Close
ಶ್ರಾವಣ ಕೃಷ್ಣಪಕ್ಷ ಚತುರ್ದಶಿ/ ಅಮವಾಸ್ಯೆ ಪ್ರಾರಂಭ, ಕಲಿಯುಗ ವರ್ಷ ೫೧೧೯

Monthly Archives: April 2017

ಉತ್ತರಪ್ರದೇಶದಲ್ಲಿ ತಥಾಕಥಿತ ಕೋಮುದ್ವೇಷ ಹುಟ್ಟಿಸಿದ ಪ್ರಕರಣ ‘ಸುದರ್ಶನ ವಾಹಿನಿಯ ಸಂಪಾದಕ ಸುರೇಶ ಚವ್ಹಾಣಕೆ ಬಂಧನ ಹಿಂದುತ್ವನಿಷ್ಠರು ಅಧಿಕಾರದಲ್ಲಿರುವ ಉತ್ತರಪ್ರದೇಶದ ಪೊಲೀಸರ ಮೊಗಲಾಡಳಿತ !

‘ಸುದರ್ಶನ’ ವಾಹಿನಿಯಲ್ಲಿ ತಥಾಕಥಿತ ಕೋಮುದ್ವೇಷ ಹುಟ್ಟಿಸುವ ಹೇಳಿಕೆ ನೀಡಿದ್ದರಿಂದ ನಗರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿ ಪೊಲೀಸರು ವಾಹಿನಿಯ ಸಂಪಾದಕರಾದ ಶ್ರೀ. ಸುರೇಶ ಚವ್ಹಾಣಕೆಯವರನ್ನು ಲಕ್ಷ್ಮಣಪುರಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಏಪ್ರಿಲ್ ೬ ರಿಂದ ಏಪ್ರಿಲ್ ೮ ರ ಕಾಲಾವಧಿಯಲ್ಲಿ ಸುದರ್ಶನ ವಾಹಿನಿಯಲ್ಲಿ ಮಂಡಿಸಿದ ಒಂದು ಕಾರ್ಯಕ್ರಮದಲ್ಲಿ ಶ್ರೀ. ಚವ್ಹಾಣಕೆಯವರು ತಥಾಕಥಿತ ಕೋಮುದ್ವೇಷ ನಿರ್ಮಿಸುವ ಹೇಳಿಕೆಯನ್ನು ನೀಡಿದ್ದರು.

ಬೆಂಗಳೂರು ಪೊಲೀಸರಿಗೆ ಹಣೆಗೆ ಕುಂಕುಮ, ವಿಭೂತಿ ಇಡಲು ಹಾಗೂ ಕೈಗೆ ದಾರ ಕಟ್ಟಲು ನಿಷೇಧ !

ನಗರದ ಸಶಸ್ತ್ರ ಮೀಸಲು ಪಡೆ ಪೊಲೀಸರು ಇನ್ನು ಮುಂದೆ ಹಣೆಗೆ ಕುಂಕುಮ, ವಿಭೂತಿ ಇಡುವಂತಿಲ್ಲ, ಕಿವಿಗೆ ಓಲೆ ಧರಿಸುವಂತಿಲ್ಲ ಹಾಗೂ ಕೈಗೆ ದಾರ ಕಟ್ಟುವಂತಿಲ್ಲ ಎಂದು ಉಪ ಪೊಲೀಸ್ ಆಯುಕ್ತ ಡಿ. ಕಿಶೋರ್ ಬಾಬು ಇವರು ಏಪ್ರಿಲ್ ೧೧ ರಂದು ಹಿಂದೂವಿರೋಧಿ ಆದೇಶ ಹೊರಡಿಸಿದ್ದಾರೆ.

ಹಿಂದೂಗಳ ಅಪೇಕ್ಷೆಯು ಪೂರ್ಣವಾಗುವುದು ಯಾವಾಗ ?

