ಹಿಂದೂ ರಾಷ್ಟ್ರ ಸ್ಥಾಪನೆಗಾಗಿ 108 ಯಜ್ಞಗಳ ಸಂಕಲ್ಪ, ಕುಂಭಮೇಳದಲ್ಲಿ ಯಜ್ಞಗಳು ಪ್ರಾರಂಭ !

ಪ್ರಯಾಗರಾಜ ಕುಂಭಮೇಳ 2025

ಸ್ವಾಮಿ ಅಲೋಕ್ ಗಿರಿಜಿ ಮಹಾರಾಜ್ ಅವರ ಕುಟೀರ

ಪ್ರಯಾಗರಾಜ್, ಫೆಬ್ರವರಿ 2 (ಸುದ್ದಿ) – ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಈಶ್ವರನ ಆಶೀರ್ವಾದ ದೊರೆಯಲಿ ಎಂದು ರಾಷ್ಟ್ರೀಯ ಮಹಾಕಾಲ್ ಸೇನೆಯ (ಹರಿದ್ವಾರ) ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಅಲೋಕ ಗಿರಿಜಿ ಮಹಾರಾಜರು 108 ಯಜ್ಞಗಳನ್ನು ಮಾಡಲು ಸಂಕಲ್ಪ ಮಾಡಿದ್ದಾರೆ. ಈ ಸಂಕಲ್ಪದ ಮೊದಲ ಯಜ್ಞವನ್ನು ಪವಿತ್ರ ನಗರವಾದ ಪ್ರಯಾಗದಲ್ಲಿ ಮಹಾಕುಂಭ ಮೇಳದಲ್ಲಿ ನಡೆಸಲಾಗುತ್ತಿದೆ.

ಪಂಡಿತ್ ಗಿರಿಧಾರಿ ಮಿಶ್ರಾ

ಈ ಯಜ್ಞವನ್ನು ಸೆಕ್ಟರ್ 19 ರಲ್ಲಿರುವ ಶಾಸ್ತ್ರಿ ಸೇತುವೆಯ 14 ನೇ ಕಂಬದಲ್ಲಿರುವ ಪಂಚಾಯತ್ ಶ್ರೀ ನಿರಂಜನಿ ಅಖಾಡಾದ ಸ್ವಾಮಿ ಅಲೋಕ ಗಿರಿಜಿ ಅವರ ಕುಟೀರದಲ್ಲಿ ನಡೆಸಲಾಗುತ್ತಿದೆ. ಈ ಸ್ಥಳದಲ್ಲಿ ಕಥಾವಾಚನಕ್ಕೆ ವಾರಣಾಸಿಯಿಂದ ಬಂದಿದ್ದ ಪಂಡಿತ್ ಗಿರಿಧಾರಿ ಮಿಶ್ರಾ ಇವರು ದೈನಿಕ ಸನಾತನ ಪ್ರಭಾತ್‌ಗೆ ಮಾಹಿತಿ ನೀಡುತ್ತಾ, “ನೇಪಾಳ ಏಕೈಕ ಹಿಂದೂ ರಾಷ್ಟ್ರವಾಗಿತ್ತು; ಆದರೆ ಅದನ್ನು ಜಾತ್ಯತೀತವನ್ನಾಗಿ ಮಾಡಲಾಯಿತು. ಮುಸ್ಲಿಮರ ಅನೇಕ ದೇಶಗಳಿವೆ; ಹಾಗಾದರೆ ಭಾರತ ಏಕೆ ಹಿಂದೂ ರಾಷ್ಟ್ರವಾಗಬಾರದು ? ಈ ಯಾಗದಲ್ಲಿ ಅನೇಕ ಭಕ್ತರು ಭಾಗವಹಿಸುತ್ತಿದ್ದಾರೆ. ದೈವಿಕ ಶಕ್ತಿಯೇ ನಮಗೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಸ್ಫೂರ್ತಿ ನೀಡಿದೆ. ಭಾರತದಲ್ಲಿ ಶೀಘ್ರದಲ್ಲೇ ಹಿಂದೂ ರಾಷ್ಟ್ರವು ಸಾಂವಿಧಾನಿಕವಾಗಿ ಸ್ಥಾಪನೆಯಾಗಲಿದೆ.” ಎಂದು ಹೇಳಿದರು.