Close
ಶ್ರಾವಣ ಕೃಷ್ಣಪಕ್ಷ ಚತುರ್ದಶಿ/ ಅಮವಾಸ್ಯೆ ಪ್ರಾರಂಭ, ಕಲಿಯುಗ ವರ್ಷ ೫೧೧೯

ರಾಷ್ಟೀಯ

ಮತಾಂತರಕ್ಕಾಗಿ ಹಿಂದೂ ಪತ್ನಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಮುಸಲ್ಮಾನ ಪತಿ ಹಾಗೂ ಅತ್ತೆಯ ಬಂಧನ

ಕೇರಳದಲ್ಲಿ ‘ಲವ್ ಜಿಹಾದ್ನ ಮತ್ತೊಂದು ಘಟನೆ ಬಹಿರಂಗ (ಕೇರಳ) – ಇಸ್ಲಾಮ್ ಧರ್ಮವನ್ನು ಸ್ವೀಕರಿಸಲು ನನಗೆ ಒತ್ತಾಯಿಸಲಾಗುತ್ತಿತ್ತು ಮತ್ತು ಅದಕ್ಕಾಗಿ ಪತಿ ಹಾಗೂ ಅತ್ತೆಯವರು ನನಗೆ ಶಾರೀರಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ, ಎಂದು ಹಿಂದೂ ಪತ್ನಿಯು ಪೊಲೀಸರಲ್ಲಿ ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಮುಕ್ಕಮ್ ಪೊಲೀಸರು ಚೆನ್ನಮಂಗಳೂರಿನಲ್ಲಿರುವ ಆಕೆಯ ಪತಿ ಅಹಮದ್ ನಬೀಲ್ (೨೪ ವರ್ಷ) ಹಾಗೂ ಅತ್ತೆ ರಮಲಾ (೬೬ ವರ್ಷ) ಇವರನ್ನು ಬಂಧಿಸಿದ್ದಾರೆ. ಇವರಿಬ್ಬರನ್ನೂ ಪೊಲೀಸ್ ಕಸ್ಟಡಿಗೆ ರವಾನಿಸಲಾಗಿದೆ. ಈ ಪ್ರಕರಣದಲ್ಲಿ […]

ಭಗವಾನ್ ಶ್ರೀರಾಮನ ‘ಅಲರ್ಜಿ ಇರುವವರು ಮುಸ್ಲಿಂ ರಾಷ್ಟ್ರ ಇಂಡೋನೇಷಿಯಾದಿಂದ ಕಲಿಯಬೇಕು ! – ಯೋಗಿ ಆದಿತ್ಯನಾಥ

ಲಕ್ಷ್ಮಣಪುರಿ(ಲಖನೌ) – ಕೆಲವರಿಗೆ ರಾಮನ ಹೆಸರಿನ ‘ಅಲರ್ಜಿಇದೆ. ಆದರೆ ಮೃತ್ಯುವಿನ ಬಳಿಕ ‘ರಾಮ ನಾಮ ಸತ್ಯ, ಎಂದು ಜಪಿಸಲಾಗುತ್ತದೆ. ಆದರೂ ಅವರು ‘ನೀವು ಯಾವಾಗಲೂ ಅಯೋಧ್ಯೆಯ ಹೆಸರನ್ನೇಕೆ ಜಪಿಸುತ್ತೀರಿ ಎಂದು ಕೇಳುತ್ತಾರೆ. ನೀವು ಮುಸ್ಲಿಂ ರಾಷ್ಟ್ರ ಇಂಡೋನೇಶಿಯಾಕ್ಕೆ ಹೋಗಿ ನೋಡಿರಿ. ಶ್ರೀ ರಾಮನ ವಿಷಯದಲ್ಲಿ ಅಲ್ಲಿಯ ಜನರಲ್ಲಿ ಪರಂಪರೆಯ ಬಗ್ಗೆ ವಿಶೇಷ ಅಭಿಮಾನವಿದೆ. ಶ್ರೀ ರಾಮನ ಹೆಸರಿನ ‘ಅಲರ್ಜಿ ಇರುವರು ಇಂಡೋನೇಶಿಯಾದ ಜನರಿಂದ ಕಲಿಯಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಮಾತನಾಡುತ್ತಾ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು […]

