ಪ್ರಯಾಗರಾಜ ಕುಂಭಮೇಳ 2025
ಪ್ರಯಾಗರಾಜ, ಜನವರಿ 27 (ಸುದ್ದಿ) – ಮೌನಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಕುಂಭ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಎಲ್ಲಾ ಆಖಾಡಗಳು ಜಾಗರೂಕರಾಗಿರುವಂತೆ ಪೊಲೀಸರು ಆದೇಶಿಸಿದ್ದಾರೆ. ಅಪರಿಚಿತ ವ್ಯಕ್ತಿಗಳನ್ನು ಆಖಾಡಗಳಲ್ಲಿ ಉಳಿಯಲು ಬಿಡಬೇಡಿರಿ ಎಂದು ಪೊಲೀಸ ಅಧೀಕ್ಷಕರ ಕಾರ್ಯಾಲಯದಿಂದ ಎಲ್ಲಾ ಆಖಾಡಗಳಿಗೆ ಸೂಚನೆಗಳನ್ನು ನೀಡಲಾಗಿದೆ.
ಮೌನಿ ಅಮಾವಾಸ್ಯೆಯ ದಿನದಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಜನವರಿ 26 ರಿಂದ ಕುಂಭ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ಅನೇಕ ಭಕ್ತರು ಆಖಾಡಗಳೊಂದಿಗೆ ಮತ್ತು ವಿವಿಧ ಧಾರ್ಮಿಕ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಆಖಾಡಗಳು ಮತ್ತು ಆಧ್ಯಾತ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ ಭಕ್ತರು ಆಖಾಡಗಳು ಅಥವಾ ಆಧ್ಯಾತ್ಮಿಕ ಸಂಸ್ಥೆಗಳ ವಸತಿ ಸ್ಥಳಗಳಿಗೆ ಹೋಗುತ್ತಿದ್ದಾರೆ; ಅವರೊಂದಿಗೆ ಅಪರಿಚಿತರು ಯಾರೂ ಬರುತ್ತಿಲ್ಲ ? ಈ ಬಗ್ಗೆ ಆಖಾಡಾಗಳು ಜಾಗರೂಕರಾಗಿರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಇದಕ್ಕೂ ಮೊದಲು, ಕೆಲವು ಮತಾಂಧ ಮುಸ್ಲಿಮರು ಮಹಾಕುಂಭಮೇಳದಲ್ಲಿ ರಕ್ತಪಾತ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ದೃಷ್ಟಿಯಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸರು ಈ ಜಾಗರೂಕತೆಯನ್ನು ವಹಿಸುತ್ತಿದ್ದಾರೆ.