Close
ಆಷಾಢ ಶುಕ್ಲಪಕ್ಷ ಅಮವಾಸ್ಯೆ /ಪಥಮ , ಕಲಿಯುಗ ವರ್ಷ ೫೧೧೯

December 23, 2016

ಅಗ್ನಿಹೋತ್ರ (ಭಾವೀ ಮಹಾಯುದ್ಧದ ಕಾಲದಲ್ಲಿ ಎದುರಾಗುವ ಸಮಸ್ಯೆಗಳ ಸಮಯದಲ್ಲಿ ಹಾಗೂ ದಿನನಿತ್ಯದಲ್ಲಿಯೂ ಉಪಯುಕ್ತ !)

1408005191_vishvadev_450ಸನಾತನದ ಭಾವೀ ಆಪತ್ಕಾಲದ
ಸಂಜೀವನಿ 
ಈ ಗ್ರಂಥಮಾಲಿಕೆಯ ಗ್ರಂಥ!

ಮನೋಗತ

ತ್ರಿಕಾಲಜ್ಞಾನಿ ಸಂತರು, ಮುಂದೆ ಭೀಕರ ಆಪತ್ಕಾಲ ಬರಲಿದೆ ಮತ್ತು ಅದರಲ್ಲಿ ಜಗತ್ತಿನಲ್ಲಿನ ಬಹಳಷ್ಟು ಜನರು ನಾಶವಾಗುವವರಿದ್ದಾರೆ ಎಂದು ಹೇಳಿದ್ದಾರೆ. ಮುಂದೆ ಆಪತ್ಕಾಲ ಬರಲಿದೆ ಎಂದು ಹೇಳುವುದಕ್ಕಿಂತ ಈಗ ಆಪತ್ಕಾಲ ಪ್ರಾಾರಂಭವಾಗಿದೆ ಎನ್ನುವುದೇ ಸೂಕ್ತವಾಗಿದೆ. ಆಪತ್ಕಾಲದಲ್ಲಿ ಮೂರನೇ ಮಹಾಯುದ್ಧ ಪ್ರಾರಂಭವಾಗಬಹುದು. ಈಗ ಜಗತ್ತಿನಲ್ಲಿನ ಎಲ್ಲ ರಾಷ್ಟ್ರಗಳ ಬಳಿ ಎರಡನೇ ಮಹಾಯುದ್ಧಕ್ಕಿಂತ ಮಹಾ ಸಂಹಾರಕ ಅಣ್ವಸ್ತ್ರಗಳಿವೆ.

