ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಹೇಳಿಕೆ
ಬೆಂಗಳೂರು – ಭಾರತದ ಸಂವಿಧಾನ ರಚನೆಯಲ್ಲಿ ಬ್ರಾಹ್ಮಣರು ಪ್ರಮುಖ ಪಾತ್ರ ವಹಿಸಿದ್ದಾರೆ. ಕರಡು ಸಮಿತಿಯ ಏಳು ಸದಸ್ಯರಲ್ಲಿ ಮೂವರು ಬ್ರಾಹ್ಮಣರಾಗಿದ್ದರು. ಸಂವಿಧಾನವನ್ನು ನಿರ್ಮಿಸಿದ ಡಾ. ಭೀಮರಾವ ಅಂಬೇಡ್ಕರ್ ಅವರು ಭಂಡಾರ್ಕರ್ ಸಂಸ್ಥೆಯಲ್ಲಿ, ಬಿ.ಎನ್. ರಾವ್ ಅವರು ಸಂವಿಧಾನದ ಕರಡನ್ನು ಸಿದ್ಧಪಡಿಸದಿದ್ದರೆ, ಅದನ್ನು ಸಿದ್ಧಪಡಿಸಲು ಇನ್ನೂ 25 ವರ್ಷಗಳು ಬೇಕಾಗುತ್ತಿತ್ತು ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಇಲ್ಲಿ ನಡೆದ ಬ್ರಾಹ್ಮಣ ಸಮ್ಮೇಳನದಲ್ಲಿ ಹೇಳಿದರು. ಬಿ.ಎನ್. ರಾವ್ ಒಬ್ಬ ಬ್ರಾಹ್ಮಣರಾಗಿದ್ದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಮಹೋತ್ಸವ ವರ್ಷ ನಿಮಿತ್ತ ಆಯೋಜಿಸಲಾದ 2 ದಿನಗಳ ಬ್ರಾಹ್ಮಣ ಸಮ್ಮೇಳನ ‘ವಿಶ್ವಾಮಿತ್ರ’ದಲ್ಲಿ ನ್ಯಾಯಮೂರ್ತಿ ದೀಕ್ಷಿತ್ ಭಾಗವಹಿಸಿದ್ದರು.
Justice Krishna S. Dixit of the Karnataka High Court highlights the significant contribution of Brahmins in drafting the Indian Constitution, stating that without their participation, it would have taken 25 more years to complete.
Justice Dixit further stated that Veda Vyasa,… pic.twitter.com/1jZmWwBciK
— Sanatan Prabhat (@SanatanPrabhat) January 22, 2025
ವೇದವ್ಯಾಸರು ಒಬ್ಬ ಮೀನುಗಾರನ ಮಗ ಮತ್ತು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರು !
ನ್ಯಾಯಮೂರ್ತಿ ದೀಕ್ಷಿತ್ ಇವರು ಮಾತು ಮುಂದುವರೆಸಿ, ವೇದಗಳನ್ನು ವರ್ಗೀಕರಿಸಿದ ವೇದವ್ಯಾಸರು ಮೀನುಗಾರನ ಮಗ ಆಗಿದ್ದರು ಮತ್ತು ರಾಮಾಯಣವನ್ನು ಬರೆದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದರು. ನಾವು (ಬ್ರಾಹ್ಮಣರು) ಅವರನ್ನು ಕೀಳಾಗಿ ನೋಡಿದ್ದೇವೆಯೇ ? ನಾವು ಶತಮಾನಗಳಿಂದ ಶ್ರೀರಾಮನನ್ನು ಪೂಜಿಸುತ್ತಿದ್ದೇವೆ ಮತ್ತು ಅವರ ಮೌಲ್ಯಗಳನ್ನು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿದೆ ಎಂದು ಹೇಳಿದರು.
ನ್ಯಾಯಮೂರ್ತಿ ದೀಕ್ಷಿತ್ ಅವರು ಬ್ರಾಹ್ಮಣೇತರ ರಾಷ್ಟ್ರವಾದಿ ಚಳುವಳಿಗಳೊಂದಿಗಿನ ತಮ್ಮ ಹಿಂದಿನ ಸಂಬಂಧವನ್ನು ಉಲ್ಲೇಖಿಸುತ್ತಾ, ನ್ಯಾಯಾಧೀಶರಾದ ನಂತರ, ನಾನು ಇತರ ಎಲ್ಲಾ ಕೆಲಸಗಳಿಂದ ದೂರವಿದ್ದೇನೆ ಮತ್ತು ನ್ಯಾಯಾಂಗ ಚೌಕಟ್ಟಿನೊಳಗೆ ಮಾತನಾಡುತ್ತೇನೆ’, ಎಂದು ಹೇಳಿದರು.