ಕೇರಳದಲ್ಲಿ ಸಂಘದ ಕಾರ್ಯಕರ್ತನ ಕೊಲೆ ಭಾಜಪದಿಂದ ಕೇರಳ ಬಂದ್ ಆಂದೋಲನ ಕೇರಳವು ಸಂಘ ಹಾಗೂ ಭಾಜಪದ ಕಾರ್ಯಕರ್ತರಿಗೆ ಸಾವಿನ ಮನೆಯಾಗುತ್ತಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾದ ರಾಜೇಶ್ ಎಡವಾಕೊಡೆಯವರನ್ನು ಜುಲೈ ೨೯ ರ ರಾತ್ರಿ ದುಷ್ಕರ್ಮಿಗಳ ತಂಡವೊಂದು ಕೊಲೆ ಮಾಡಿತು. ಅವರ ಮೇಲೆ ೧೫ ಕ್ಕಿಂತ ಹೆಚ್ಚು ಬಾರಿ ಹಲ್ಲೆ ನಡೆಸಲಾಯಿತು ಹಾಗೂ ಅವರ ಕೈ ಕತ್ತರಿಸಲಾಯಿತು.

ಕೇಂದ್ರ ಸರಕಾರದ ೩ ವರ್ಷದ ಆಡಳಿತದ ಸಮಯದಲ್ಲಿ ಹಿಂಸಾಚಾರದ ಘಟನೆಗಳಲ್ಲಿ ಶೇಕಡ ೪೧ ರಷ್ಟು ಹೆಚ್ಚಳ – ಸಂಸತ್ತಿನಲ್ಲಿ ಸರಕಾರದ ಮಾಹಿತಿ

ನರೇಂದ್ರ ಮೋದಿಯವರ ೩ ವರ್ಷದ ಕಾರ್ಯಕಲಾಪದಲ್ಲಿ ದೇಶದಲ್ಲಿ ಹಿಂಸಾಚಾರದ ಘಟನೆಗಳಲ್ಲಿ ಶೇ. ೪೧ ರಷ್ಟು ಹೆಚ್ಚಳವಾಗಿದೆ, ಎಂಬ ಮಾಹಿತಿಯನ್ನು ಗೃಹ ರಾಜ್ಯ ಮಂತ್ರಿಗಳಾದ ಹಂಸರಾಜ ಅಹಿರರವರು ಸಂಸತ್ತಿಗೆ ನೀಡಿದರು. ಸಂಸತ್ತಿನಲ್ಲಿ ಗೋರಕ್ಷಕರ ತಥಾಕಥಿತ ಹಿಂಸಾಚಾರದ ಮೇಲೆ ಪ್ರಶ್ನೆಯನ್ನು ವಿಚಾರಿಸಲಾಯಿತು.

ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ಬದಲಾಯಿಸಿದರೆ ಕಾಶ್ಮೀರದಲ್ಲಿ ತ್ರಿವರ್ಣಧ್ವಜ ಹಾರಿಸಲು ಯಾರೂ ಇರುವುದಿಲ್ಲ ! – ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯ ಎಚ್ಚರಿಕೆ

ಜಮ್ಮೂ-ಕಾಶ್ಮೀರದ ಜನತೆಗೆ ಒದಗಿಸಿರುವ ವಿಶೇಷ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಅಥವಾ ರಾಜ್ಯದ ಸಂವಿಧಾನದತ್ತ ವಿಶೇಷ ಸ್ಥಾನಮಾನದಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸಿದರೆ ಕಾಶ್ಮೀರದಲ್ಲಿ ತ್ರಿವರ್ಣಧ್ವಜವನ್ನು ಹಾರಿಸಲು ಯಾರೂ ಇರಲಾರರು ಎಂದು ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಇವರು ಎಚ್ಚರಿಕೆ ನೀಡಿದ್ದಾರೆ.

