ಪ್ರಯಾಗರಾಜ್ ಕುಂಭಮೇಳ 2025
ಪ್ರಯಾಗರಾಜ್ – ಮಹಾಕುಂಭ ಮೇಳದ ಸಂದರ್ಭದಲ್ಲಿ ಇಂಡಿಗೋ ಏರ್‌ಲೈನ್ಸ್ ಪ್ರಯಾಗ್‌ರಾಜ್‌ಗೆ ವಿಮಾನಗಳ ದರ ಹೆಚ್ಚಳವನ್ನು ಶೇಕಡಾ 30 ರಿಂದ 50 ರಷ್ಟು ಕಡಿಮೆ ಮಾಡಿದೆ. ಎಲ್ಲಾ ಸಂಸ್ಥೆಗಳು ವಿಮಾನ ದರಗಳನ್ನು ತೀವ್ರವಾಗಿ ಹೆಚ್ಚಿಸಿದ್ದವು. ಚೆನ್ನೈ-ಪ್ರಯಾಗ್‌ರಾಜ್ ಮತ್ತು ಪ್ರಯಾಗ್‌ರಾಜ್-ಚೆನ್ನೈ ವಿಮಾನಗಳ ದರ ಸುಮಾರು 1.25 ಲಕ್ಷ ರೂಪಾಯಿ ತಲುಪಿತ್ತು. ಬೇಡಿಕೆ ಹೆಚ್ಚಾದ ಕಾರಣ ಬೆಲೆ ಏರಿಕೆಯಾಗಿದೆ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟೀಕರಣ ನೀಡಿತ್ತು. ವಿಮಾನಯಾನ ಸಂಸ್ಥೆಯ ಮನಬಂದಂತೆ ನಿರ್ವಹಣೆಯಿಂದ ಭಕ್ತರಲ್ಲಿ ಆಕ್ರೋಶದ ಅಲೆ ಉಂಟುಮಾಡಿತ್ತು. ನಂತರ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ, ಪ್ರಯಾಗರಾಜ್‌ಗೆ ಟಿಕೆಟ್ ಬೆಲೆಗಳನ್ನು ಸಮಂಜಸವಾಗಿಡಲು ವಿಮಾನಯಾನ ಸಂಸ್ಥೆಗಳನ್ನು ಕೇಳಿತು. ಬಳಿಕ ಇಂಡಿಗೋ ಕೂಡ ಪ್ರಯಾಣ ದರವನ್ನು ಕಡಿತಗೊಳಿಸಿದೆ. ಪ್ರಸ್ತುತ, ಇಂಡಿಗೋದ ದೆಹಲಿಯಿಂದ ಪ್ರಯಾಗರಾಜ್‌ಗೆ ದರ 13 ಸಾವಿರದ 513 ರೂಪಾಯಿ, ಮುಂಬಯಿಯಿಂದ ಪ್ರಯಾಗರಾಜ್‌ಗೆ ದರ 20 ಸಾವಿರದ 606 ರೂಪಾಯಿಗಳೆಂದು ಹೇಳಲಾಗುತ್ತಿದೆ.