ಭಾರತ ಮತ್ತು ನೇಪಾಳ ಸಹಿತ ಸಂಪೂರ್ಣ ಜಗತ್ತಿನಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸೋಣ ! – ಹಿರಿಯ ಹಿಂದುತ್ವನಿಷ್ಠ ನಾಯಕ ಶ್ರೀ. ಶಂಕರ್ ಖರಾಲ, ನೇಪಾಳ

ಶ್ರೀ. ಶಂಕರ್ ಖರಾಲ

ಪ್ರಯಾಗರಾಜ, ಜನವರಿ ೨೯ (ಸುದ್ಧಿ) – ಭಾರತ ಮತ್ತು ನೇಪಾಳ ಸಹಿತ ಸಂಪೂರ್ಣ ಜಗತ್ತಿನಲ್ಲಿ ಹಿಂದೂ ರಾಷ್ಟ್ರ ಸ್ಥಾಪಿಸೋಣ. ಹಿಂದೂಗಳು ಹುಲಿಗಳಾಗಿದ್ದಾರೆ, ಎಚ್ಚರಗೊಳ್ಳುವ ಸಮಯ ಬಂದಿದೆ. ಈಗ ಎಚ್ಚೆತ್ತುಕೊಂಡರೆ ಹಿಂದೂರಾಷ್ಟ್ರ ಬರುತ್ತದೆ ಎಂದು ನೇಪಾಳದ ಹಿರಿಯ ಹಿಂದುತ್ವನಿಷ್ಠ ನಾಯಕ ಶ್ರೀ. ಶಂಕರ ಖರಾಲ ಇವರು ಪ್ರತಿಪಾದಿಸಿದರು.

ಜನವರಿ ೨೮ ರಂದು, ಶ್ರೀ. ಶಂಕರ ಖರಾಲ್ ತಮ್ಮ ಸಹೋದ್ಯೋಗಿಗಳೊಂದಿಗೆ ಕುಂಭ ಕ್ಷೇತ್ರದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಗ್ರಂಥ ಪ್ರದರ್ಶನಕ್ಕೆ ಭೇಟಿ ನೀಡಿದರು. ಆ ಸಮಯದಲ್ಲಿ, ದೈನಿಕ ’ಸನಾತನ ಪ್ರಭಾತ’ನ ವಿಶೇಷ ವರದಿಗಾರರಾದ ಶ್ರೀ. ನೀಲೇಶ ಕುಲಕರ್ಣಿ ಇವರು ಸಂದರ್ಶನ ಪಡೆದರು. ಈ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಇದಕ್ಕೂ ಮೊದಲು, ಪ್ರದರ್ಶನವನ್ನು ವೀಕ್ಷಿಸಿದ ನಂತರ, ಶ್ರೀ. ಖರಾಲ್ ಅವರು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆಯವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಸಂವಾದ ನಡೆಸಿದೆ. ಆ ಸಮಯದಲ್ಲಿ, ಶ್ರೀ. ಖರಾಲ್ ಇವರು ಸದ್ಗುರು ಡಾ. ಪಿಂಗಳೆ ಇವರ ಸನ್ಮಾನ ಮಾಡಲಾಯಿತು.

