Soros Meeting Bangladesh Govt : ಪಿತೂರಿಗಾರ ಅಮೇರಿಕನ್ ಬಿಲಿಯನೇರ್ ಜಾರ್ಜ್ ಸೊರೊಸ್ ನ ಮಗ ಬಾಂಗ್ಲಾದೇಶಕ್ಕೆ ಹೋಗಿ ಮುಹಮ್ಮದ್ ಯೂನಸ್ ಅವರನ್ನು ಭೇಟಿಯಾದ

ಅಲೆಕ್ಸ್ ಸೊರೊಸ್, ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್

ಢಾಕಾ (ಬಾಂಗ್ಲಾದೇಶ) – ಭಾರತ ವಿರೋಧಿ ನಿತಿಯನ್ನು ಅಳವಡಿಸುವ ಕುಖ್ಯಾತ ಉದ್ಯಮಿ ಜಾರ್ಜ್ ಸೊರೊಸ್ ನ ಮಗ ಅಲೆಕ್ಸ್ ಸೊರೊಸ್, ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರನ್ನು ಭೇಟಿ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಂಗ್ಲಾದೇಶಕ್ಕೆ ಆರ್ಥಿಕ ನೆರವನ್ನು ನಿಷೇಧಿಸಿರುವ ಸಮಯದಲ್ಲಿ ಈ ಸಭೆ ನಡೆಯಿತು. ಅಲೆಕ್ಸ್ ಸೊರೊಸ್ ‘ಓಪನ್ ಸೊಸೈಟಿ ಫೌಂಡೇಶನ್‌’ನ ಅಧ್ಯಕ್ಷರಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಹಮ್ಮದ್ ಯೂನಸ್ ಅಮೆರಿಕಕ್ಕೆ ಹೋದಾಗ, ಅವರು ನ್ಯೂಯಾರ್ಕ್‌ನಲ್ಲಿ ಜಾರ್ಜ್ ಸೊರೊಸ್ ಅವರನ್ನು ಭೇಟಿಯಾಗಿದ್ದರು. ಅಮೆರಿಕದಲ್ಲಿ ಮುಹಮ್ಮದ್ ಯೂನಸ್ ಅವರಿಗೆ ಒಂದು ಗುಂಪು ಬೆಂಬಲ ನೀಡುತ್ತಿದೆ ಮತ್ತು ಅದೇ ಗುಂಪು ಶೇಖ್ ಹಸೀನಾ ಅವರ ಸರರ್ಕಾಕಾರವನ್ನು ಉರುಳಿಸಿದೆ ಎಂದು ಹೇಳಲಾಗುತ್ತದೆ.

ಬಾಂಗ್ಲಾದೇಶದ ಆರ್ಥಿಕ ಸುಧಾರಣೆಗಳ ಕುರಿತು ಚರ್ಚೆ

ಬಾಂಗ್ಲಾದೇಶದಲ್ಲಿ ಅಲೆಕ್ಸ್ ಸೊರೊಸ್ ಅವರನ್ನು ಭೇಟಿಯಾದ ನಂತರ, ಮುಹಮ್ಮದ್ ಯೂನಸ್ ಅವರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ‘ಓಪನ್ ಸೊಸೈಟಿ ಫೌಂಡೇಶನ್ಸ್’ ನಾಯಕತ್ವವು ಮುಖ್ಯ ಮಧ್ಯಂತರ ಸಲಹೆಗಾರರನ್ನು ಭೇಟಿಯಾಗಿ ದೇಶದ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಮತ್ತು ಮಹತ್ವದ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಲು ಬಾಂಗ್ಲಾದೇಶದ ಪ್ರಯತ್ನಗಳ ಕುರಿತು ಚರ್ಚಿಸಿದೆ.

ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ಸಭೆಯಲ್ಲಿ ಮಾಧ್ಯಮ ಸ್ವಾತಂತ್ರ್ಯ, ಆಸ್ತಿ ಮರಳಿ ಪಡೆಯುವುದು, ಹೊಸ ಸೈಬರ್ ಭದ್ರತಾ ಕಾನೂನು ಹಾಗೂ ರೋಹಿಂಗ್ಯಾ ಬಿಕ್ಕಟ್ಟಿನ ಕುರಿತು ಚರ್ಚಿಸಲಾಯಿತು.

