ಹಿಂದೂ ಸಮಾಜವು ಪಾಕಿಸ್ತಾನಿ ಹಿಂದೂಗಳಿಗಾಗಿ ಮುಂದೆ ಬರಬೇಕು ! – ಡಾ. ಓಮೇಂದ್ರ ರತ್ನು ಪಾಕಿಸ್ತಾನಿ ಹಿಂದೂಗಳಿಗಾಗಿ ಹೋರಾಡುವ ಹಿಂದುತ್ವನಿಷ್ಠ

  • ‘ನಿರಾಶ್ರಿತ ಹಿಂದೂ ಪುನರ್ವಸತಿ ಬೋರ್ಡ್’ ಸ್ಥಾಪಿಸುವಂತೆ ಬೇಡಿಕೆ

  • ಡಾ. ಓಮೇಂದ್ರ ರತ್ನು ಪಾಕಿಸ್ತಾನಿ ಹಿಂದೂಗಳಿಗಾಗಿ ಹೋರಾಡುವ ಹಿಂದುತ್ವನಿಷ್ಠ

ಶ್ರೀ. ಯಜ್ಞೇಶ ಸಾವಂತ ಮತ್ತು ಶ್ರೀ. ಕೇತನ ಪಾಟೀಲ, ವಿಶೇಷ ಪ್ರತಿನಿಧಿ, ಪ್ರಯಾಗರಾಜ

ಪ್ರಯಾಗರಾಜ, ಜನವರಿ 30 (ಸುದ್ದಿ) – ಕ್ರಿಕೆಟ್ ಮತ್ತು ಬಾಲಿವುಡ್ (ಹಿಂದಿ ಚಲನಚಿತ್ರ ರಂಗ) ಇಂತಹ ವಿಷಯಗಳಲ್ಲಿ ಮುಳುಗಿರುವ ಹಿಂದೂ ಸಮಾಜವು ಬಲಾತ್ಕಾರಕ್ಕೊಳಗಾದ ಹಿಂದೂ ಹುಡುಗಿಯರ ಬಗ್ಗೆ ಎಷ್ಟು ಮುಂದಾಳತ್ವ ವಹಿಸುತ್ತದೆ ? ಇಂದು ಪಾಕಿಸ್ತಾನದಲ್ಲಿ 1 ಕೋಟಿ ಹಿಂದೂ ಸಮಾಜ ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಪಾಕಿಸ್ತಾನಿ ಹಿಂದೂಗಳಿಗೆ ವೀಸಾಗಳು ಸಿಗುವುದಿಲ್ಲ (ದೇಶದಲ್ಲಿ ಉಳಿಯಲು ಅನುಮತಿ). ಸಾಧ್ಯವಾದಷ್ಟು ಹಿಂದೂಗಳನ್ನು ಮರಳಿ ಕರೆತರುವುದೇ, ನಮ್ಮ ಸಾಧನೆಯಾಗಿದೆಯೆಂದು ನಾವು ನಿರ್ಧರಿಸಿದ್ದೇವೆ. ಹಿಂದೂ ಸಮಾಜವು ಪಾಕಿಸ್ತಾನಿ ಹಿಂದೂಗಳಿಗಾಗಿ ಮುಂದೆ ಬರಬೇಕು ಎಂದು ಸ್ಪಷ್ಟವಾಗಿ  ‘ನಿಮಿತ್ತೇಕಮ್’ ಸಂಸ್ಥೆಯ ಡಾ. ಓಮೇಂದ್ರ ರತ್ನು ಹೇಳಿಕೆ ನೀಡಿದರು. ‘ಸನಾತನ ಪ್ರಭಾತ’ ಜೊತೆ ಮಾತನಾಡುತ್ತಾ, ಅವರು ಪಾಕಿಸ್ತಾನಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮತ್ತು ಭಾರತದಲ್ಲಿರುವ ಹಿಂದೂಗಳಿಗೆ ಸಹಾಯ ಮಾಡುವಂತೆ ಕರೆ ನೀಡಿದರು.

