ಮಹಾಕುಂಭ ಮೇಳದಲ್ಲಿ 51 ಅಡಿ ಎತ್ತರದ ಪರಶುರಾಮನ ವಿಗ್ರಹದ ಸ್ಥಾಪನೆ !

ಪ್ರಯಾಗರಾಜ್ ಕುಂಭ ಮೇಳ 2025

ಜನವರಿ 20 ರಂದು ಪೂಜೆ ಸಲ್ಲಿಸಿದ ನಂತರ ವಿಗ್ರಹದ ಅನಾವರಣ

ಪ್ರಯಾಗರಾಜ್ – ಇಲ್ಲಿನ ಸೆಕ್ಟರ್ ಸಂಖ್ಯೆ 9 ರಲ್ಲಿ 51 ಅಡಿ ಎತ್ತರದ ಪರಶುರಾಮ ವಿಗ್ರಹವನ್ನು ಸ್ಥಾಪಿಸಲಾಗಿದೆ. ಜನವರಿ 20 ರಂದು ಹಿಮಾಚಲ ಪ್ರದೇಶದ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಈ ವಿಗ್ರಹವನ್ನು ಪೂಜಿಸಲಿದ್ದಾರೆ. ಈ ಮಾಹಿತಿಯನ್ನು ‘ರಾಷ್ಟ್ರೀಯ ಪರಶುರಾಮ ಪರಿಷತ್’ನ ಸಂಸ್ಥಾಪಕ ಮತ್ತು ಕೇಂದ್ರ ಸಚಿವ ಸುನಿಲ್ ಭರಾಲ ಅವರು ನೀಡಿದ್ದಾರೆ. ಜನವರಿ 15 ರಂದು, ಸೆಕ್ಟರ್ 9 ರಲ್ಲಿರುವ ಬಜರಂಗ್ ಮಾಧವ್ ಮಾರ್ಗದಲ್ಲಿ ‘ರಾಷ್ಟ್ರೀಯ ಪರಶುರಾಮ ಪರಿಷತ್’ ಅನ್ನು ಆಯೋಜಿಸಲಾಗಿತ್ತು. ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಸುನೀಲ್ ಭರಾಲ್ ಇವರು ಮಾತು ಮುಂದುವರೆಸಿ, ಭಗವಾನ ಪರಶುರಾಮ ಇವರ ವಿಗ್ರಹ ದೇವಾಲಯಗಳು ಮತ್ತು ಮನೆಗಳಲ್ಲಿ ಪ್ರತಿಷ್ಠಾಪಿಸಲು 1 ಲಕ್ಷ 8 ಸಾವಿರ ವಿಗ್ರಹಗಳನ್ನು ವಿತರಿಸಲಾಗುತ್ತಿದೆ. ಭಗವಾನ್ ಪರಶುರಾಮನ ದಿವ್ಯ ಆಯುಧ ಪರಶು ಮತ್ತು 1 ಲಕ್ಷ 8 ಸಾವಿರ ಶ್ರೀ ಪರಶುರಾಮ ಚಾಲೀಸಗಳನ್ನು ವಿತರಿಸಲಾಗುವುದು. ಮಹಾ ಕುಂಭ ಮೇಳದ ಸಮಯದಲ್ಲಿ ‘ರಾಷ್ಟ್ರೀಯ ಪರಶುರಾಮ ಪರಿಷತ್’ 2 ಲಕ್ಷ ಚದರ ಅಡಿ ವಿಸ್ತೀರ್ಣದ ಶಿಬಿರವನ್ನು ಸ್ಥಾಪಿಸಿದೆ. ಈ ಮಹೋತ್ಸವದಲ್ಲಿ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ಕಾರ್ಯಕ್ರಮದಲ್ಲಿ 45 ದಿನಗಳ ನಿರಂತರ ಅಂತರರಾಷ್ಟ್ರೀಯ ಕಥನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.