ಕುಂಭ ಕ್ಷೇತ್ರವು ‘ನೊ ವೆಹಿಕಲ್ ಝೋನ್’ ಘೋಷಣೆ: ಫೆಬ್ರವರಿ 3 ರವರೆಗೆ ಎಲ್ಲಾ ವಾಹನಗಳು ರದ್ದು !

ಪ್ರಯಾಗರಾಜ್ – ಭಾರೀ ಜನದಟ್ಟಣೆ ಮತ್ತು ಭದ್ರತಾ ದೃಷ್ಟಿಯಿಂದ ಕುಂಭ ಕ್ಷೇತ್ರದಲ್ಲಿ ಜನವರಿ 25 ರಿಂದ ಫೆಬ್ರವರಿ 3 ರವರೆಗೆ ಎಲ್ಲಾ ವಾಹನಗಳ ಪಾಸ್‌ ರದ್ದು ಮಾಡಲಾಗಿದೆ, ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ವಾಹನದ ಪಾಸ್‌ನಲ್ಲಿ ಇದನ್ನು ಸ್ಪಷ್ಟವಾಗಿ ಬರೆಯಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಅವಧಿಯಲ್ಲಿ ಮಹಾಕುಂಭಕ್ಷೇತ್ರವನ್ನು ‘ನೋ ವೆಹಿಕಲ್ ಝೋನ್’ ಅಂದರೆ ‘ವಾಹನ ಮುಕ್ತ ಪ್ರದೇಶ’ ಎಂದು ಘೋಷಿಸಲಾಗಿದೆ. ಪೊಲೀಸರು ವಾಹನಗಳ ಮಾರ್ಗವನ್ನು ಬದಲಾಯಿಸಿದ್ದಾರೆ.