆ ಅಲ್ಲಿ ಸ್ನಾನ ಮಾಡಬೇಕು. ಅಲ್ಲಿ ಸ್ನಾನ ಮಾಡಿದರೂ ಪಾಪ ಕ್ಷಾಲನವಾಗುತ್ತದೆ ಮತ್ತು ಮೋಕ್ಷಾ ದೊರೆಯುತ್ತದೆ.’ ಎಂದು ಹೇಳಿದರು.

ಗಂಗಾ ನದಿಯ ಯಾವುದೇ ದಡದಲ್ಲಿ ಸ್ನಾನ ಮಾಡಿದರೂ ಅಮೃತ ಸ್ನಾನದ ಲಾಭ ದೊರೆಯುವುದು ! – ಆಚಾರ್ಯ ಮಹಾಮಂಡಲೇಶ್ವರ ಶ್ರೀ ಕೈಲಾಶಾನಂದಪುರಿಜಿ ಮಹಾರಾಜ

‘ಸನಾತನ ಪ್ರಭಾತ’ದ ಪ್ರತಿನಿಧಿಗಳ ಜೊತೆಗೆ ಮಾತನಾಡುವಾಗ ಶ್ರೀ ಪಂಚಾಯತಿ ಅಖಾಡ ನಿರಂಜನಿಯ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಶ್ರೀ ಕೈಲಾಶಾನಂದ ಪೂರಿಜಿ ಮಹಾರಾಜ್ ಇವರು, ‘ವಸಂತ ಪಂಚಮಿಯ ಅಮೃತ ಸ್ನಾನ ನಿರ್ಮಿಘ್ನವಾಗಿ ನೆರವೇರಲಿ, ಅದಕ್ಕಾಗಿ ನಾವು ನಿರಂತರ ಪ್ರಾರ್ಥನೆ ಮಾಡುತ್ತಿದ್ದೇವೆ. ಸರಕಾರ ಒಳ್ಳೆಯ ರೀತಿಯಲ್ಲಿ ಸಿದ್ಧತೆ ಮಾಡುತ್ತಿದೆ. ಗಂಗಾ ನದಿಯ ಯಾವುದೇ ದಡದಲ್ಲಿ ಸ್ನಾನ ಮಾಡಿದರೂ ಅಮೃತ ಸ್ನಾನದ ಲಾಭ ದೊರೆಯುವುದು. ಆದ್ದರಿಂದ ಭಕ್ತರು ಸಂಗಮದಲ್ಲಿ ಗದ್ದಲ ಮಾಡದೆ ಇತರ ಯಾವುದೇ ಘಟ್ಟದಲ್ಲಿಯು ಸ್ನಾನ ಮಾಡಬಹುದು,’ ಎಂದು ಹೇಳಿದರು.