
ಮಂಗಳೂರಿನಲ್ಲಿರುವ ಸನಾತನದ ೧೩೧ ನೇ ಸಂತ ಪೂಜ್ಯ (ಸೌ.) ಶಶಿಕಲಾ ಕಿಣಿ (ವಯಸ್ಸು ೭೮ ವರ್ಷ) ಇವರ ಪತಿ ಶ್ರೀ.ವಿಠಲ ಕಿಣಿ (ವಯಸ್ಸು ೭೯ ವರ್ಷ) ಇವರು ೬೨ % ಆಧ್ಯಾತ್ಮಿಕ ಮಟ್ಟ ತಲುಪಿದ ಬಗ್ಗೆ ೨ ನವಂಬರನಂದು ಘೋಷಿಸಲಾಯಿತು. ಆ ನಿಮಿತ್ತ ಸನಾತನದ ಧರ್ಮಪ್ರಸಾರ ಸೇವಕಿ ಸೌ. ಮಂಜುಳಾ ರಮಾನಂದ ಗೌಡ ಇವರಿಗೆ ಗಮನಕ್ಕೆ ಬಂದ ಅವರ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ
ಗುಣವೈಶಿಷ್ಟ್ಯಗಳು
೧. ಪತ್ನಿಗೆ ಸಹಾಯ ಮಾಡುವುದು: ಮಾಮರವರು ತಮ್ಮ ಪತ್ನಿ ಪೂಜ್ಯ (ಸೌ.) ಶಶಿಕಲಾ ಕಿಣಿ (ವಯಸ್ಸು ೭೮ ವರ್ಷ) ಅವರಿಗೆ ಆರೋಗ್ಯದ ಸಮಸ್ಯೆ ಹಾಗೂ ವಯೋ ಸಹಜ ಕೆಲವು ಅಡಚಣೆಗಳಿಂದ ಮನೆಕೆಲಸ ಮಾಡಲು ಕೂಡ ಕಷ್ಟ ಆಗುತ್ತಿದೆ. ಅಗ ಮಾಮರವರು ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡುತ್ತಾರೆ.
೨. ಪ್ರೇಮಭಾವ : ಮಾಮಾರವರ ಮನೆಗೆ ಹೋದಾಗ ಅವರು ಸಾಧಕರಿಗಾಗಿ ತಿಂಡಿಯನ್ನು ನೀಡುತ್ತಾರೆ ಹಾಗೂ ಸಾಧಕರಿಗಾಗಿ ಮತ್ತು ಸೇವಾಕೇಂದ್ರದಲ್ಲಿರುವ ಸಾಧಕರಿಗಾಗಿ ಮನೆಯಲ್ಲಿ ಹಬ್ಬದಂದು ತಯಾರಿಸಿದ ತಿಂಡಿಗಳನ್ನು ಸಹ ಕಳಿಸುತ್ತಾರೆ.

೩. ಬಾಲ್ಯದಿಂದ ಮಾಡಿದ ಸಾಧನೆ : ಮಾಮನವರ ಜನ್ಮವು ಮುಲ್ಕಿಯ ವೆಂಕಟ್ರಮಣ ದೇವಸ್ಥಾನದ ವ್ಯಾಪ್ತಿಯಲ್ಲಿನ ಅಜ್ಜಿ ಮನೆಯಲ್ಲಿ ಆಗಿತ್ತು. ಅಲ್ಲಿನ ನರಸಿಂಹ ದೇವರದ್ದೇ ಸತತ ಸ್ಮರಣೆ ಮಾಡುತ್ತಿದ್ದರು. ಎಷ್ಟೇ ಕಷ್ಟದ ಪರಿಸ್ಥಿತಿ ಇದ್ದರೂ ಅವರಿಗೆ ನರಸಿಂಹ ದೇವರು ಜೊತೆಗಿದ್ದಾರೆ ಎಂಬ ಶ್ರದ್ಧೆ ಅವರಲ್ಲಿದೆ. ಜೊತೆಗೆ ಗಣಪತಿ ಜಪ ಮಾಡುತ್ತಿದ್ದರು. ನಂತರ ಅವರಿಗೆ ಸುಮಾರು ೧೮-೧೯ ವಯಸ್ಸಿನ ತನಕ ನಿರಂತರ ಪ್ರಾಣಾಯಾಮದ ಜೊತೆಗೆ ಗಣಪತಿ ಜಪ ಮಾಡುತ್ತಿದ್ದರು. ನಂತರ ಲಲಿತಸಹಸ್ರನಾಮ ಹೇಳಲು ಪ್ರಾರಂಭ ಮಾಡಿದರು. ಇದನ್ನು ೪೦ ವರ್ಷಗಳ ಕಾಲ ಓದುತ್ತಿದ್ದರು.ಈಗ ತ್ರೀಶಾಸ್ತಿ ಸ್ತ್ರೋತ್ರ ಓದುತ್ತಿದ್ದಾರೆ. ಹೀಗೆ ಚಿಕ್ಕಂದಿನಿಂದಲೇ ನಿರಂತರ ದೇವರ ಸ್ಮರಣೆ ಮಾಡುತ್ತಿದ್ದರು.
