ಪ್ರಯಾಗರಾಜ ಕುಂಭಮೇಳ 2025
ಪ್ರಯಾಗರಾಜ, ಜನವರಿ 25 (ಸುದ್ಧಿ.) – ಕುಂಭಕ್ಷೇತ್ರದಲ್ಲಿರುವ ಸನಾತನ ಸಂಸ್ಥೆಯ ಪ್ರದಶ್ನಕ್ಕೆ ಬಂದನಂತರ ನನಗೆ, ಸನಾತನವು ಪಾಲಘರ ಹತ್ಯಾಕಾಂಡದ ಕುರಿತು ಫಲಕವನ್ನು ನಿರ್ಮಿಸಿ ಅದರ ಬಗ್ಗೆ ಜಾಗೃತಿ ಮಾಡುವ ಕಾರ್ಯ ಕೈಗೆತ್ತಿಕೊಂಡಿದೆ. ಅದರೊಂದಿಗೆ ಸನಾತನ ಸಂಸ್ಥೆಯ ವತಿಯಿಂದ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯ ಕಳೆದ 25 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಹಿಂದೂ ಆಚಾರಸಂಹಿತೆ, ಹಿಂದುತ್ವಗಳ ಬಗ್ಗೆ ಈ ಸಂಸ್ಥೆ ಸಂಪೂರ್ಣವಾಗಿ ಸಮರ್ಪಿಸಿಕೊಮಡಿದೆ, ಇದನ್ನು ನೋಡಿ ನನಗೆ ಆನಂದ ಆಯಿತು. ಸನಾತನ ಧರ್ಮದ ಬಗ್ಗೆ ಕಾರ್ಯ ಮಾಡುವ ಸನಾತನ ಸಂಸ್ಥೆಯು ಒಂದು ಯೋಧವಾಗಿದೆ, ಎಂದು ಡಾ. ಸಮಪನಾ ಮಿಶ್ರಾ ಇವರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಸನಾತನ ಸಂಸ್ಥೆಯು ಸೆಕ್ಟರ್ 9 ರಲ್ಲಿ ಹಾಕಲಾಗಿದ್ದ ಪ್ರದಶ್ನ ಕಕ್ಷೆಗೆ ಅವರು ಭೇಟಿ ನೀಡಿದರು. ಆ ಸಮಯದಲ್ಲಿ ಅವರು ಸನಾತನ ಕಾರ್ಯವನ್ನು ಶ್ಲಾಘಿಸಿದರು.
ಸಂತ ಕಲ್ಪವೃಕ್ಷ ಗಿರಿಜಿ ಮಹಾರಾಜರು ಅವರು ಯಾರು ?2020ರಲ್ಲಿ ಮಹಾರಾಷ್ಟ್ರದ ಪಾಲಘರ ಜಿಲ್ಲೆಯಲ್ಲಿ ಹಿಂಸಾತ್ಮಕ ಸಮೂಹವು 3 ಸಂತರ ಹತ್ಯೆ ಮಾಡಿದ್ದರು. ಅದರಲ್ಲಿ ಸಂತ ಕಲ್ಪವೃಕ್ಷ ಗಿರಿಜಿ ಮಾಹಾರಾಜರೂ ಒಬ್ಬರಾಗಿದ್ದರು. |
ಸಂತ ಕಲ್ಪವೃಕ್ಷ ಗಿರಿಜಿ ಮಹಾರಾಜರ ಸ್ಮರಣಾರ್ಥ ಪಾಲಘರ್‌ನಲ್ಲಿ ಸ್ಮಾರಕವನ್ನು ನಿರ್ಮಿಸಬೇಕು !ಡಾ. ಸಪನಾ ಮಿಶ್ರಾ ತಮ್ಮ ಮಾತನ್ನು ಮುಂದುವರೆಸಿ, ಏಪ್ರಿಲ್ 16, 2020 ರಂದು ಪಾಲಘರ್‌ನಲ್ಲಿ ಸಂತ ಕಲ್ಪವೃಕ್ಷ ಗಿರಿಜಿ ಮಹಾರಾಜ್ ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು. ಕೇಂದ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಿದ್ದಕ್ಕಾಗಿ ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಭಾರತದ ಎಲ್ಲಾ ಸಾಧು-ಸಂತರು ಮತ್ತು ಮಹಾರಾಷ್ಟ್ರ ಸರಕಾರವು ಸಂತ ಕಲ್ಪವೃಕ್ಷ ಗಿರಿಜಿ ಮಹಾರಾಜ್ ಅವರಿಗೆ ನ್ಯಾಯ ಒದಗಿಸಬೇಕು, ಪಾಲಘರ್‌ನಲ್ಲಿ ಅವರ ಸ್ಮರಣಾರ್ಥ ಸ್ಮಾರಕವನ್ನು ನಿರ್ಮಿಸಬೇಕು ಮತ್ತು ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ ಚಾಲಕನ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ನಾನು ವಿನಂತಿಸುತ್ತೇನೆ. |