ಸೈನಿಕರ ಕಲ್ಯಾಣಕ್ಕಾಗಿ ಶೇಕಡಾ ೧ ರಷ್ಟು ತೆರಿಗೆ ಪಡೆದುಕೊಳ್ಳಲಿ ! – ನಟ ಅಕ್ಷಯ ಕುಮಾರ್

ಮುಂಬೈ – ಭಾರತೀಯ ಜನತೆಯಿಂದ ಹೇಗೆ ಸ್ವಚ್ಛತೆಯ ತೆರಿಗೆ ಪಡೆದುಕೊಳ್ಳಲಾಗುತ್ತದೋ, ಅದೇ ರೀತಿ ಸೈನಿಕರ ಕಲ್ಯಾಣಕ್ಕಾಗಿ ಶೇಕಡಾ ೧ ರಷ್ಟು ಸೈನಿಕ ಕಲ್ಯಾಣ ತೆರಿಗೆಯೆಂದು ಪಡೆದುಕೊಳ್ಳಬೇಕು, ಎಂದು ನಟ ಅಕ್ಷಯ ಕುಮಾರ್‌ರವರು ಸರಕಾರಕ್ಕೆ ಆಗ್ರಹಿಸಿದರು. ಜುಲೈ ೨೬ ರಂದು ಕಾರ್ಗಿಲ್ ವಿಜಯ ದಿನದ ನಿಮಿತ್ತ ಮಹಾರಾಷ್ಟ್ರ ರಾಜ್ಯ ಸರಕಾರದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸಂಗೀತ-ನೃತ್ಯವನ್ನು ಭಾವಪೂರ್ಣವಾಗಿ ಹೇಗೆ ಮಾಡಬೇಕೆಂದು ಕಲಿಸುವ ಪರಮಪೂಜ್ಯ ಯೋಗಾಚಾರ್ಯ ದೇವಬಾಬಾರವರ ಆಶೀರ್ವಾದದಲ್ಲಿ ಅದ್ದೂರಿಯ ದ್ವಿಭಾಷಾ ನೃತ್ಯನಾಟಕ – ವಿಶ್ವಮಾತಾ ಗೋಮಾತಾ – ರಂಗ ಸಪ್ತಾಹ

ಭಾರತೀಯ ತಳಿಯ ಹಸುಗಳ ಉಳಿವಿನಿಂದ ಮನುಕುಲದ ಉಳಿವು ಸಾಧ್ಯ ಎಂಬ ಸತ್ಯದ ಪ್ರಚಾರವನ್ನು ಗುರಿಯಾಗಿಟ್ಟುಕೊಂಡು ಶ್ರೀ ಶಕ್ತಿದರ್ಶನ ಯೋಗಾ ಶ್ರಮವು ವಿನೂತನ ನೃತ್ಯ ನಾಟಕವನ್ನು ಪ್ರಸ್ತುತಪಡಿಸಿದೆ.

ಸಿಮಿಯ ಮಾಜಿ ಪ್ರಮುಖ ಸಫದರ್ ನಾಗೋರಿ ನಾರ್ಕೋ ಪರೀಕ್ಷೆಯಲ್ಲಿ ನೀಡಿದ ಮಾಹಿತಿ ಸಮಝೌತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ಪಾಕಿಸ್ತಾನದ ಕೈವಾಡ !

ಕಾಂಗ್ರೆಸ್ಸಿನ ಕಾಲದಲ್ಲಿ ಮಾಲೆಗಾವ್ ಮತ್ತು ಸಮಝೌತಾ ಬಾಂಬ್‌ಸ್ಫೋಟದ ನಂತರ ಹಿಂದೂಗಳನ್ನು ಉದ್ದೇಶಿಸಿ ಕೇಸರಿ ಉಗ್ರವಾದ ಎಂಬ ಶಬ್ದಪ್ರಯೋಗ ಮಾಡಲಾಯಿತು ! ಈ ಪ್ರಕರಣದಲ್ಲಿ ಕರ್ನಲ್ ಪುರೋಹಿತರನ್ನು ಬಂಧಿಸಲಾಯಿತು. ಈಗ ಅವರ ನಿರಪರಾಧಿ ತನವು ಸಿದ್ಧವಾಗುತ್ತಿದೆ. ಇದಕ್ಕೆ ಹೊಣೆಯಾಗಿರುವ ಕಾಂಗ್ರೆಸ್ಸಿಗರನ್ನು ಬಂಧಿಸಿ ಸೆರೆಮನೆಗೆ ತಳ್ಳಬೇಕು ! ನವ ದೆಹಲಿ – ಸಮಝೌತಾ ಎಕ್ಸ್‌ಪ್ರೆಸ್ ಬಾಂಬ್‌ಸ್ಫೋಟದಲ್ಲಿ ಪಾಕಿಸ್ತಾನದ್ದೇ ಕೈವಾಡವಿದೆ, ಎಂದು ನಿಷೇಧಿತ ಜಿಹಾದಿ ಸಂಘಟನೆ ಸಿಮಿಯ ಮಾಜಿ ಮುಖ್ಯಸ್ಥ ಸಫದರ್ ನಾಗೋರಿ ಅವನ ನಾರ್ಕೋ ಪರೀಕ್ಷೆಯ ಸಂದರ್ಭದಲ್ಲಿ ಮಾಹಿತಿ ನೀಡಿದನು. […]

