ಅಕ್ಷಯ ತದಿಗೆಯಂದು ಮಾಡುವ ದಾನದ ಮಹತ್ವ

ದಾನ ಮಾಡುವುದರಿಂದ ಪುಣ್ಯವು ಸಿಗುತ್ತದೆ. ಅಕ್ಷಯ ತದಿಗೆಯ ದಿನ ಮಾಡಿದ ದಾನವು ಯಾವಾಗಲೂ ಕ್ಷಯವಾಗುವುದಿಲ್ಲ. ಅಕ್ಷಯ ತದಿಗೆಯ ದಿನ ಮಾಡಿದ ದಾನದಿಂದ ಬಹಳಷ್ಟು ಪುಣ್ಯ ಸಿಗುತ್ತದೆ. ಬಹಳಷ್ಟು ಪುಣ್ಯವು ಲಭಿಸುವುದರಿಂದ ವ್ಯಕ್ತಿಯ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಯಾವುದಾದರೊಂದು ಜೀವದ ಹಿಂದಿನ ಕರ್ಮಗಳು ಒಳ್ಳೆಯದಾಗಿದ್ದರೆ ಅವನ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಇದರಿಂದ ಅವನಿಗೆ ಸ್ವರ್ಗಪ್ರಾಪ್ತಿಯಾಗಬಹುದು. ಸಾಧಕರಿಗೆ ಪುಣ್ಯವನ್ನು ಪ್ರಾಪ್ತಿಮಾಡಿಕೊಂಡು ಸ್ವರ್ಗಪ್ರಾಪ್ತಿ ಮಾಡಿಕೊಳ್ಳುವುದಿರುವುದಿಲ್ಲ, ಸಾಧಕ ರಿಗೆ ಈಶ್ವರ ಪ್ರಾಪ್ತಿ ಮಾಡಿಕೊಳ್ಳುವುದಿರುತ್ತದೆ. ಆದುದರಿಂದ ಸಾಧಕರು ಸತ್ಪಾತ್ರರಿಗೆ ದಾನ ಮಾಡಬೇಕು. ಎಲ್ಲಿ ಅಧ್ಯಾತ್ಮದ ಪ್ರಸಾರದ ಜೊತೆಗೆ ರಾಷ್ಟ್ರ ಮತ್ತು ಧರ್ಮಗಳಿಗಾಗಿ ಕಾರ್ಯ ಮಾಡಲಾಗುತ್ತದೆಯೋ, ಇಂತಹ ಸತ್‌ಕಾರ್ಯಗಳಿಗೆ ದಾನ ಮಾಡುವುದೆಂದರೆ ಸತ್ಪಾತ್ರೇ ದಾನ. ಸತ್ಪಾತ್ರರಿಗೆ ದಾನ ಮಾಡುವುದರಿಂದ ದಾನ ಮಾಡುವವನಿಗೆ ಪುಣ್ಯವು ಸಿಗದೆ ದಾನದ ಕರ್ಮವು ಅಕರ್ಮ ಕರ್ಮವಾಗುತ್ತದೆ. ಇದರಿಂದ ಅವನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆಧ್ಯಾತ್ಮಿಕ ಉನ್ನತಿಯಾಗುವುದರಿಂದ ಸಾಧಕನು ಸ್ವರ್ಗಲೋಕಕ್ಕೆ ಹೋಗದೆ ಉಚ್ಚಲೋಕಕ್ಕೆ ಹೋಗುತ್ತಾನೆ. – ಈಶ್ವರ (ಕು.ಮಧುರಾ ಭೋಸಲೆ ಯವರ ಮಾಧ್ಯಮದಿಂದ, ೧೧.೫.೨೦೦೫)

ಹಣದ ದಾನ

ಮೇಲೆ ಹೇಳಿದಂತೆ ಸತ್ಪಾತ್ರೆ ದಾನವನ್ನು ಸಂತರಿಗೆ, ಧಾರ್ಮಿಕ ಕಾರ್ಯ ಮಾಡುವ ವ್ಯಕ್ತಿಗಳಿಗೆ, ಧರ್ಮಪ್ರಸಾರ ಮಾಡುವ ಆಧ್ಯಾತ್ಮಿಕ ಸಂಸ್ಥೆಗಳಿಗೆ, ಧರ್ಮದ ಕುರಿತು ಉಪಕ್ರಮ ಮುಂತಾದವುಗಳಿಗೆ ವಸ್ತು ಅಥವಾ ದ್ರವ್ಯಗಳ ಸ್ವರೂಪದಲ್ಲಿ ದಾನ ಮಾಡಬೇಕು.

ತನುವಿನ ದಾನ

ಧರ್ಮದ ವಿಷಯಗಳ ಉಪಕ್ರಮಗಳಲ್ಲಿ ಭಾಗವಹಿಸುವುದು ತನುವಿನ ದಾನವಾಗಿದೆ. ಅದಕ್ಕಾಗಿ ದೇವತೆಗಳ ವಿಡಂಬನೆ, ಧಾರ್ಮಿಕ ಉತ್ಸವಗಳಲ್ಲಿ ತಪ್ಪುಆಚರಣೆಗಳು ಇತ್ಯಾದಿಗಳನ್ನು ತಡೆಯಬೇಕು.

