ಮಹಾಕುಂಭದಲ್ಲಿ ಫೆಬ್ರುವರಿ ೨ ವರೆಗೆ ೩೪ ಕೋಟಿ ಭಕ್ತರಿಂದ ಸಂಗಮದಲ್ಲಿ ಸ್ನಾನ !

ಪ್ರಯಾಗರಾಜ ಕುಂಭಮೇಳ 2025

  • ಫೆಬ್ರವರಿ ೨ ರಿಂದ ೪ ವರೆಗೆ ಪ್ರಯಾಗರಾಜ್ ನಗರದಲ್ಲಿ ವಾಹನ ಪ್ರವೇಶ ನಿಷೇಧ !

  • ವಿಐಪಿ ಪಾಸ್ ರದ್ದು !

ಪ್ರಯಾಗರಾಜ, ಫೆಬ್ರುವರಿ ೨(ವಾರ್ತೆ) – ಇಂದು ಮಹಾಕಂಭದ ೨೧ ನೆಯ ದಿನವಾಗಿದೆ. ಫೆಬ್ರವರಿ ೨ ರಂದು ಮಧ್ಯಾಹ್ನ ೧೨ ರ ವರೆಗೆ ೯೭ ಲಕ್ಷ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಜನವರಿ ೧೩ ರಿಂದ ಇಲ್ಲಿಯವರೆಗೆ ಒಟ್ಟು ೩೪ ಕೋಟಿ ೫೭ ಲಕ್ಷ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಭಕ್ತರ ಗದ್ದಲ ಮತ್ತು ಸುರಕ್ಷೆಯ ದೃಷ್ಟಿಯಿಂದ ಹೆಲಿಕಾಪ್ಟರ್ ನಿಂದ ಭಕ್ತರ ಗದ್ದಲದ ಮೇಲೆ ಗಮನ ಇರಿಸಲಾಗುತ್ತಿದೆ. ಹಾಗೂ ಗದ್ದಲದ ಮೇಲೆ ಹಿಡಿತ ಇಡುವುದಕ್ಕಾಗಿ ಫೆಬ್ರವರಿ ೨ ರಿಂದ ೪ ವರೆಗೆ ಕುಂಭ ಕ್ಷೇತ್ರ ಮತ್ತು ಪ್ರಯಾಗರಾಜ ನಗರದಲ್ಲಿ ವಾಹನ ಪ್ರವೇಶ ನಿಷೇಧಿಸಲಾಗಿದೆ. ವಿಐಪಿ ನಾಯಕರು ಪ್ರವೇಶ ಪಾಸು ರದ್ದುಪಡಿಸಲಾಗಿದೆ. ಸಂಗಮಕ್ಕೆ ಹೋಗುವ ಪ್ರತಿಯೊಂದು ಮಾರ್ಗದಲ್ಲಿ ವಾಹನ ಪ್ರವೇಶ ನಿಷೇಧಿಸಲಾಗಿದೆ. ರಾತ್ರಿ ೧೦ ಗಂಟೆಯ ನಂತರ ಯಾವುದೇ ಪರಿಸ್ಥಿತಿಯಲ್ಲಿ ವಾಹನ ಬಿಡಲಾಗದು.

೧. ಮಹಾಕುಂಭ ಕ್ಷೇತ್ರದಲ್ಲಿನ ಒಂದು ಸ್ಥಳದಲ್ಲಿ ಪೊಲೀಸರು ವಾಹನ ಪ್ರವೇಶ ನಿರಾಕರಿಸಿದ ನಂತರ ಓರ್ವ ಸಾಧು ಬ್ಯಾರಿಕೆಟ್ ಬಲವಂತವಾಗಿ ತೆರೆವುಗೊಳಿಸಿ ಒಳಗೆ ನುಗ್ಗಲು ಪ್ರಯತ್ನಿಸಿದರು. ಆ ಸಮಯದಲ್ಲಿ ಸಾಧು ಮತ್ತು ಪೊಲೀಸರ ನಡುವೆ ವಾಗ್ವಾದ ಆಯಿತು.

೨. ಪ್ರಯಾಗರಾಜದಲ್ಲಿ ಸೆಕ್ಟರ್ ೨ ರಲ್ಲಿ ಭಕ್ತರ ಬೃಹತ್ ಜಂಗುಳಿ ಇದೆ. ಇಲ್ಲಿಂದ ಭಕ್ತರು ಪ್ರಯಾಗರಾಜ ರೈಲ್ವೆ ಸ್ಟೇಷನ್, ರಾಮಬಾಗ, ಸುಬೇದಾರಗಂಜ, ಮತ್ತು ಪ್ರಯಾಗ್ ಸ್ಟೇಷನ್ ಗೆ ಹೋಗುತ್ತಿದ್ದಾರೆ.

೩. ಸಣ್ಣಪುಟ್ಟ ವಾಹನಗಳಿಗಾಗಿ ಬೇರೆ ಬೇರೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ರೈಲ್ವೆ ಸ್ಟೇಷನ್ ಗೆ ಬಂದು ಹೋಗಲು ಬೇರೆ ಬೇರೆ ವ್ಯವಸ್ಥೆ ಮಾಡಲಾಗಿದೆ. ಒಂದು ಕಡೆಯಿಂದ ಭಕ್ತರು ಬಂದರೆ ಇನ್ನೊಂದು ಕಡೆಗೆ ಭಕ್ತರನ್ನು ಹೊರಗೆ ಕಳುಹಿಸಲಾಗುತ್ತಿದೆ. ಭಕ್ತರಿಗಾಗಿ ಸರಕಾರ ಎಲ್ಲಾ ಪಾಂಟುನ ಸೇತುವೆ (ತಾತ್ಕಾಲಿಕ ಕಟ್ಟಲಾಗಿರುವ ಸೇತುವೆ) ತೆರೆಯಲಾಗಿದೆ.