Close
ಶ್ರಾವಣ ಕೃಷ್ಣಪಕ್ಷ ಚತುರ್ದಶಿ/ ಅಮವಾಸ್ಯೆ ಪ್ರಾರಂಭ, ಕಲಿಯುಗ ವರ್ಷ ೫೧೧೯

Monthly Archives: June 2017

ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ವರುಣದೇವರೊಂದಿಗೆ ಶ್ರೀಕೃಷ್ಣನ ಕೃಪೆಯ ಸುರಿಮಳೆ !

ವಿಶ್ವ ಶ್ರೀ ಕ್ಷೇತ್ರ ಮಹಾಸಂಸ್ಥಾನದ ಸಂಸ್ಥಾಪಕ ಮಾರ್ಗದರ್ಶಿಗಳಾದ ಶ್ರೀ. ಉಮೇಶ ಶರ್ಮಾರವರು ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಚೈತನ್ಯಮಯ ಭೇಟಿಯ ಬಗ್ಗೆ ಉತ್ಕಟ ಭಾವರೂಪದಿಂದ ವರ್ಣಿಸಿದರು. ಅವರು ಎಲ್ಲ ಧರ್ಮಾಭಿಮಾನಿಗಳನ್ನು ಚೈತನ್ಯ ಧಾರೆಯಲ್ಲಿ ಕೊಂಡೊಯ್ದರು.

ವಿನಾಶದಂಚಿಗೆ ತಲುಪಿದ ಇಂದಿನ ಕುಟುಂಬಪದ್ಧತಿ !

‘ಇಂದಿನ ಕುಟುಂಬ ಪದ್ಧತಿಯು ವಿನಾಶದಂಚಿಗೆ ತಲುಪಿದೆ. ವ್ಯವಹಾರ ಅಥವಾ ನೌಕರಿ ನಿಮಿತ್ತ ಮನುಷ್ಯನಿಗೆ ಬೇರೆಡೆ ಹೋಗಬೇಕಾಗುತ್ತದೆ. ಅಲ್ಲಿ ಹೇಗೆ ಸಂಸ್ಕಾರವಿರುವುದೋ, ಅದಕ್ಕನುಸಾರ ಅವನ ಮೇಲೆ ಪರಿಣಾಮವಾಗುತ್ತದೆ. ಅಲ್ಲಿನ ಸಂಸ್ಕಾರದಿಂದಾಗಿ ಸುಖ ಹಾಗೂ ಹಣದ ಮೋಹಕ್ಕೆ ಬಲಿಯಾಗುವುದರಿಂದ ಮನೆಯಲ್ಲಿ ಭೌತಿಕ ಸುಖ ಕಾಣಿಸುತ್ತದೆ.

ಹಿಂದೂಗಳೇ, ಹಿಂದೂ ಸಂಸ್ಕೃತಿಯನ್ನು ಆಚರಿಸಿ

ನಮ್ಮ ಹಿಂದೂ ಸಂಸ್ಕೃತಿಯಲ್ಲಿನ ಪ್ರತಿಯೊಂದು ಕೃತಿಯ ಹಿಂದೆ ಶಾಸ್ತ್ರವಿದೆ; ಆದರೆ ಯಾರೂ ಕೃತಿಯ ಹಿಂದಿನ ಶಾಸ್ತ್ರದ ಬಗ್ಗೆ ಪ್ರಬೋಧನೆ ಮಾಡದಿರುವುದರಿಂದ ನಾವು ಹಿಂದೂ ಸಂಸ್ಕೃತಿಯಂತೆ ಆಚರಿಸುವುದನ್ನು ಬಿಟ್ಟುಬಿಟ್ಟಿದ್ದೇವೆ. ಎಷ್ಟೋ ವಿಷಯಗಳನ್ನು ಕಾಲ ಬದಲಾಗಿದೆ ಎಂದು ಕುರುಡಾಗಿ ಸ್ವೀಕರಿಸುತ್ತಿದ್ದೇವೆ.

ರಾತ್ರಿ ಬೇಗನೇ ಮಲಗಿ ಬೆಳಗ್ಗೆ ಬೇಗನೇ ಏಳಬೇಕು !

ಬೆಳಗ್ಗೆ ಬೇಗನೇ ಏಳುವುದರಿಂದಾಗುವ ಲಾಭಗಳು : ಬೆಳಗ್ಗಿನ ವಾತಾವರಣವು ಶುದ್ಧ, ಪವಿತ್ರ, ಶಾಂತ ಮತ್ತು ಉತ್ಸಾಹವರ್ಧಕವಾಗಿರುತ್ತದೆ. ಈ ಕಾಲದಲ್ಲಿ ಅಧ್ಯಯನವು ಒಳ್ಳೆಯ ರೀತಿಯಿಂದ ಆಗುತ್ತದೆ.