ಜಗತ್ತಿಗೆ ಆರ್ಥಿಕ ನೇತೃತ್ವವನ್ನು ನೀಡುವ ದೇಶವನ್ನು ನಿರ್ಮಾಣ ಮಾಡಲಿಕ್ಕಿದೆ ! – ರಾಷ್ಟ್ರಪತಿ ರಾಮನಾಥ ಕೋವಿಂದ

ಭಾರತ ವಿಶ್ವಗುರು ಆಗಿತ್ತು. ಅದಕ್ಕೆ ಪುನಃ ಅದರ ಗತವೈಭವವನ್ನು ದೊರಕಿಸಿ ಜಗತ್ತಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುವ ಸಲುವಾಗಿ ಪ್ರಯತ್ನಿಸಲು ಇದೇ ಯೋಗ್ಯ ಸಮಯವಾಗಿದೆ ! ನವ ದೆಹಲಿ – ಈ ಶತಮಾನವು ಭಾರತದ್ದಾಗಿದ್ದು ಜಗತ್ತಿಗೆ ಆರ್ಥಿಕ ನೇತೃತ್ವವನ್ನು ನೀಡುವ ದೇಶವನ್ನಾಗಿ ನಿರ್ಮಾಣ ಮಾಡಲಿಕ್ಕಿದೆ, ಎಂದು ಹೊಸತಾಗಿ ರಾಷ್ಟ್ರಪತಿ ಹುದ್ದೆಯನ್ನು ಸ್ವೀಕರಿಸಿದ ರಾಮನಾಥ ಕೋವಿಂದ ಇವರು ರಾಷ್ಟ್ರಪತಿ ಹುದ್ದೆಯ ಪ್ರಮಾಣವಚನ ಸ್ವೀಕರಿಸಿದ ಸಮಯದಲ್ಲಿ ಮಾಡಿದ ಮಾರ್ಗದರ್ಶನದಲ್ಲಿ ಹೇಳಿದರು. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸರ್ವೋಚ್ಚ ನ್ಯಾಯಾಧೀಶ ಜೆ.ಎಸ್. ಖೇಹರ್ ಇವರು […]

ಪ್ರತಿಯೊಂದು ಶಾಲೆ, ಮಹಾವಿದ್ಯಾಲಯಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಂದೇ ಮಾತರಮ್ ಕಡ್ಡಾಯ ! – ಮದ್ರಾಸ್ ಉಚ್ಚನ್ಯಾಯಾಲಯ

ಪ್ರತಿಯೊಂದು ಶಾಲೆ, ಮಹಾವಿದ್ಯಾಲಯ ಮತ್ತು ವಿಶ್ವವಿದ್ಯಾಲಯಗಳಲ್ಲಿ ವಂದೇ ಮಾತರಮ್ ಹಾಡಲೇಬೇಕು. ವಾರದಲ್ಲಿ ಕನಿಷ್ಠ ಒಂದು ದಿನವಾದರೂ ಈ ರಾಷ್ಟ್ರ ಗೀತೆಯನ್ನು ಹಾಡಬೇಕು. ಸೋಮವಾರ ಅಥವಾ ಶುಕ್ರವಾರ ಈ ಗೀತೆಯನ್ನು ಹಾಡಿದರೆ ಅದರಿಂದ ಹೆಚ್ಚು ಲಾಭವಾಗುವುದು.