ವಿವಿಧ ಪ್ರಶ್ನೆಗಳಿಗೆ ಉತ್ತರಿಸುವಾಗ, ಶ್ರೀ. ಶಂಕರ್ ಖರಾಲ್ ಇವರು,

೧. ಮಹಾರಾಷ್ಟ್ರದಲ್ಲಿ ಗೋಹತ್ಯೆಯನ್ನು ನಿಷೇಧಿಸಿದ್ದಕ್ಕಾಗಿ ನಾನು ಸರಕಾರವನ್ನು ಅಭಿನಂದಿಸುತ್ತೇನೆ. ಈಗ, ಶೀಘ್ರದಲ್ಲೇ ಉತ್ತರಾಖಂಡದಲ್ಲಿಯೂ ಗೋಹತ್ಯೆ ನಿಷೇಧಿಸಲಾಗುವುದು ಮತ್ತು ಭಾರತದಾದ್ಯಂತ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲಾಗುವುದು.
೨. ನಾವು ಪ್ರಸ್ತುತ ಆಂಗ್ಲ ಕ್ಯಾಲೆಂಡರನ್ನು ಅನುಸರಿಸುತ್ತಿದ್ದೇವೆ. ನಿಜವಾಗಿ ನಾವು ಹಿಂದೂ ಪಂಚಾಂಗವನ್ನು ಅನುಸರಿಸಬೇಕು. ತಿಥಿ, ಅಮವಾಸ್ಯೆ, ಹುಣ್ಣಿಮೆ ಇವು ನಮ್ಮ ಕಾಲಗಣನೆಯಾಗಿದೆ.
೩. ದೇಶಕ್ಕೆ ಗಡಿಗಳಿರುತ್ತವೆ, ಧರ್ಮಕ್ಕೆ ಇಲ್ಲ. ಜಗತ್ತಿನ ಹಿಂದೂಗಳಿ ಎಲ್ಲೇ ಹೋದರೂ, ಅವರು ತಮ್ಮವರು ಎಂದು ಅನಿಸುತ್ತದೆ. ತೀರ್ಥಕ್ಷೇತ್ರವು ಯಾವುದೇ ದೇಶಕ್ಕೆ ಸೇರಿಲ್ಲ, ಬದಲಿಗೆ ಮಾನವೀಯತೆಯ ಕಲ್ಯಾಣಕ್ಕಾಗಿ ಇರುತ್ತದೆ.
೪. ಅದೇ ರೀತಿ, ಈ ಕುಂಭಮೇಳವೂ ನಮ್ಮದೇ ಆಗಿದೆ. ಇದಕ್ಕಾಗಿ ನೇಪಾಳದಿಂದ ಅನೇಕ ಹಿಂದೂಗಳು ಈ ಕುಂಭ ಪ್ರದೇಶಕ್ಕೆ ಬರುತ್ತಿದ್ದಾರೆ. ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಿದ್ದಾರೆ. ಈ ಸ್ನಾನದಿಂದ ಮನಸ್ಸು ಮತ್ತು ಬುದ್ಧಿಯ ಮೇಲಿನ ಆವರಣವು ದೂರವಾಗುತ್ತದೆ. ಮನಸ್ಸು ಶುದ್ಧವಾಗುತ್ತದೆ ಮತ್ತು ಪುಣ್ಯ ಸಿಗುತ್ತದೆ.
೫. ನೇಪಾಳ ಹಿಂದೂ ರಾಷ್ಟ್ರವಾಗಿತ್ತು; ಆದರೆ ಕೆಲವು ವಿದೇಶಗಳು ಪಿತೂರಿ ನಡೆಸಿದವು. ೨೦೧೮ ರಲ್ಲಿ ಜನಗಣತಿ ನಡೆಸಿದಾಗ, ಶೇಕಡಾ ೮೧ ರಷ್ಟು ಹಿಂದೂಗಳಾಗಿದ್ದರು. ನೇಪಾಳ ಹಿಂದೂ ರಾಷ್ಟ್ರದತ್ತ ಸಾಗುತ್ತಿದೆ.
೬. ನೇಪಾಳದ ಜನರು ಹಿಂದೂ ರಾಷ್ಟ್ರವನ್ನು ಬೇಡಿಕೆ ಇಡುತ್ತಿದ್ದಾರೆ. ಅವರಿಗೆ ಹಿಂದೂ ರಾಷ್ಟ್ರ ಬೇಕಿದೆ. ಅವರು ಎಂದಿಗೂ ಹಿಂದೂ ರಾಷ್ಟ್ರವನ್ನು ವಿರೋಧಿಸಲಿಲ್ಲ ಅಥವಾ ಜಾತ್ಯತೀತ ರಾಷ್ಟ್ರದ ಬೇಡಿಕೆ ಮಾಡಿಲ್ಲ. ಹಿಂದೂಗಳ ಅಜ್ಞಾನದ ಲಾಭ ಪಡೆದು ಕ್ರೈಸ್ತರು ಅವರ ಮೇಲೆ ಪ್ರಭಾವ ಬೀರಿ ಮತಾಂತರ ಮಾಡಿದ್ದಾರೆ.