ತಂದೆ-ತಾಯಿಯರ ಸೇವೆಯನ್ನು ಮನಃಪೂರ್ವಕವಾಗಿ ಮಾಡುವುದರ ಫಲ

‘ತಂದೆ-ತಾಯಿ ಮತ್ತು ಗುರುಗಳ ಸೇವೆಯನ್ನು ಮಾಡುವುದು, ಎಲ್ಲಕ್ಕಿಂತ ಉತ್ತಮವಾದ ತಪಶ್ಚರ್ಯವಾಗಿದೆ’, ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ.

ಮಕ್ಕಳ ಸಮಯವು ಎಲ್ಲಿ ವ್ಯರ್ಥವಾಗುತ್ತದೆ ?

ಕೆಲವು ಮಕ್ಕಳು, ಕ್ಯಾರಮ್, ಇಸ್ಪೀಟ್‌ಗಳಂತಹ ಆಟಗಳನ್ನು ಗಂಟೆಗಟ್ಟಲೆ ಆಡುತ್ತಿರುತ್ತಾರೆ. ಅನೇಕ ಮಕ್ಕಳಿಗೆ ‘ವೀಡಿಯೋ ಗೇಮ್ನ ಹುಚ್ಚಿರುತ್ತದೆ. ಇಂತಹ ನಿರರ್ಥಕ ಆಟಗಳನ್ನು ಆಡುವುದರಿಂದ ಮಕ್ಕಳ ಸಮಯವು ವ್ಯರ್ಥವಾಗುತ್ತದೆ.

ಮಕ್ಕಳೇ, ಸಂಚಾರವಾಣಿಯ ಸದುಪಯೋಗವನ್ನು ಹೇಗೆ ಮಾಡಬೇಕು ?

ನಿಯತಕಾಲಿಕೆ ‘ಸಾಪ್ತಾಹಿಕ ಸನಾತನ ಪ್ರಭಾತದಲ್ಲಿ ರಾಷ್ಟ್ರ ಮತ್ತು ಧರ್ಮದ ಬಗೆಗಿನ ಲೇಖನಗಳು ಪ್ರಕಾಶಗೊಳ್ಳುತ್ತವೆ. ಈ ಲೇಖನಗಳಿಂದ ನೀವು ಸಂದೇಶಗಳನ್ನು ತಯಾರಿಸಬಹುದು ಮತ್ತು ಕಿರು ಸಂದೇಶದ ಮೂಲಕ ಅವುಗಳನ್ನು ಕಳುಹಿಸಬಹುದು. ಹಾಗೆಯೇ ಸಂದೇಶಗಳನ್ನು ತಯಾರಿಸಲು ಸನಾತನದ ಗ್ರಂಥಗಳನ್ನೂ ಉಪಯೋಗಿಸಬಹುದು.

ತಂದೆ-ತಾಯಿ ಮತ್ತು ಮನೆಯಲ್ಲಿನ ಹಿರಿಯರಿಗೆ ಬಗ್ಗಿ ನಮಸ್ಕಾರ ಮಾಡಬೇಕು !

ತಂದೆ-ತಾಯಿ, ಹಾಗೆಯೇ ಮನೆಯಲ್ಲಿ ನಮಗಿಂತ ವಯಸ್ಸಿನಲ್ಲಿ ದೊಡ್ಡವರಾದ ಎಲ್ಲ ವ್ಯಕ್ತಿಗಳಿಗೆ ಬಗ್ಗಿ, ಅಂದರೆ ಅವರ ಕಾಲುಗಳನ್ನು ಮುಟ್ಟಿ ನಮಸ್ಕರಿಸಬೇಕು. ಕೆಲವು ಮಕ್ಕಳಿಗೆ ತಾಯಿ-ತಂದೆಯರಿಗೆ ಬಗ್ಗಿ ನಮಸ್ಕರಿಸಲು ನಾಚಿಕೆಯೆನಿಸುತ್ತದೆ. ಮಕ್ಕಳಿಗಾಗಿ ತಾಯಿ ದಿನದಲ್ಲಿ ೧೦ ಬಾರಿಯಾದರೂ ಕೆಳಗೆ ಬಾಗುತ್ತಾಳೆ. ಹೊರಗೆ ಆಟವಾಡುವಾಗ ನೆರೆಮನೆಯವರಿಗೆ ಮಕ್ಕಳಿಂದ ಏನಾದರೂ ಹಾನಿಯಾಗಿದ್ದರೆ, ನೆರೆಯವರು ಮಾಡಿದ ಅವಮಾನಗಳನ್ನು ತಂದೆಯು ಸಹಿಸುತ್ತಾನೆ. ಇಂತಹ ತಾಯಿ-ತಂದೆಯರಿಗೆ ಬಗ್ಗಿ ನಮಸ್ಕರಿಸಲು ಏಕೆ ನಾಚಿಕೆಯಾಗಬೇಕು ? ಮಕ್ಕಳೇ, ಇಂದಿನಿಂದ ಎಲ್ಲರೂ ತಾಯಿ-ತಂದೆಯರಿಗೆ ಬಗ್ಗಿ ನಮಸ್ಕಾರ ಮಾಡುವಿರಲ್ಲಾ ?

