ಮಹಾಕುಂಭಕ್ಷೇತ್ರದಲ್ಲಿ ವಾಹನ ಪ್ರವೇಶದ ಮೇಲಿನ ನಿರ್ಬಂಧ ತೆರವು !

ಪ್ರಯಾಗರಾಜ – ಪ್ರಯಾಗರಾಜ ಜಿಲ್ಲಾ ದಂಡಾಧಿಖಾರಿ ರವೀಂದ್ರ ಕುಮಾರ ಮಂದೇರ ಅವರು ಜನವರಿ 30 ರಂದು ಮಹಾಕುಂಭಮೇಳ ಕ್ಷೇತ್ರದಲ್ಲಿನ ವಾಹನ ಪ್ರವೇಶದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದರು. ಜನವರಿ 31, ಫೆಬ್ರವರಿ 1 ಮತ್ತು ಫೆಬ್ರವರಿ 4 ರಂದು ಪ್ರಯಾಗರಾಜ ಆಯುಕ್ತಾಲಯವು ಪ್ರದೇಶದಲ್ಲಿ ವಾಹನಗಳ ಪ್ರವೇಶಕ್ಕೆ ಯಾವುದೇ ನಿರ್ಬಂಧಗಳಿಲ್ಲ; ಆದರೆ ಫೆಬ್ರವರಿ 2 ಮತ್ತು 3 ರಂದು ವಸಂತ ಪಂಚಮಿಯಂದು ಅಮೃತಸ್ನಾನ ಸಮಯದಲ್ಲಿ ಸಂಚಾರ ನಿರ್ಬಂಧಗಳನ್ನು ಮತ್ತೆ ವಿಧಿಸಲಾಗುತ್ತದೆ. “ವಾಹನ ಪ್ರವೇಶದಲ್ಲಿನ ಈ ಬದಲಾವಣೆಯನ್ನು ಮೌನಿ ಅಮಾವಾಸ್ಯೆ ಸ್ನಾನದ ಸಮಯದಲ್ಲಿ ಮಾಡಲಾಗಿತ್ತು” ಎಂದು ಮಂದೇರ ಸ್ಪಷ್ಟಪಡಿಸಿದರು.

ಮಂದೇರ ಮಾತನ್ನು ಮುಂದುವರಿಸಿ, ಮೇಳ ಪ್ರದೇಶದಲ್ಲಿ ವಾಹನ ಪ್ರವೇಶದ ನಿರ್ವಹಣೆಯನ್ನು ಮೇಳ ಅಧಿಕಾರಿ ಮತ್ತು ಪೊಲೀಸ್ ಮಹಾನಿರ್ದೇಶಕರು ವೈಯಕ್ತಿಕವಾಗಿ ನೋಡಿಕೊಳ್ಳುತ್ತಿದ್ದಾರೆ. ಮಹಾಕುಂಭಮೇಳದ ಪ್ರಮುಖ ಸ್ನಾನದ ದಿನಗಳಾದ ವಸಂತ ಪಂಚಮಿ, ಮಾಘ ಪೌರ್ಣಿಮೆ ಮತ್ತು ಮಹಾಶಿವರಾತ್ರಿಯ ಸಮಯದಲ್ಲಿ ಅತಿ ಗೌರವಾನ್ವಿತ ವ್ಯಕ್ತಿಗಳ ಸಂಚಾರದ ಮೇಲೂ ನಿರ್ಬಂಧಗಳನ್ನು ವಿಧಿಸಲಾಗುವುದು. ಈ ಅವಧಿಯಲ್ಲಿ ಅವರಿಗೆ ವಿಶೇಷ ಸೌಲಭ್ಯಗಳು ಸಿಗುವುದಿಲ್ಲ.