ನವದೆಹಲಿ – ವಿಶ್ವದ ಉನ್ನತ ಮಿಲಿಟರಿಗಳನ್ನು ಶ್ರೇಣೀಕರಿಸುವ ಸಂಸ್ಥೆಯಾದ ‘ಗ್ಲೋಬಲ್ ಫೈರ್‌ಪವರ್ ಇಂಡೆಕ್ಸ್’, 2025 ರ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಭಾರತೀಯ ಸೇನೆ ನಾಲ್ಕನೇ ಸ್ಥಾನದಲ್ಲಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಸೇನೆಗಳ ಪಟ್ಟಿಯಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಇದರ ನಂತರ ರಷ್ಯಾ, ಚೀನಾ ಮತ್ತು ಭಾರತ ಇವೆ. ಈ ಪಟ್ಟಿಯಲ್ಲಿ ಭಾರತವನ್ನು ‘ಪ್ರಮುಖ ಮಿಲಿಟರಿ ಶಕ್ತಿ’ ಎಂದು ವಿವರಿಸಲಾಗಿದೆ. ಈ ಸೂಚ್ಯಂಕವನ್ನು ಮಿಲಿಟರಿ ಶಕ್ತಿ, ಆರ್ಥಿಕ ಸ್ಥಿತಿ, ರಕ್ಷಣಾ ನಿಬಂಧನೆ, ಸೌಲಭ್ಯ ಸಾಮರ್ಥ್ಯ ಇತ್ಯಾದಿ ಸೇರಿದಂತೆ 60 ಕ್ಕೂ ಹೆಚ್ಚು ಮಾನದಂಡಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ.
ಪಾಕಿಸ್ತಾನದ ಸೇನೆ 12ನೇ ಸ್ಥಾನದಲ್ಲಿದೆ !
ಭಾರತದ ನೆರೆಯ ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ ಸಹ, ಈ ಸೂಚ್ಯಂಕದಲ್ಲಿ ಅಗ್ರ 10 ದೇಶಗಳಲ್ಲಿ ಸ್ಥಾನ ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ಈ ಸೂಚ್ಯಂಕದಲ್ಲಿ ಪಾಕಿಸ್ತಾನ 12 ನೇ ಸ್ಥಾನದಲ್ಲಿದೆ, ಬ್ರೆಜಿಲ್‌ಗಿಂತ ಇನ್ನೂ ಕೆಳಗೆ ಹೋಗಿದೆ. ಭಾರತದ ನಂತರ ದಕ್ಷಿಣ ಕೊರಿಯಾ ಐದನೇ ಸ್ಥಾನದಲ್ಲಿದ್ದರೆ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಜಪಾನ್, ಟರ್ಕಿ, ಇಟಲಿ, ಬ್ರೆಜಿಲ್ ಮತ್ತು ನಂತರ ಪಾಕಿಸ್ತಾನ ಸ್ಥಾನ ಪಡೆದಿವೆ. ಭಾರತವನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿರುವ ಕೆನಡಾ ಈ ಶ್ರೇಯಾಂಕದಲ್ಲಿ 28 ನೇ ಸ್ಥಾನದಲ್ಲಿದೆ.
ಭಾರತದ ವಾಯುಪಡೆ ಮತ್ತು ನೌಕಾಪಡೆ ಬಲಿಷ್ಠವಾಗಿವೆ
ವಾಯುಪಡೆ ಮತ್ತು ನೌಕಾಪಡೆಯಲ್ಲೂ ಭಾರತ ಪಾಕಿಸ್ತಾನಕ್ಕಿಂತ ಬಹಳ ಮುಂದಿದೆ. ಈ ಶ್ರೇಯಾಂಕದಲ್ಲಿ, ಪಾಕಿಸ್ತಾನದ ವಾಯುಪಡೆ 7 ನೇ ಸ್ಥಾನದಲ್ಲಿದ್ದರೆ, ಭಾರತೀಯ ವಾಯುಪಡೆ ಅಗ್ರ 5 ರಲ್ಲಿದೆ. ಭಾರತೀಯ ನೌಕಾಪಡೆ ಆರನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನಿ ನೌಕಾಪಡೆ 27 ನೇ ಸ್ಥಾನದಲ್ಲಿದೆ.