ಇಂದು ಇಡೀ ದೇಶವು ಧರ್ಮ-ಅಧರ್ಮದ ವೈಚಾರಿಕ ಅಭಿಪ್ರಾಯಗಳಿಂದ ಸಾಗುತ್ತಿದೆ. ಹಿಂದೂಗಳ ಅಂದರೆ ರಾಷ್ಟ್ರದ ಮಹತ್ವದ ಸಮಸ್ಯೆಗಳು ಒಂದು ನಿರ್ಣಾಯಕ ಹಂತಕ್ಕೆ ಬಂದು ತಲುಪಿವೆ. ಆ ಸಮಸ್ಯೆಗಳು ರಾಮಮಂದಿರದ್ದಾಗಿರಲಿ, ಗೋಹತ್ಯೆಯದ್ದಾಗಿರಲಿ ಅಥವಾ ಕಾಶ್ಮೀರದ್ದಾಗಿರಲಿ. ಇದು ಮತ್ತು ಇಂತಹ ಇತರ ವಿಷಯದಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಘಟನೆಗಳಿಂದ ಮತ್ತು ಅಭಿಪ್ರಾಯಗಳ ಪ್ರವಾಹಗಳು ಒಂದು ವಿಲಕ್ಷಣ ವೇಗವನ್ನು ಹಿಡಿದಿವೆ. ಮುಂಬರುವ ಕಾಲದಲ್ಲಿ ಅದು ಇನ್ನಷ್ಟು ಹೆಚ್ಚಾಗಲಿದೆ. ಇದು ಒಂದು ರೀತಿಯಲ್ಲಿ ಕಾಲಗತಿಯೇ ಎಂದು ಹೇಳಬೇಕಾಗುವುದು. ಹಿಂದೂ ರಾಷ್ಟ್ರದ ದಿಕ್ಕಿನಲ್ಲಿ ಇಡುವಂತಹ ಒಂದೊಂದು […]

ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರ

ಹಿಂದೂ ಧರ್ಮದ ಬೆಲೆಯೇ ತಿಳಿದಿಲ್ಲದ ಭಾರತದ ಹಿಂದೂಗಳು ! ಭಾರತೀಯರು ಉನ್ನತ ಶಿಕ್ಷಣ ಕ್ಕಾಗಿ ಅಮೇರಿಕಕ್ಕೆ ಹೋಗುತ್ತಾರೆ, ಆದರೆ ಸಾಧನೆ ಹಾಗೂ ಹಿಂದೂ ಧರ್ಮದ ಶಿಕ್ಷಣಕ್ಕಾಗಿ ಜಗತ್ತಿನ ಜಿಜ್ಞಾಸುಗಳು ಹಾಗೂ ಸಾಧಕರು ಭಾರತಕ್ಕೆ ಬರುತ್ತಾರೆ. ಹಾಗಿದ್ದರೂ ಭಾರತದಲ್ಲಿಯ ಹಿಂದೂಗಳಿಗೆ ಹಿಂದೂ ಧರ್ಮದ ಬೆಲೆಯೇ ಇಲ್ಲ. – (ಪರಾತ್ಪರ ಗುರು ಡಾ. ಆಠವಲೆ

ಆದಿ ಶಂಕರಾಚಾರ್ಯರ ಜಯಂತಿ ವೈಶಾಖ ಶುಕ್ಲ ಪಕ್ಷ ಪಂಚಮಿ (೩೦.೪.೨೦೧೭) ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು

‘ಪ್ರಶ್ನೋಪನಿಷತ್ತು’ ಎಂಬ ಗ್ರಂಥದಲ್ಲಿ ಒಂದು ಮಂತ್ರದ ಕುರಿತು ಭಾಷ್ಯ ಮಾಡುವಾಗ ಆದಿ ಶಂಕರಾಚಾರ್ಯರು, ‘ಪೃಥ್ವಿಯ ಪ್ರಖ್ಯಾತ ದೇವತೆಯು ಅಪಾನವನ್ನು (ಅಪಾನ ವಾಯುವನ್ನು) ಮಾಧ್ಯಮವನ್ನಾಗಿಸಿ ಕೆಳಗೆ ಹಿಡಿದಿಟ್ಟುಕೊಳ್ಳದಿದ್ದರೆ, ಈ ಶರೀರವು ಜಡವಾದುದರಿಂದ ಅಂತರಿಕ್ಷದಲ್ಲಿ ಎಲ್ಲಿಯಾದರೂ ಹೋಗುತ್ತಿತ್ತು ಅಥವಾ ಬಿದ್ದಿರುತ್ತಿತ್ತು’ ಎಂದು ಹೇಳಿದ್ದಾರೆ.

ತಲಾಕ್‌ಪೀಡಿತ ಮಹಿಳೆಯರಿಗೆ ನ್ಯಾಯ ಬೇಕಿದ್ದರೆ, ಅವರು ಹಿಂದೂ ಧರ್ಮ ಸ್ವೀಕರಿಸಲಿ ! – ಹಿಂದೂ ಮಹಾಸಭೆಯ ಕರೆ