ಶ್ರೀ. ಓಮೇಂದ್ರ ರತ್ನು ಮಾತು ಮುಂದುವರೆಸಿ,

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗಾಗಿ ‘ನಿರಾಶ್ರಿತ ಹಿಂದೂ ಪುನರ್ವಸತಿ ಬೋರ್ಡ್’ಯನ್ನು ಸ್ಥಾಪಿಸಬೇಕು!

ಸಿಎಎ ಕಾನೂನನ್ನು ಸ್ವಾಗತಿಸುತ್ತೇವೆ; ಆದರೆ ಆ ಕಾನೂನಿನ ಪೂರ್ಣ ಲಾಭ 2025 ರವರೆಗೆ ಆಗಲಿಲ್ಲ. 2014 ರ ನಂತರ ಸಿಲುಕಿಕೊಂಡ ಹಿಂದೂಗಳ ಬಗ್ಗೆ ಏನು ? ಇದು ಪ್ರಶ್ನೆಯಾಗಿಯೇ ಉಳಿದಿದೆ. ಕಾನೂನಿನಲ್ಲಿ ಕಾಲಮಿತಿಯನ್ನು ವಿಧಿಸದೇ ಇರುವುದು ಆವಶ್ಯಕವಾಗಿತ್ತು. ಪಾಕಿಸ್ತಾನದಲ್ಲಿರುವ ಹಿಂದೂಗಳು ಭಿಲ್ಲರು, ಕೋಳಿ, ಮೇಘವಾಯಿಗಳು ಮತ್ತು ಪೂರ್ವ ರಜಪೂತರು ಮುಂತಾದ ವಿವಿಧ ಸಮಾಜಗಳಿಂದ ಬರುತ್ತಾರೆ.  ಭಾರತದಲ್ಲಿ ಅವರ ಸಮಾಜದ ಜನರು ಉತ್ತಮ ಸ್ಥಿತಿಯಲ್ಲಿದ್ದಾರೆ; ಆದ್ದರಿಂದ ಅವರಿಗೆ ಇಂದು ಸಹಾಯ ಮಾಡಬಹುದು. ಪಾಕಿಸ್ತಾನದಲ್ಲಿರುವ 1 ಕೋಟಿ ಹಿಂದೂಗಳು ಮತ್ತು ಬಾಂಗ್ಲಾದೇಶದಲ್ಲಿರುವ 2 ಕೋಟಿ ಹಿಂದೂಗಳಿಗಾಗಿ ‘ಹಿಂದೂ ಪುನರ್ವಸತಿ ಬೋರ್ಡ್’ಯಂತಹ ಬೋರ್ಡ್ಅನ್ನು ಸ್ಥಾಪನೆಯಾಗಬೇಕು. ಈ ಬೋರ್ಡ್ ನ ಮೂಲಕ, ಪಾಕಿಸ್ತಾನಿ ಮತ್ತು ಬಾಂಗ್ಲಾದೇಶದ ಹಿಂದೂಗಳಿಗೆ ಭಾರತದಲ್ಲಿ ಸ್ಥಳಗಳನ್ನು ಒದಗಿಸುವುದು ಮತ್ತು ಅವರ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವಂತಹ ಕೆಲಸಗಳನ್ನು ಮಾಡಬಹುದು.

ಪಾಕಿಸ್ತಾನಿ ಅಥವಾ ಬಾಂಗ್ಲಾದೇಶದ ಹಿಂದೂಗಳನ್ನು ಉಳಿಸದಿದ್ದರೆ, ನಾಳೆ ಭಾರತದಲ್ಲೂ ಅದೇ ಪರಿಸ್ಥಿತಿ ಉದ್ಭವಿಸಬಹುದು!