ಮುಂದೆ ಅವುಗಳನ್ನು ಒಬ್ಬರ ಮೇಲೊಬ್ಬರು ಉಪಯೋಗಿಸಬಹುದು. ಈ ಯುದ್ಧದಲ್ಲಿ ಬದುಕಬೇಕಾದರೆ, ಅಣ್ವಸ್ತ್ರಗಳನ್ನು ನಿಷ್ಕಿ ಪ್ರಭಾವಿ ಉಪಾಯಗಳು ಬೇಕು; ಹಾಗೆಯೇ ಈ ಅಣ್ವಸ್ತ್ರಗಳಿಂದ ಹೊರಸೂಸುವ ವಿಕಿರಣಗಳ ಹರಡುವಿಕೆಯನ್ನು ನಾಶಗೊಳಿಸುವ ಉಪಾಯಗಳೂ ಬೇಕು. ಇದಕ್ಕೆ ಸ್ಥೂಲದಲ್ಲಿನ ಉಪಾಯಗಳು ಉಪಯೋಗಕ್ಕೆ ಬರಲಾರವು, ಏಕೆಂದರೆ ಅಣುಬಾಂಬು ಸಾಮಾನ್ಯ ಬಾಂಬಿಗಿಂತ ಸೂಕ್ಷ್ಮ ವಾಗಿದೆ. ಸ್ಥೂಲ (ಉದಾ. ಬಾಣವನ್ನು ಬಿಟ್ಟು ಶತ್ರುವನ್ನು ನಾಶ ಮಾಡುವುದು), ಸ್ಥೂಲ ಅಧಿಕ ಸೂಕ್ಷ್ಮ (ಉದಾ. ಮಂತ್ರವನ್ನು ಹೇಳಿ ಬಾಣವನ್ನು ಬಿಡುವುದು), ಸೂಕ್ಷ್ಮತರ (ಉದಾ. ಕೇವಲ ಮಂತ್ರವನ್ನು ಹೇಳುವುದು) ಮತ್ತು ಸೂಕ್ಷ್ಮತಮ (ಉದಾ. ಸಂತರ ಸಂಕಲ್ಪ) ಹೀಗೆ ಮುಂದುಮುಂದಿನ ಪ್ರಭಾವಶಾಲಿ ಹಂತಗಳಿವೆ. ಸ್ಥೂಲಕ್ಕಿಂತ ಸೂಕ್ಷ್ಮವು ಅನೇಕ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಆದುದರಿಂದ ಅಣುಬಾಂಬಿನಂತಹ ಪ್ರಭಾವಿ ಸಂಹಾರಕ ವಿಕಿರಣಗಳ ಹರಡುವಿಕೆಯನ್ನು ತಡೆಗಟ್ಟಲು ಸೂಕ್ಷ್ಮದಲ್ಲಿಯೇ ಏನಾದರೂ ಮಾಡಬೇಕಾಗುತ್ತದೆ. ಇದಕ್ಕೆ ಋಷಿಮುನಿಗಳು ಯಜ್ಞದ ಪ್ರಥಮಾವತಾರವಾಗಿರುವ ಅಗ್ನಿಹೋತ್ರವನ್ನು ಮಾಡಲು ಹೇಳಿದ್ದಾರೆ. ಅಗ್ನಿಹೋತ್ರವು ಮಾಡಲು ಅತ್ಯಂತ ಸುಲಭ, ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಆಗುವ ಮತ್ತು ಸೂಕ್ಷ್ಮದಲ್ಲಿ ಪ್ರಭಾವಿ ಪರಿಣಾಮವನ್ನು ಬೀರುವ ಉಪಾಯ ವಾಗಿದೆ. ಇದರಿಂದ ವಾತಾವರಣವು ಚೈತನ್ಯಮಯ ವಾಗುತ್ತದೆ ಮತ್ತು ರಕವಚವೂ ನಿರ್ಮಾಣವಾಗುತ್ತದೆಪ್ರತಿದಿನ ಅಗ್ನಿಹೋತ್ರ ಮಾಡುವುದು ಕೇವಲ ಆಪತ್ಕಾಲದ ದೃಷ್ಟಿಯಿಂದ ಮಾತ್ರವಲ್ಲದೇ, ನಿತ್ಯವೂ ಉಪಯುಕ್ತವಾಗಿದೆ. ಈ ಲೇಖನದಿಂದ ವಾಚಕರಿಗೆ ಅಗ್ನಿಹೋತ್ರದ ಪರಿಚಯವಾಗುವುದು. ಅಗ್ನಿ ಹೋತ್ರದ ಬಗ್ಗೆ ಸವಿಸ್ತಾರ ವಿವೇಚನೆಯನ್ನು ಅಗ್ನಿಹೋತ್ರ ಈ ಗ್ರಂಥದಲ್ಲಿ ನೀಡಲಾಗಿದೆ. ವಾಚಕರು ಈ ಗ್ರಂಥವನ್ನು ಅವಶ್ಯವಾಗಿ ತಮ್ಮ ಬಳಿ ಸಂಗ್ರಹಿಸಿಡಬೇಕುಸಂತಮಹಾತ್ಮರು, ಜ್ಯೋತಿಷಿಗಳು ಮುಂತಾದವರು ಹೇಳಿದಂತೆ ಮುಂಬರುವ ಕಾಲವು ಭೀಕರ ಆಪತ್ಕಾಲವಾಗಿದ್ದು ಈ ಕಾಲದಲ್ಲಿ ಸಮಾಜವು ಅನೇಕ ಆಪತ್ತುಗಳನ್ನು ಎದುರಿಸಬೇಕಾಗಬಹುದು. ಇಂತಹ ಆಪತ್ಕಾಲದಲ್ಲಿ ತನ್ನೊಂದಿಗೆ ಕುಟುಂಬದವರ ಆರೋಗ್ಯವನ್ನು ರಕ್ಷಿಸುವುದು ದೊಡ್ಡ ಸವಾಲಾಗಿರುತ್ತದೆ. ಆಪತ್ಕಾಲದಲ್ಲಿ ಸಾರಿಗೆಯ ಸಾಧನಗಳು ಇಲ್ಲದಿರುವುದರಿಂದ ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವುದು, ಡಾಕ್ಟರ್ ಅಥವಾ ವೈದ್ಯರನ್ನು ಸಂಪರ್ಕಿಸುವುದು ಮತ್ತು ಮಾರುಕಟ್ಟೆಯಲ್ಲಿ ಔಷಧಿಗಳು ದೊರೆಯುವುದು ಕಠಿಣವಾಗುವುದು. ಈ ಆಪತ್ಕಾಲದಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ರೋಗಗಳನ್ನು ಎದುರಿಸುವ ಸಿದ್ಧತೆಯ ಒಂದು ಭಾಗವೆಂದು ಸನಾತನ ಸಂಸ್ಥೆಯು ಭಾವೀ ಆಪತ್ಕಾಲದಲ್ಲಿ ಸಂಜೀವನಿ ಈ ಗ್ರಂಥಮಾಲಿಕೆಯನ್ನು ತಯಾರಿಸಿದೆ. ೨೦.೧೧.೨೦೧೬ ತನಕ ಈ ಮಾಲಿಕೆಯ ೧೨ ಗ್ರಂಥಗಳು ಪ್ರಕಾಶನಗೊಂಡಿವೆ. ಈ ಗ್ರಂಥಮಾಲಿಕೆಯಲ್ಲಿ ಅಗ್ನಿಹೋತ್ರಈ ಗ್ರಂಥದ ಪರಿಚಯವನ್ನು ಈ ಲೇಖನದ ಮೂಲಕ ನೀಡುತ್ತಿದ್ದೇವೆ.