ಅಲೀಗಡ (ಉತ್ತರಪ್ರದೇಶ) – ತಲಾಕ್‌ ಪೀಡಿತ ಮುಸಲ್ಮಾನ ಮಹಿಳೆಯರಿಗೆ ನ್ಯಾಯ ಬೇಕಿದ್ದರೆ, ಅವರು ಹಿಂದೂ ಧರ್ಮವನ್ನು ಸ್ವೀಕರಿಸಬೇಕು, ಎಂದು ಹಿಂದೂ ಮಹಾಸಭೆಯ ಕಾರ್ಯದರ್ಶಿ ಪೂಜಾ ಶಕುನ ಪಾಂಡೆ ಇವರು ಮುಸಲ್ಮಾನ ಮಹಿಳೆಯರಿಗೆ ಕರೆ ನೀಡಿದ್ದಾರೆ. “ಒಂದು ವೇಳೆ ನಮ್ಮ ಸರಕಾರ ಮತ್ತು ನಮ್ಮ ಕಾನೂನು ನಿಮಗೆ ನ್ಯಾಯ ನೀಡದಿದ್ದರೆ, ನಾವು ನಿಮಗೆ ನ್ಯಾಯ ನೀಡುವೆವು, ಎಂದು ಪಾಂಡೆಯವರು ಹೇಳಿದ್ದಾರೆ. ತಲಾಕ್‌ಪೀಡಿತ ಮಹಿಳೆಯರಿಗೆ ನ್ಯಾಯ ಸಿಗಬೇಕೆಂದು ಪಾಂಡೆಯವರು ‘ಉತ್ಥಾನ ಯಜ್ಞವನ್ನು ಆಯೋಜಿಸಿದ್ದರು. ಅನೇಕ ಮುಸಲ್ಮಾನ ಮಹಿಳೆಯರು ಮತ್ತು ಪುರುಷರು […]

ಮಹಾಪುರುಷರ ಜಯಂತಿಯಂದು ಶಾಲಾ ವಿದ್ಯಾರ್ಥಿಗಳಿಗೆ ರಜೆ ಬೇಡ ! – ಯೋಗಿ ಆದಿತ್ಯನಾಥ

ಯೋಗಿ ಆದಿತ್ಯನಾಥರಂತಹ ಧರ್ಮಾಧಿಷ್ಠಿತ ಆಡಳಿತಗಾರರೇ ರಾಜ್ಯ ಮತ್ತು ದೇಶವನ್ನು ಉತ್ತಮ ರೀತಿಯಲ್ಲಿ ಜೋಪಾನ ಮಾಡಿ ಜನರಿಗೆ ಒಳ್ಳೆಯ ಸಂಸ್ಕಾರ ನೀಡಲು ಸಾಧ್ಯವಿದೆ ! ಅದಕ್ಕಾಗಿಯೇ ಎಲ್ಲ ಹುದ್ದೆಗಳಲ್ಲಿ ಭ್ರಷ್ಟ ರಾಜಕಾರಣಿಗಳ ಬದಲು ಧರ್ಮಾಧಿಷ್ಠಿತ ಆಡಳಿತಗಾರರೇ ಬೇಕು ! ಲಕ್ಷ್ಮಣಪುರಿ – ಮಹಾಪುರುಷರ ಜಯಂತಿಯಂದು ಶಾಲೆಗಳಿಗೆ ರಜೆ ನೀಡದೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಯಬೇಕು. ಅದರಿಂದ ಅವರಿಗೆ ಆ ದಿನ ಮಹಾಪುರುಷರ ವಿಷಯದಲ್ಲಿ ೪ ಶಬ್ದಗಳನ್ನು ಕಲಿಸಬಹುದು, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಹೇಳಿದರು. (ಸನಾತನವು ಕಳೆದ ಅನೇಕ […]

ಆಭರಣಗಳಿಂದ ಸ್ತ್ರೀಯರ ರಕ್ಷಣೆಯಾಗುತ್ತದೆ !