‘ಓಪನ್ ಸೊಸೈಟಿ ಫೌಂಡೇಶನ್’ ಅಂದರೆ ಸರಕಾರಗಳನ್ನು ಉರುಳಿಸುವ ಸಂಘಟನೆ !

ಜಾರ್ಜ್ ಸೊರೊಸ್ ಅವರ ‘ಓಪನ್ ಸೊಸೈಟಿ ಫೌಂಡೇಶನ್‌’ ಸಂಘಟನೆಯ ಮೇಲೆ ಪೂರ್ವ ಯುರೋಪ್, ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ ಮತ್ತು ದಕ್ಷಿಣ ಅಮೆರಿಕಾದಾದ್ಯಂತದ ದೇಶಗಳಲ್ಲಿ ಚುನಾಯಿತ ಸರಕಾರಗಳನ್ನು ಉರುಳಿಸಿ ತಮ್ಮದೇ ಆದ ಸರಕಾರಗಳನ್ನು ಸ್ಥಾಪಿಸಿದ ಆರೋಪಗಳನ್ನು ಎದುರಿಸುತ್ತವೆ. ಸೊರೊಸ್ ಫೌಂಡೇಶನ್ ಕೂಡ ಭಾರತದ ವಿರುದ್ಧ ನಿರಂತರವಾಗಿ ಪ್ರಚಾರ ಮಾಡಿದೆ. ಶೇಖ್ ಹಸೀನಾ ಅವರ ಸರಕಾರದ ಪತನಕ್ಕೆ ಈ ಸಂಘಟನೆಯೇ ಕಾರಣ ಎಂದು ತಜ್ಞರ ಅಭಿಪ್ರಾಯವಾಗಿದೆ.

ಮೋದಿ ಸರಕಾರಕ್ಕೆ ಅಗೌರವ  ತೋರುವ ಪ್ರಯತ್ನ

ಮೋದಿ ಸರಕಾರಕ್ಕೆ ಅಗೌರವ ತೋರಲು ಜಾರ್ಜ ಸೊರೊಸ್ ಸಂಘಟನೆಯು ಭಾರತೀಯ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಆರೋಪಿಸಲಾಗಿದೆ. ಜಾರ್ಜ್ ಸೊರೊಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ಹಲವಾರು ಬಾರಿ ಬಹಿರಂಗವಾಗಿ ಟೀಕಿಸಿದ್ದಾರೆ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಭಾರತದಲ್ಲಿ ‘ಓಪನ್ ಸೊಸೈಟಿ ಫೌಂಡೇಶನ್‌’ನ ಕಾರ್ಯಾಚರಣೆಗಳನ್ನು ಸಹ ತನಿಖೆ ಮಾಡಲಾಗುತ್ತಿದೆ.

ಸಂಪಾದಕೀಯ ನಿಲುವು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಂಗ್ಲಾದೇಶಕ್ಕೆ ನೀಡುತ್ತಿದ್ದ ಆರ್ಥಿಕ ಸಹಾಯವನ್ನು ಬಂದ್ ಮಾಡಿದ ತಕ್ಷಣ ಸೊರೊಸ್ ಮಗ ಬಾಂಗ್ಲಾದೇಶಕ್ಕೆ ತಲುಪುತ್ತಾನೆ, ಇದು ಬಾಂಗ್ಲಾದೇಶದಲ್ಲಿ ಇಲ್ಲಿಯವರೆಗೆ ಉಂಟಾದ ಗಲಭೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ! ಅಧ್ಯಕ್ಷ ಟ್ರಂಪ್ ಭಾರತ ವಿರೋಧಿ ಸೊರೊಸ್ ಅನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆಯೇ ಮತ್ತು ಭಾರತ ಅದಕ್ಕೆ ಕೊಡುಗೆ ನೀಡುತ್ತದೆಯೇ ?