ಮನಸ್ಸಿನ ದಾನ

ಕುಲದೇವತೆಯ ಜಪ ಮಾಡುವುದು, ಅವರಿಗೆ ಪ್ರಾರ್ಥನೆ ಮಾಡುವುದು ಈ ಮೂಲಕ ಮನಸ್ಸಿನ ಅರ್ಪಣೆ (ದಾನ) ಮಾಡಬೇಕು.

ಮೃತ್ತಿಕಾ ಪೂಜೆ

೧. ಮಹತ್ವ : ‘ಸದೈವ ಕೃಪಾದೃಷ್ಟಿ ಇಡುವ ಮೃತ್ತಿಕೆಯಿಂದಲೇ ನಮಗೆ ಧಾನ್ಯಲಕ್ಷ್ಮಿ, ಧನಲಕ್ಷ್ಮಿ ಮತ್ತು ವೈಭವಲಕ್ಷ್ಮಿಯರ ಪ್ರಾಪ್ತಿಯಾಗುತ್ತದೆ. ಅಕ್ಷಯ ತದಿಗೆಯ ದಿನವೆಂದರೆ ಕೃತಜ್ಞತೆಯ ಭಾವವನ್ನಿಟ್ಟು ಮೃತ್ತಿಕೆಯ ಆರಾಧನೆ ಮಾಡುವ ದಿನ.

೨. ಮಣ್ಣಿನಲ್ಲಿ ಹೊಂಡಗಳನ್ನು ಮಾಡುವುದು, ಬೀಜಗಳ ಬಿತ್ತನೆ : ‘ಯುಗಾದಿ’ಯ ಶುಭಮುಹೂರ್ತದಂದು ಊಳಿದ ಹೊಲದ ಸಾಗುವಳಿಯ ಕೆಲಸವನ್ನು ಅಕ್ಷಯ ತೃತೀಯಾದ ಒಳಗೆ ಪೂರ್ಣಗೊಳಿಸಬೇಕು. ಅಕ್ಷಯ ತೃತೀಯಾದಂದು ಸಾಗುವಳಿ ಮಾಡಿದ ಜಮೀನಿನಲ್ಲಿರುವ ಮಣ್ಣನ್ನು ಕೃತಜ್ಞತೆಯ ಭಾವದಿಂದ ಪೂಜಿಸಬೇಕು. ಅನಂತರ ಪೂಜಿಸಿದ ಮಣ್ಣಿನಲ್ಲಿ ಹೊಂಡಗಳನ್ನು ಮಾಡಬೇಕು ಮತ್ತು ಆ ಹೊಂಡಗಳಲ್ಲಿ ಬೀಜಗಳನ್ನು ಬಿತ್ತಬೇಕು. ಅಕ್ಷಯ ತೃತೀಯಾದ ಮುಹೂರ್ತದಲ್ಲಿ ಬೀಜಗಳನ್ನು ಬಿತ್ತಲು ಪ್ರಾರಂಭಿಸಿದರೆ ಆ ದಿನ ವಾತಾವರಣದಲ್ಲಿ ಕಾರ್ಯನಿರತವಾಗಿರುವ ದೈವೀ ಶಕ್ತಿಯು ಬೀಜಗಳಲ್ಲಿ ಬರುವುದರಿಂದ ಸಮೃದ್ಧವಾದ ಫಸಲು ಬರುತ್ತದೆ.

ವೃಕ್ಷಾರೋಪಣ

ಅಕ್ಷಯ ತೃತೀಯಾದಂದು ಹೊಂಡಗಳನ್ನು ಮಾಡಿ ಗಿಡಗಳನ್ನು ನೆಟ್ಟರೆ ಹಣ್ಣಿನ ತೋಟವೂ ಹೇರಳವಾದ ಉತ್ಪಾದನೆಯನ್ನು ನೀಡುತ್ತದೆ. ಹಾಗೆಯೇ ಆಯುರ್ವೇದದಲ್ಲಿ ಹೇಳಿದ ಔಷಧಿ ವನಸ್ಪತಿಗಳನ್ನು ಅಕ್ಷಯ ತದಿಗೆಯ ಮುಹೂರ್ತದಲ್ಲಿ ನೆಟ್ಟರೆ ಆ ವನಸ್ಪತಿಗಳು ನಾಶವಾಗುವುದಿಲ್ಲ, ಅಂದರೆ ಔಷಧಿ ವನಸ್ಪತಿಗಳ ಕೊರತೆಯುಂಟಾಗುವುದಿಲ್ಲ.

ಅರಿಶಿನಕುಂಕುಮ

ಸ್ತ್ರೀಯರಿಗೆ ಈ ದಿನವು ಮಹತ್ವದ್ದಾಗಿರುತ್ತದೆ. ಚೈತ್ರದಲ್ಲಿ ಪ್ರತಿಷ್ಠಾಪಿಸಿದ ಚೈತ್ರಗೌರಿಯನ್ನು ಅವರು ವಿಸರ್ಜಿಸಬೇಕಾಗಿರುತ್ತದೆ. ಇದಕ್ಕಾಗಿ ಅವರು ಅರಿಶಿನಕುಂಕುಮದ ಕಾರ್ಯಕ್ರಮವನ್ನು ಮಾಡುತ್ತಾರೆ.’ (ಆಧಾರ : ಸನಾತನವು ನಿರ್ಮಿತ ಗ್ರಂಥ ‘ಧಾರ್ಮಿಕ ಹಬ್ಬ ಉತ್ಸವಗಳು ಮತ್ತು ವ್ರತಗಳು’)

Kannada Weekly | Offline reading | PDF