ಮಕ್ಕಳೇ, ಕೇವಲ ಒಳ್ಳೆಯದನ್ನೇ ನೋಡಿರಿ ಮತ್ತು ಕೆಟ್ಟದ್ದನ್ನು ನೋಡಬೇಡಿರಿ !

ಮಕ್ಕಳೇ, ಮನಸ್ಸಿಗೆ ಯಾವಾಗಲೂ ಎಲ್ಲಿಯಾದರೂ ಸಿಲುಕುವ ಅಭ್ಯಾಸವಿರುತ್ತದೆ. ಒಳ್ಳೆಯ ದೃಶ್ಯಗಳನ್ನು ನೋಡಿದರೆ ಮನಸ್ಸು ಒಳ್ಳೆಯ ವಿಷಯಗಳಲ್ಲಿ ಸಿಲುಕುತ್ತದೆ ಮತ್ತು ಒಳ್ಳೆಯ ವಿಷಯಗಳ ವಿಚಾರ ಮಾಡುತ್ತದೆ. ತದ್ವಿರುದ್ಧವಾಗಿ ಕೆಟ್ಟ ದೃಶ್ಯಗಳನ್ನು ನೋಡಿದರೆ ಮನಸ್ಸು ಕೆಟ್ಟ ವಿಷಯಗಳಲ್ಲಿ ಸಿಲುಕುತ್ತದೆ ಮತ್ತು ಕೆಟ್ಟ ವಿಷಯಗಳ ವಿಚಾರ ಮಾಡುತ್ತದೆ.

‘ಕಾರ್ಟೂನ್ ಗಳನ್ನು ನೋಡುವುದಕ್ಕಿಂತ ಪಂಚತಂತ್ರದಲ್ಲಿನ ಬೋಧನಾತ್ಮಕ ಕಥೆಗಳನ್ನು ಓದಿರಿ

‘ಇತ್ತೀಚಿಗಿನ ಮಕ್ಕಳು ಗಂಟೆಗಟ್ಟಲೆ ಪಾಶ್ಚಾತ್ಯರು ತಯಾರಿಸಿದ ‘ಟಾಮ್ ಆಂಡ್ ಜೆರೀ’ಯಂತಹ ನಿರರ್ಥಕ ಮತ್ತು ಕೇವಲ ಮನೋರಂಜನೆಯ ಕಿರುಚಿತ್ರಗಳನ್ನು ನೋಡುತ್ತಾರೆ. ಈ ಕಿರುಚಿತ್ರಗಳಲ್ಲಿ ಕೇವಲ ಒಬ್ಬರಿಗೊಬ್ಬರು ಜಗಳ ವಾಡುವುದು ಮತ್ತು ಬಡಿದಾಡುವುದನ್ನು ತೋರಿಸಲಾಗುವುದರಿಂದ ಅದರಿಂದ ಯಾವುದೇ ಬೋಧನೆಯಾಗುವುದಿಲ್ಲ. ಇದಕ್ಕಿಂತ ಮಕ್ಕಳು ಪಂಚತಂತ್ರದಲ್ಲಿನ ಕಥೆಗಳನ್ನು ಓದಿದರೆ ಅದರಿಂದ ಅವರಿಗೆ ನೀತಿಶಾಸ್ತ್ರ ಮತ್ತು ವ್ಯವಹಾರವನ್ನು ಯಶಸ್ವಿಯಾಗಿಸುವುದರ ಜ್ಞಾನವು ದೊರೆಯುವುದು. ಪಂಚತಂತ್ರದಲ್ಲಿನ ಕಥೆಗಳಿಂದ ಸಂಸ್ಕೃತ ಸುಭಾಷಿತಗಳನ್ನೂ ಕಲಿಸಲಾಗಿದೆ. ಅನೇಕ ಪಾಶ್ಚಾತ್ಯ ಕಥಾಲೇಖಕರಿಗೆ ಪಂಚ ತಂತ್ರದಿಂದಲೇ ಪ್ರೇರಣೆ ದೊರೆತಿದೆ ಮತ್ತು ಅವರು ‘ಇಸಾಪನೀತಿ’ ಮೊದಲಾದ […]