ಪಾಕಿಸ್ತಾನದ ಹಿಂದೂಗಳ ಗ್ರಾಮಗಳು ಸಂಪೂರ್ಣ ಮುಸ್ಲಿಮ ಆಗುತ್ತಿವೆ. ಭಾರತದಲ್ಲಿರುವ ಹಿಂದೂಗಳ ಪರಿಸ್ಥಿತಿಯೂ ಭೀಕರವಾಗಿದೆ ಎಂದು ತಿಳಿದಾಗ ಪಾಕಿಸ್ತಾನದಲ್ಲಿರುವ ಹಿಂದೂಗಳು ಏನು ಮಾಡಬೇಕು ? “ಈ ಕಾಫಿರರನ್ನು ತೆಗೆಯಿರಿ ಮತ್ತು ಪಾಕಿಸ್ತಾನದ ಹೆಸರನ್ನು ಹಾಳು ಮಾಡಬೇಡಿರಿ” ಎಂದು ಐಎಸ್ಐನಂತಹ ಸಂಘಟನೆಗಳು ನಮಗೆ ಬೆದರಿಕೆ ಹಾಕುತ್ತವೆ. ಹಿಂದೂ ಸಮಾಜ, ಹಿಂದೂ ಸಂಘಟನೆಗಳು ಮತ್ತು ಹಿಂದೂ ಸಾಧು-ಸಂತರು ಪಾಕಿಸ್ತಾನಿ ಮತ್ತು ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ಕಡಿಮೆ ಸಂವೇದನೆ  ಹೊಂದಿದ್ದಾರೆಯೇ ? ಎನ್ನುವ ಪ್ರಶ್ನೆಯೇಳುತ್ತದೆ.

ಆಡಳಿತಾತ್ಮಕ ತೊಂದರೆಗಳಿಂದಾಗಿ ಪಾಕಿಸ್ತಾನಿ ಹಿಂದೂಗಳನ್ನು ರಕ್ಷಿಸುವುದು ಕಷ್ಟಕರವಾಗುತ್ತಿದೆ !

ಸೋನಿಯಾ ಗಾಂಧಿ ಒಂದು ಕಾನೂನನ್ನು ತಂದಿದ್ದರು. ಇದರಲ್ಲಿ ವೀಸಾಗೆ ಅರ್ಜಿ ಸಲ್ಲಿಸುವಾಗ, ಅದು ಸರಕಾರ ನೇಮಿಸಲ್ಪಟ್ಟ ಅಧಿಕಾರಿ (ಗೆಜೆಟೆಡ್ ಅಧಿಕಾರಿ) ಸಹಿ ಮಾಡಬೇಕಾಗುತ್ತದೆ. ಹಿಂದೆ ಆನ್ಲೈನ್ ವಿಧಾನವಿತ್ತು, ಆದರೆ ಈಗ ಲಿಖಿತ ಪತ್ರವನ್ನು ಸಲ್ಲಿಸಬೇಕಾಗಿದೆ. ಈ ಪತ್ರ ನೇರವಾಗಿ ಪಾಕಿಸ್ತಾನಕ್ಕೆ ಹೇಗೆ ಹೋಗುತ್ತದೆ? ಇದಕ್ಕಾಗಿ, ಅರ್ಜಿಯನ್ನು ಮೊದಲು ದುಬೈಗೆ ಮತ್ತು ನಂತರ ದುಬೈನಿಂದ ಪಾಕಿಸ್ತಾನಕ್ಕೆ ಕಳುಹಿಸಬೇಕಾಗುತ್ತದೆ. ಸರಕಾರದ ಬಳಿ ನಾನು ಈ ಕಾನೂನನ್ನು ತಿದ್ದುಪಡಿ ಮಾಡಬೇಕೆಂದು ವಿನಂತಿಸುತ್ತೇನೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ, ಕೇವಲ 30-40 ಸಾವಿರ ಹಿಂದೂಗಳು ಮಾತ್ರ ಈ ಕಾನೂನಿನಿಂದ ಪ್ರಯೋಜನ ಪಡೆಯುತ್ತಾರೆ; ಆದರೆ ಡಿಸೆಂಬರ್ 31, 2014 ರ ನಂತರ ಇರುವ ಹಿಂದೂಗಳ ಬಗ್ಗೆ ಏನು ? ಆಡಳಿತವು ಈ ನಿಟ್ಟಿನಲ್ಲಿ ಹೆಚ್ಚಿನ ಸಹಾಯವನ್ನು ನೀಡಬೇಕು.