ಪ್ರಯಾಗರಾಜ ಕುಂಭಮೇಳ 2025
ಪ್ರಯಾಗರಾಜ – ದೇಶದ ಪ್ರಗತಿಯಾದರೆ ಸಂಪೂರ್ಣ ಜಗತ್ತು ನಮ್ಮಕಡೆ ಸೆಳೆಯಲ್ಪಡುತ್ತದೆ. ಅದಕ್ಕಾಗಿ ನಾವೆಲ್ಲರೂ ದೇಶವನ್ನು ಒಂದು ಸಾಮರ್ಥ್ಯಶಾಲಿ ರಾಷ್ಟ್ರವನ್ನಾಗಿಸಲು ಪ್ರಯತ್ನಿಸುವುದು ಆವಶ್ಯಕವಾಗಿದೆ, ಎಂದು ರಾಜಸ್ಥಾನದ ಭಾಜಪದ ಶಾಸಕ ಹಾಗೂ ಗೋರಕ್ಷನಾಥ ಆಖಾಡಾಸ ಮಹಂತ ಬಾಲಕನಾಥ ಯೋಗಿ ಇವರು ಹೇಳಿದರು. ಸನಾತನ ಪ್ರಭಾತದ ಪತ್ರಕರ್ತರು ತೆಗೆದುಕೊಂಡ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರೂ ಕೂಡ ಗೋರಕ್ಷನಾಥ ಆಖಾಡಾದವರಾಗಿದ್ದಾರೆ. ಮಹಂತ ಬಾಲಕನಾಥ ಯೋಗಿ ಇವರು ರಾಜಸ್ಥಾನದ ತಿಜಾರಾ ಚುನಾವಣಾ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿದ್ದಾರೆ.
ಅವರು ತಮ್ಮ ಮಾತು ಮುಂದುವರೆಸಿ, 144 ವರ್ಷಗಳ ನಂತರ ಬಂದಿರುವ ಮಹಾಕುಂಬ ಮೇಳವನ್ನು ಅನುಭವಿಸುತ್ತಿದ್ದರಿಂದ ನಾನು ನನ್ನನ್ನು ಭಾಗ್ಯವಂತ ಎಂದು ಭಾವಿಸುತ್ತೇನೆ. ಸಂತ ಪರಂಪರೆಯಲ್ಲಿ ದೀಕ್ಷೆಯನ್ನು ಪಡೆದಿದ್ದರಿಂದ ನಾನು ಪ್ರತಿಯೊಬ್ಬರಲ್ಲಿ ಈಶ್ವರನನ್ನು ನೋಡುತ್ತೇನೆ; ಆದರೆ ಹಿಂದೂಗಳ ಪವಿತ್ರ ಮೇಳದಲ್ಲಿ ಕೆಲವು ಅಧರ್ಮಿಯರು ಅಗೌರವ ತೋರುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ವಿಷಯವನ್ನು ಆಳದ ವರೆಗೆ ಹೋದಾಗ ಅಲ್ಲಿ ಸನಾತನ ಧರ್ಮವೇ ಇದೆ ಎಮಬುದು ಗಮನಕ್ಕೆ ಬರುತ್ತದೆ. ಇದೆಲ್ಲವು ಇತರರಿಗೆ ತಿಳಿಯಬಾರದೆಂದು ಕೆಲವು ಇತರ ಧರ್ಮದವರು ಮಹಾಕುಂಭ ಮೇಳವನ್ನು ಅಗೌರವ ತೋರುವ ಪ್ರಯತ್ನ ಅಮಡುತ್ತಿದ್ದಾರೆ’, ಎಂದು ಹೇಳಿದರು.