ಪ್ರಯಾಗರಾಜ್ ಕುಂಭಮೇಳ 2025

ಪ್ರಯಾಗರಾಜ್ – ಇಂದು, ಕುಂಭನಗರಕ್ಕೆ ಬಂದಿದ್ದ 10 ದೇಶಗಳ 21 ಸದಸ್ಯರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು. ಈ ಸಂದರ್ಭದಲ್ಲಿ, ಈ 21 ಸದಸ್ಯರು ಕುಂಭನಗರದ ವಿವಿಧ ಅಖಾಡಗಳಿಗೆ ಭೇಟಿ ನೀಡಿ ಅಲ್ಲಿ, ಸಾಧು-ಸಂತರೊಂದಿಗೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚರ್ಚಿಸಿದರು. ಮಹಾ ಕುಂಭ ಮೇಳದಲ್ಲಿ ಸಾಧು-ಸಂತರು ಪ್ರತಿನಿಧಿಗಳಿಗೆ ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ಮಾಹಿತಿಯನ್ನು ಒದಗಿಸಿದರು. ಈ ಪ್ರತಿನಿಧಿಗಳಲ್ಲಿ ಫಿಜಿ, ಗಯಾನಾ, ಫಿನ್ಲ್ಯಾಂಡ್, ಮಲೇಷ್ಯಾ, ಮಾರಿಷಸ್, ಸಿಂಗಾಪುರ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರತಿನಿಧಿಗಳು ಸೇರಿದ್ದಾರೆ. ಈ ಪ್ರತಿನಿಧಿಗಳನ್ನು ತಿಲಕ ಹಚ್ಚಿ ಸ್ವಾಗತಿಸಲಾಯಿತು.
विदेश मंत्रालय द्वारा आमंत्रित 10 देशों का 21 सदस्यीय दल का प्रतिनिधिमंडल आज प्रयागराज पहुंँचा।
यह दल बृहस्पतिवार को त्रिवेणी संगम में पवित्र स्नान करेगा।@MEAIndia। @UPGovt। @myogiadityanath। @PIB_India।@MIB_India। @MahaKumbh_2025 pic.twitter.com/BB0ALwL3Ye— आकाशवाणी समाचार (@AIRNewsHindi) January 15, 2025
ಈ ನಿಯೋಗವು, ಮಹಾ ಕುಂಭಮೇಳವು ಜಗತ್ತಿಗೆ ಏಕತೆಯ ಸಂದೇಶವನ್ನು ನೀಡುತ್ತಿದೆ. ಭಾರತೀಯ ಸಂಸ್ಕೃತಿಯನ್ನು ನೋಡಲು ಮತ್ತು ಅರ್ಥಮಾಡಿಕೊಳ್ಳಲು ಎಲ್ಲಾ ದೇಶಗಳ ಜನರು ಈ ಮಹಾ ಕುಂಭಮೇಳಕ್ಕೆ ಬರಬೇಕು. ಇದು ಜಗತ್ತಿನಲ್ಲೇ ಅತಿ ದೊಡ್ಡ ಆಯೋಜನೆಯಾಗಿದೆ. ಮಹಾಕುಂಭದ ಆಯೋಜನೆಯಿಂದ ಎಲ್ಲಾ ಪ್ರತಿನಿಧಿಗಳು ಪ್ರಭಾವಿತರಾದರು ಮತ್ತು ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ ತಿಳಿಯಿತು,’ ಎಂದು ಹೇಳಿದರು.