ಚೆನ್ನೈ – ಭಾರತೀಯ ಗುಪ್ತಚರ ಸಂಸ್ಥೆಗಳು ಇತ್ತೀಚೆಗೆ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹಮ್ಮದ್ ಝಕಾರಿಯಾ ಎಂಬ ಪಾಕಿಸ್ತಾನಿ ಭಯೋತ್ಪಾದಕನನ್ನು ಬಂಧಿಸಿತು. ಅವನು ಶ್ರೀಲಂಕಾಕ್ಕೆ ಹೋಗುವ ಪ್ರಯತ್ನದಲ್ಲಿದ್ದನು. ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಆತನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದೆ. ಝಕಾರಿಯಾ ‘ಖಲೀಫಾ’ ಹೆಸರಿನ ಪಾಕಿಸ್ತಾನಿ ಇಸ್ಲಾಮಿ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ
1. ಮಹಮ್ಮದ ಝಕಾರಿಯಾ ಕಳೆದ 25 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾನು ಎನ್ನಲಾಗಿದೆ. ಅವನು ಹೋಟೆಲ್ ಅಥವಾ ವ್ಯವಹಾರದ ಹೆಸರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದನು.
2. `ಎನ್.ಐ.ಎ’ ಆತನಿಂದ ಜಮಾತೆ ಇಸ್ಲಾಮಿ ಪಾಕಿಸ್ತಾನಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಮಹಮ್ಮದ್ ಝಕಾರಿಯಾ ‘ಖಲೀಫಾ’ ಸಂಘಟನೆಯ ಭಾರತೀಯ ಮುಖ್ಯಸ್ಥನಾಗಿದ್ದಾನೆ. ಅವನು ಭಾರತದಲ್ಲಿನ ‘ಖಲೀಫಾ’ ನ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದನು. ಅವನು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸ್ಲೀಪರ್ ಸೆಲ್‌ಗಳನ್ನು (ಭಯೋತ್ಪಾದಕರಿಗೆ ಸಹಾಯ ಮಾಡುವವರು) ಸಮನ್ವಯ ಸಾಧಿಸುತ್ತಿದ್ದನು.
3. ಗುಪ್ತಚರ ಸಂಸ್ಥೆಯ ಮಾಹಿತಿಯ ಪ್ರಕಾರ, ಝಕಾರಿಯಾ ತನ್ನ ಗುಂಪಿನ ನಾಯಕನ ಮರಣದ ನಂತರ ಹೊಸ ನಾಯಕನ ಚುನಾವಣೆಯಲ್ಲಿ ಭಾಗವಹಿಸಲು ಶ್ರೀಲಂಕಾ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದನು.
4. ಭಾರತದಲ್ಲಿ ಝಕಾರಿಯಾಗೆ ಇಬ್ಬರು ಹೆಂಡತಿಯರು ಮತ್ತು 10 ಮಕ್ಕಳಿದ್ದಾರೆ. ಅವನು ಜನರನ್ನು ಖಲೀಫಾನೊಂದಿಗೆ ಸಂಪರ್ಕಿಸುವ ಕೆಲಸ ಮಾಡುತ್ತಿದ್ದನು. ಮತಾಂತರದ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದನು. ಅವನು ಅನೇಕ ಜನರನ್ನು ಮತಾಂತರಗೊಳಿಸಿದ್ದಾನೆ.
ಸಂಪಾದಕೀಯ ನಿಲುವುಅಂತಹವರ ಪ್ರಕರಣಗಳನ್ನು ತ್ವರಿತ ಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ವಿಧಿಸುವುದು ಆವಶ್ಯಕವಾಗಿದೆ ! |