ಭಾರತದ ಬಳಿ 51 ಲಕ್ಷ 37 ಸಾವಿರ ಸೈನಿಕರಿದ್ದರೆ, ಪಾಕಿಸ್ತಾನ 17 ಲಕ್ಷ 4 ಸಾವಿರ ಸೈನಿಕರು
ಭಾರತದ ಒಟ್ಟು ಸೇನಾ ಬಲ 51 ಲಕ್ಷದ 37 ಸಾವಿರ ಇದೆ, ಅದರಲ್ಲಿ 14 ಲಕ್ಷ 55 ಲಕ್ಷ ಸಕ್ರಿಯ ಸೈನಿಕರು ಮತ್ತು 11 ಲಕ್ಷ 55 ಸಾವಿರ ಮೀಸಲು ಸೈನಿಕರು ಇದ್ದಾರೆ. ಪಾಕಿಸ್ತಾನದ ಒಟ್ಟು ಸೇನಾ ಬಲ 17 ಲಕ್ಷ 4 ಸಾವಿರ ಇದೆ. 6 ಲಕ್ಷದ 54 ಸಾವಿರ ಸಕ್ರಿಯ ಕರ್ತವ್ಯ ಸೈನಿಕರು ಮತ್ತು 5 ಲಕ್ಷ 50 ಸಾವಿರ ಮೀಸಲು ಸೈನಿಕರು ಇದ್ದಾರೆ.
‘ಗ್ಲೋಬಲ್ ಫೈರ್‌ಪವರ್ ಇಂಡೆಕ್ಸ್’ ವೆಬ್‌ಸೈಟ್‌ನಲ್ಲಿ ಪಾಕಿಸ್ತಾನದ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ತೋರಿಸಲಾಗಿದೆ !
ಕಳೆದ 78 ವರ್ಷಗಳಿಂದ ಭಾರತ ಸರಕಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ನಿರಂತರವಾಗಿ ದಮನಿಸುತ್ತಿರುವುದರ ಪರಿಣಾಮ ಇದಾಗಿದೆ. ಭಾರತ ಈಗಲಾದರೂ ಪಾಕಿಸ್ತಾನಿ ಸೇನೆಯ ಮೇಲೆ ದಾಳಿ ಮಾಡಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕು.
ಗ್ಲೋಬಲ್ ಫೈರ್‌ಪವರ್ ಇಂಡೆಕ್ಸ್ ವೆಬ್‌ಸೈಟ್ globalfirepower.com ನಲ್ಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನದ ನಕ್ಷೆಯಲ್ಲಿ ತೋರಿಸಲಾಗಿದೆ, ಆದರೆ ಭಾರತದ ನಕ್ಷೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗವು ಭಾರತದ ನಕ್ಷೆಯಲ್ಲಿ ತೋರಿಸಿಲ್ಲ.
ಸಂಪಾದಕೀಯ ನಿಲುವುಹೀಗಿದ್ದರೂ, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಕಳೆದ 35 ವರ್ಷಗಳಿಂದ ಭಾರತೀಯ ಸೇನೆಗೆ ತಲೆನೋವಾಗಿದ್ದಾರೆ ಮತ್ತು ಕಾಶ್ಮೀರವು ಅಶಾಂತವಾಗಿಯೇ ಉಳಿದಿದೆ ! ಸಂಖ್ಯೆಯ ಬದಲು ಉಪದ್ರವದ ಮೌಲ್ಯವನ್ನು ನೋಡುವುದು ಸಹ ಮುಖ್ಯವಾಗಿದೆ. ಭಾರತದ ಉಪದ್ರವ ಮೌಲ್ಯ ಶೂನ್ಯ ಎಂದು ಹೇಳಲೇಬೇಕಾಗಬಹುದು ! |