೪. ಮನಃಪೂರ್ವಕ ಸ್ತೋತ್ರ ಪಠಣ ಮಾಡುವುದು : ಮಾಮರವರು ಪ್ರತೀದಿನ ತ್ರೀಶಾಸ್ತೀ ದೇವಿ ಸ್ತ್ರೋತ್ರ ಓದುತ್ತಾರೆ. ಆ ಸಮಯದಲ್ಲಿ ಅದನ್ನು ಮಾನಸಪೂಜೆ ರೂಪದಲ್ಲಿ ಮಾಡುತ್ತಾರೆ. ಒಂದೊಂದು ಬೀಜಮಂತ್ರ ಹೇಳುವಾಗ ತಿರುಪತಿ ವೆಂಕಟ್ರಮಣ,ಕಾಠ್ಮಂಡು ಶಿವಮಂದಿರ,ಹಾಗೆಯೇ ಸುಬ್ರಹ್ಮಣ್ಯ,ಧರ್ಮಸ್ಥಳ,ಮಂಜೇಶ್ವರ….ಹೀಗೆ ಅನೇಕ ದೇವಸ್ಥಾನಗಳ ಮಾನಸ ದರ್ಶನ ಮಾಡುತ್ತಾರೆ. ನಂತರ ರಾಮ,ಕೃಷ್ಣ,ಮಾರುತಿ,ಗಣಪತಿ,ಮುಲ್ಕಿ ಶ್ರೀ ನರಸಿಂಹ ಸ್ವಾಮಿ, ನವದುರ್ಗೆಯರಿಗೆ, ಕುಲದೇವತೆಗೆ ಆಹ್ವಾನಿಸಿ ಅವರಿಗೆ ಮಣೆ ಹಾಕಿ ಕೂರಿಸುತ್ತಾರೆ. ಆಮೇಲೆ ಅವರಿಗೆ ಶಕ್ತಿಪೀಠದ ತೀರ್ಥದಿಂದ ಅಭಿಷೇಕ ಮಾಡುತ್ತಾರೆ. ಗಂಗಾಭಿಷೇಕ ಮಾಡುತ್ತಾರೆ.ದೇವತೆಗಳಿಗೆ ನೈವೇದ್ಯ ಅರ್ಪಿಸುತ್ತಾರೆ. ಇದರಿಂದ ಅವರಿಗೆ ಆನಂದ ಸಿಗುತ್ತದೆ.
೫. ಸಂತರ ಬಗ್ಗೆ ಭಾವ: ಒಮ್ಮೆ ಪೂ.ರಮಾನಂದ ಗೌಡ (ಸನಾತನದ ೭೫ ನೇ ಸಂತರು) ಅಣ್ಣನವರು ಅವರನ್ನು ಭೇಟಿ ಮಾಡಲು ಅವರ ಮನೆಗೆ ಬರುತ್ತೇನೆ ಎಂದು ಹೇಳಿದ್ದರು. ಆ ದಿನ ಮಾಮರವರು ಸಂತರು ಬರುತ್ತಾರೆಂದು ಕಾದು ಕುಳಿತಿದ್ದರು. ಸಂತರ ಜೊತೆ ಮಾತಾಡುತ್ತಾ ಸಂತತ್ವ ಎಂದರೆ ತುಂಬಾ ದೊಡ್ಡ ಹಂತ. ನೀವು ಅದನ್ನು ಪ್ರಾಪ್ತ ಮಾಡಿಕೊಂಡಿರಿ ಅಣ್ಣ ಅಂತ ಹೇಳುತ್ತಾ ಕೈಮುಗಿದರು. ಆಗ ಅವರಿಗೆ ಭಾವಜಾಗೃತಿ ಆಯಿತು.
– ಸೌ.ಮಂಜುಳಾ ಗೌಡ , ಮಂಗಳೂರು, ಕರ್ನಾಟಕ