ಆಭರಣಗಳು ಸ್ತ್ರೀಯರನ್ನು ರಜ-ತಮಾತ್ಮಕ ಲಹರಿಗಳಿಂದ ರಕ್ಷಿಸುತ್ತವೆ : ಸ್ತ್ರೀಯು ಆದಿಶಕ್ತಿಯ ರೂಪವಾಗಿದ್ದಾಳೆ. ಸ್ತ್ರೀಯು ಮೂಲತಃ ರಜೋಪ್ರವೃತ್ತಿಯವಳಾಗಿದ್ದಾಳೆ, ಇದರಿಂದ ಅವಳ ಮೈಮೇಲಿರುವ ಆಭರಣಗಳು ಅವಳನ್ನು ವಾಯುಮಂಡಲದಲ್ಲಿನ ರಜತಮಾತ್ಮಕ ಲಹರಿಗಳ ಭ್ರಮಣದಿಂದ ನಿರ್ಮಾಣವಾಗುವ ಇಂಧನದಿಂದ ರಕ್ಷಿಸುತ್ತವೆ. ಪ್ರತಿಯೊಂದು ಆಭರಣವು ಸ್ತ್ರೀಯರನ್ನು ಸಂರಕ್ಷಣಾಕವಚದಂತೆ ರಕ್ಷಿಸುತ್ತದೆ. ಸ್ತ್ರೀಯರು ಪುರುಷರಿಗಿಂತ ಹೆಚ್ಚು ಸಂವೇದನಾಶೀಲರಾಗಿರುವುದರಿಂದ ಅವರು ವಾಯುಮಂಡಲದಲ್ಲಿನ ರಜತಮಾತ್ಮಕ ಲಹರಿಗಳಿಗೆ ಕೂಡಲೇ ಸ್ಪಂದಿಸುತ್ತಾರೆ. ಆದುದರಿಂದ ಮೊದಲಿನಿಂದಲೂ ಆಭರಣಗಳನ್ನು ಉಪಯೋಗಿಸಿ ಸ್ತ್ರೀಯರನ್ನು ರಕ್ಷಿಸಲಾಗುತ್ತದೆ. – ಓರ್ವ ವಿದ್ವಾಂಸ (ಪೂ.)ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೭.೧೨.೨೦೦೫, ರಾತ್ರಿ ೮.೦೨

ದುಷ್ಟರ ಸಂಹಾರಕ್ಕಾಗಿ ಬ್ರಾಹ್ಮ ಹಾಗೂ ಕ್ಷಾತ್ರ ತೇಜವನ್ನು ಉತ್ಕೃಷ್ಟವಾಗಿ ಉಪಯೋಗಿಸುವ ಯೋದ್ಧಾವತಾರಿ ಭಗವಾನ್ ಪರಶುರಾಮ !

ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಚಿಪಳೂಣ್‌ನ ಸಮೀಪದ ಲೋಟೆ ಎಂಬ ಊರಿನ ಮಹೇಂದ್ರ ಪರ್ವತದ ಮೇಲೆ ಭಗವಾನ್ ಪರಶುರಾಮರ ಪುರಾತನ ದೇವಸ್ಥಾನವಿದೆ. ಅಲ್ಲಿ ಪರಶುರಾಮರ ಪಾದದ ಚಿಹ್ನೆ ಮೂಡಿರುವ ಶಿಲೆಯನ್ನು ನಿತ್ಯ ಪೂಜಿಸಲಾಗುತ್ತಿದೆ. ಈ ಶಿಲೆಯ ಹಿಂದೆ ಮೂರು ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಮಧ್ಯಭಾಗದಲ್ಲಿ ಭಗವಾನ್ ಪರಶುರಾಮರ ಆಕಾರದಲ್ಲಿ ದೊಡ್ಡದಾಗಿರುವ ಹಾಗೂ ರೇಖೆಗಳ ಮೂರ್ತಿ ಇದೆ.

ಮಂಗಳೂರಿನ ಸನಾತನದ ಸಂತರಾದ ಪೂ. (ಶ್ರೀಮತಿ) ರಾಧಾ ಪ್ರಭು ಅಜ್ಜಿಯವರಿಗೆ ಸಹಸ್ರಚಂದ್ರದರ್ಶನ ವಿಧಿಯ ಮೊದಲು ಮತ್ತು ವಿಧಿಯ ದಿನದಂದು ಬಂದಂತಹ ಅನುಭೂತಿ

ದಿನಾಂಕ ೨೭.೨.೨೦೧೭ ರಂದು ಜರುಗಲಿರುವ ಸಹಸ್ರಚಂದ್ರದರ್ಶನ ವಿಧಿಯ ಯಜಮಾನರೆಂದು ನನ್ನ ಹಿರಿಯಪುತ್ರ ಶ್ರೀ. ಶಿವಾನಂದ ಪ್ರಭು ಮತ್ತು ಅವರ ಪತ್ನಿ ಸೌ. ಪ್ರತಿಮಾ ಪ್ರಭು ಇವರನ್ನು ನಿಯೋಜಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರಿಗೆ ಮತ್ತೊಂದು ಸೇವೆ ಬಂದಿದ್ದರಿಂದ ಅವರ ಸುಪುತ್ರ ಶ್ರೀ. ಅಶ್ವಿನ್ ಮತ್ತು ಸೊಸೆ ಸೌ. ನಮ್ರತಾ ಪ್ರಭು ಇವರು ಆ ಸೇವೆಯನ್ನು ನಿರ್ವಹಿಸಬೇಕಾಯಿತು.