ಸರಕಾರದ ಜನೌಷಧಿ ಕೇಂದ್ರಗಳಿಂದ ಜನೌಷಧಿಗಳನ್ನು ಖರೀದಿಸಿದರೆ ನಾಗರಿಕರಿಗೆ ಶೇ. 50 ರಿಂದ 90 ರಷ್ಟು ಉಳಿತಾಯ !

‘ಫಾರ್ಮಾಸ್ಯೂಟಿಕಲ್ಸ್ ಮತ್ತು ಮೆಡಿಕಲ ಡಿವಾಯಸಸ್ ಬ್ಯೂರೋ ಆಫ್ ಇಂಡಿಯಾ’ ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿ ದಧೀಚ ಅವರಿಂದ ಮಾಹಿತಿ

ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿರುವ ಔಷಧಿಗಳನ್ನು ತೋರಿಸುತ್ತಿರುವ ರವಿ ದಧೀಚ

ಪ್ರಯಾಗರಾಜ, ಜನವರಿ 26 (ಸುದ್ದಿ) – ಸರಕಾರದ ಜನೌಷಧಿ ಕೇಂದ್ರಗಳಿಂದ ಔಷಧಿಗಳನ್ನು ಖರೀದಿಸಿದರೆ ನಾಗರಿಕರು ಶೇಕಡಾ 50 ರಿಂದ 90 ರಷ್ಟು ಉಳಿತಾಯ ಮಾಡಬಹುದು ಎಂದು ಕೇಂದ್ರ ಸರಕಾರದ ‘ಫಾರ್ಮಾಸ್ಯೂಟಿಕಲ್ಸ್ ಮತ್ತು ಮೆಡಿಕಲ ಡಿವಾಯಸಸ್ ಬ್ಯೂರೋ ಆಫ್ ಇಂಡಿಯಾ’ (ಪಿಎಂಬಿಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿ ದಧಿಚ ಇವರು ಮಾಹಿತಿ ನೀಡಿದ್ದಾರೆ. ರವಿ ದಧೀಚ ಅವರು ಸೆಕ್ಟರ್ 7 ರಲ್ಲಿ ಕಲಾಗ್ರಾಮದ ಜನೌಷಧಿ ಮಳಿಗೆಗಳು ಮತ್ತು ಇತರ ಕೇಂದ್ರಗಳನ್ನು ಪರಿಶೀಲಿಸಿದರು. ಹಾಗೆಯೇ ಕೇಂದ್ರಗಳ ವ್ಯವಸ್ಥಾಪಕರು ಮತ್ತು ಉಪಸ್ಥಿತರಿದ್ದ ನಾಗರಿಕರೊಂದಿಗೆ ಚರ್ಚಿಸಿದರು. ಇದಾದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ದಧೀಚ ಅವರು ಮಾತನಾಡಿ, “ನಾವು ಕುಂಭ ಕ್ಷೇತ್ರದಲ್ಲಿ 5 ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ”. ಈ ಕೇಂದ್ರಗಳು ಕುಂಭ ಮೇಳದ ಅವಧಿಯುದ್ದಕ್ಕೂ ಕಾರ್ಯನಿರ್ವಹಿಸುತ್ತಿರುತ್ತವೆ. ಕಡಿಮೆ ಬೆಲೆಯಲ್ಲಿ ಮತ್ತು ಉತ್ತಮ ಗುಣಮಟ್ಟದ ಔಷಧಿಗಳ ಮಾಹಿತಿಯನ್ನು ಒದಗಿಸುವುದು ಮತ್ತು ಅದು ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಸಧ್ಯಕ್ಕೆ ಉತ್ತರ ಪ್ರದೇಶದಲ್ಲಿ 2 ಸಾವಿರ 633 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದರೆ, ಪ್ರಯಾಗರಾಜನಲ್ಲಿ 62 ಕೇಂದ್ರಗಳಿವೆ. ಜನೌಷಧಿ ಯೋಜನೆಯಡಿ ದೇಶಾದ್ಯಂತ 15 ಸಾವಿರಕ್ಕೂ ಹೆಚ್ಚು ಕೇಂದ್ರಗಳನ್ನು ತೆರೆಯಲಾಗಿದ್ದು, 25 ಸಾವಿರ ಕೇಂದ್ರಗಳನ್ನು ಸ್ಥಾಪಿಸುವುದು ನಮ್ಮ ಗುರಿಯಾಗಿದೆ. ಈ ವರ್ಷ ಈ ಕೇಂದ್ರಗಳ ಮೂಲಕ 2 ಸಾವಿರ ಕೋಟಿ ರೂಪಾಯಿ ಮೌಲ್ಯದ ಔಷಧಿಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಇದರಲ್ಲಿ ನಾವು 1 ಸಾವಿರ 500 ಕೋಟಿ ರೂಪಾಯಿಗಳ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ’, ಎಂದು ಹೇಳಿದರು.

ಒಂದೇ ಕ್ಲಿಕ್‌ನಲ್ಲಿ ನಿಮ್ಮ ಪ್ರದೇಶದಲ್ಲಿರುವ ಜನೌಷಧಿ ಕೇಂದ್ರದ ವಿಳಾಸವನ್ನು ತಿಳಿದುಕೊಳ್ಳಿರಿ !

ದಧೀಚ್ ಮಾತು ಮುಂದುವರೆಸಿ, “ಮಹಾ ಕುಂಭ ಮೇಳಕ್ಕೆ ಬಂದಿರುವ ಭಕ್ತರಿಗೆ ಕೇವಲ ಒಂದು ಕ್ಲಿಕ್‌ನಲ್ಲಿ ಪಿನ್ಕೋಡ್ ಆಧಾರಿತ ವ್ಯವಸ್ಥೆಯ ಮೂಲಕ ಅವರ ಹತ್ತಿರದ ಜನೌಷಧಿ ಕೇಂದ್ರದ ವಿಳಾಸವನ್ನು ತಿಳಿಸಲಾಗುತ್ತಿದೆ. ನಾಗರಿಕರು ಈ ಮಾಹಿತಿಯನ್ನು `ಪಿ.ಎಮ್.ಬಿ.ಐ.’ ಯ ಅಧಿಕೃತ ಜಾಲತಾಣದಲ್ಲಿ ಸ್ವತಃ ಹುಡುಕಬಹುದು’, ಎಂದು ಹೇಳಿದರು

ಈ ಸಂದರ್ಭದಲ್ಲಿ ‘ಪಿಎಂಬಿಐ’ ವ್ಯವಸ್ಥಾಪಕ ಗೌತಮ ಕಪೂರ, ಸಹಾಯಕ ವ್ಯವಸ್ಥಾಪಕ ನಿತಿನ ಸಿಂಗ, ನೋಡಲ್ ಅಧಿಕಾರಿ ಮಾನವೇಂದ್ರ ಸಿಂಗ ಚೌಹಾಣ, ಕೇಂದ್ರ ನಿರ್ದೇಶಕರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.