ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಸಂವಿಧಾನದ ಪ್ರತಿಗಳಲ್ಲಿ ಸೇರಿಸಿರಿ !

ಪ್ರಯಾಗರಾಜ ಕುಂಭಮೇಳ 2025

  • ಮಹಾಕುಂಭ ಕ್ಷೇತ್ರದಲ್ಲಿ ಸನಾತನ ಗ್ರಂಥ ಪ್ರದರ್ಶನಕ್ಕೆ ಸಂತರು ಮತ್ತು ಮಹಂತರ ಭೇಟಿ

  • ರಾಜಸ್ಥಾನದ ನಿರಂಜನಿ ಆಖಾಡದ ಮಹಂತ ಸ್ವಾಮಿ ವಿಮರ್ಶಾನಂದಗಿರಿ ಮಹಾರಾಜರ ಬೇಡಿಕೆ

  • ಸಂವಿಧಾನ ಸಭೆಯು ಮೂಲ ಸಂವಿಧಾನದಲ್ಲಿ ಚಿತ್ರಗಳನ್ನು ಸೇರಿಸಿದೆ !

ಪ್ರಯಾಗರಾಜ, ಜನವರಿ 27 (ಸುದ್ದಿ) – ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಮೂಲ ಸಂವಿಧಾನದಲ್ಲಿ ಸೇರಿಸಲಾಗಿದೆ; ಆದರೆ ಅವುಗಳನ್ನು ವಿತರಿಸಲಾಗುತ್ತಿರುವ ಪ್ರತಿಗಳಲ್ಲಿ ಸೇರಿಸಲಾಗಿಲ್ಲ. ಇದನ್ನು ಮಾಡಬೇಕೆಂದು ರಾಜಸ್ಥಾನದ ನಿರಂಜನಿ ಆಖಾಡ ಮತ್ತು ಬಿಕಾನೇರ್ (ರಾಜಸ್ಥಾನ)ದ ಶಿವಮಠ ಶಿವಬಾಡಿಯ ಶ್ರೀ ಲಾಲೇಶ್ವರ ಮಹಾದೇವ ದೇವಸ್ಥಾನದ ಮಹಂತ ಸ್ವಾಮಿ ವಿಮರ್ಶಾನಂದಗಿರಿ ಮಹಾರಾಜರು ಒತ್ತಾಯಿಸಿದ್ದಾರೆ. ಸ್ವಾಮೀಜಿಯವರು ಜನವರಿ 26, 2025 ರಂದು ಕುಂಭ ಕ್ಷೇತ್ರದ ಮೋರಿ ಮಾರ್ಗದಲ್ಲಿ ಸನಾತನ ಸಂಸ್ಥೆ ಆಯೋಜಿಸಿದ್ದ ಗ್ರಂಥ ಮತ್ತು ಫಲಕ ಪ್ರದರ್ಶನಕ್ಕೆ ಭೇಟಿ ನೀಡಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.

ಸ್ವಾಮೀಜಿ ಮಾತು ಮುಂದುವರೆಸಿ,

1. ವೇದಗಳು ಇಡೀ ವಿಶ್ವದ ಸಂವಿಧಾನವಾಗಿದೆ. ನಮ್ಮ ಸಂವಿಧಾನ ಸಭೆಯು ಭಾರತೀಯರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನು ರಚಿಸಿದೆ. ಮೂಲ ಸಂವಿಧಾನದಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ 22 ವಿಭಿನ್ನ ಚಿತ್ರಗಳನ್ನು ಸೇರಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಈ ಚಿತ್ರಗಳಲ್ಲಿ ಭಗವಾನ ನಟರಾಜ, ಶ್ರೀ ಹನುಮಾನ, ಅರ್ಜುನ, ಗಂಗಾ ನದಿಯ ಇಳಿಯುವಿಕೆ, ಶ್ರೀ ರಾಮನ ಲಂಕಾ ವಿಜಯ ಇತ್ಯಾದಿ ಚಿತ್ರಗಳು ಸೇರಿವೆ.

2. ಸಂವಿಧಾನ ಸಭೆಯ ಎಲ್ಲಾ ಸದಸ್ಯರ ಉದ್ದೇಶ ಭಾರತೀಯರ ಭಾವನೆಗಳನ್ನು ಗೌರವಿಸುವುದಾಗಿತ್ತು. ಆದಾಗ್ಯೂ, ಕಳೆದ 50 ವರ್ಷಗಳಿಂದ, ಈ ಚಿತ್ರಗಳು ವಿತರಿಸಲಾಗುತ್ತಿರುವ ಸಂವಿಧಾನದ ಪ್ರತಿಗಳಲ್ಲಿ ಕಂಡು ಬರುತ್ತಿಲ್ಲ. ಆದಾಗ್ಯೂ, ಈ ಚಿತ್ರಗಳು ಮೂಲ ಸಂವಿಧಾನದಲ್ಲಿ ಹಾಗೂ ಜಾಲತಾಣಗಳಲ್ಲಿಯೂ ಲಭ್ಯವಿದೆ.

3. ಮೂಲ ಸಂವಿಧಾನದಲ್ಲಿರುವ ದೇವತೆಗಳು, ಭಾರತೀಯ ಸಂಸ್ಕೃತಿ ಹಾಗೂ ಧಾರ್ಮಿಕ, ಪೌರಾಣಿಕ ಮತ್ತು ಐತಿಹಾಸಿಕ ಘಟನೆಗಳ ಸಂದರ್ಭದ ಚಿತ್ರಗಳನ್ನು ಸಮಾಜದ ಎದುರಿಗೆ ತರುವುದು ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳ ಜವಾಬ್ದಾರಿಯಾಗಿದೆ. ಇಷ್ಟು ಮಾತ್ರವಲ್ಲದೆ, ಅದನ್ನು ಪ್ರಚಾರ- ಪ್ರಸಾರವನ್ನು ಕೂಡ ಮಾಡಬೇಕು. ನಾವು ಹೀಗೆ ಮಾಡಿದರೆ, ಭಾರತವು ಹಿಂದೂ ರಾಷ್ಟ್ರವಾಗುತ್ತದೆ, ಅಖಂಡ ರಾಷ್ಟ್ರವಾಗುತ್ತದೆ. ಈ ಚಿತ್ರಗಳು ಸನಾತನ ರಾಷ್ಟ್ರದ ಪ್ರತಿಬಿಂಬವಾಗಿರುವುದರಿಂದ, ಅವುಗಳನ್ನು ಸಂವಿಧಾನದ ಪ್ರತಿಗಳಲ್ಲಿ ಸೇರಿಸಬೇಕು ಮತ್ತು ವಿತರಿಸಬೇಕು ಎಂದು ನಾವು ಕೋರುತ್ತೇವೆ.