. ಅಗ್ನಿಹೋತ್ರ

೧ ಅ. ವ್ಯಾಖ್ಯೆ : ಅಗ್ನಿಹೋತ್ರವೆಂದರೆ ಅಗ್ನ ಯಂತರ್ಯಾಮಿ (ಅಗ್ನಿಯಲ್ಲಿ) ಆಹುತಿಯನ್ನು ಅರ್ಪಿಸಿ ಮಾಡಲಾಗುವ ಈಶ್ವರನ ಉಪಾಸನೆ.

೧ ಆ. ಅಗ್ನಿಹೋತ್ರದ ಮಹತ್ವ

. ಅಗ್ನಿಹೋತ್ರದಿಂದ ನಿರ್ಮಾಣವಾಗುವ ಅಗ್ನಿಯು ರಜತಮ ಕಣಗಳನ್ನು ವಿಘಟನೆ ಮಾಡುತ್ತದೆ ಮತ್ತು ವಾಯುಮಂಡಲದಲ್ಲಿ ದೀರ್ಘ ಕಾಲ ಉಳಿದುಕೊಳ್ಳುತ್ತದೆ, ಆದುದರಿಂದ ಅಗ್ನಿಹೋತ್ರವನ್ನು ಸತತವಾಗಿ ಮಾಡಿದರೆ ಅದು ಮಾನವನ ಸುತ್ತಲೂ ೧೦ ಅಡಿ ದೂರದಲ್ಲಿ ರಕವಚವನ್ನು ನಿರ್ಮಾಣ ಮಾಡುತ್ತದೆ. ಈ ಕವಚವು ತೇಜದ ಸ್ಪರ್ಶಕ್ಕೆ ಅತ್ಯಂತ ಸಂವೇದನ ಶೀಲವಾಗಿರುತ್ತದೆ. ಸೂಕ್ಷ ಈ ಕವಚವು ನಸುಗೆಂಪು ಬಣ್ಣದಲ್ಲಿ ಕಾಣಿಸುತ್ತದೆ.

. ಯಾವಾಗ ಒಳ್ಳೆಯ ವಿಷಯಗಳಿಗೆ ಸಂಬಂಧಿಸಿದ ತೇಜವು ಈ ಕವಚದ ಸಮೀಪ ಬರುತ್ತದೆಯೋ, ಆಗ ಕವಚದಲ್ಲಿನ ನಸುಗೆಂಪು ಬಣ್ಣದ ತೇಜದಲ್ಲಿನ ಕಣಗಳು ಈ ತೇಜವನ್ನು ತಮ್ಮಲ್ಲಿ ಸಮಾವೇಶಗೊಳಿಸಿಕೊಂಡು ಕವಚವನ್ನು ಬಲಶಾಲಿಯಾಗಿ ಮಾಡುತ್ತವೆ.

. ರಜತಮಾತ್ಮಕ ತೇಜಕಣಗಳು ಕರ್ಕಶ ಸ್ವರೂಪದಲ್ಲಿ ಆಘಾತವನ್ನು ನಿರ್ಮಾಣ ಮಾಡುತ್ತವೆ; ಆದುದರಿಂದ ಅವು ಹತ್ತಿರ ಬರುವುದು ಕವಚಕ್ಕೆ ಮೊದಲೇ ತಿಳಿಯುತ್ತದೆ ಮತ್ತು ಅದು ಪ್ರತ್ಯುತ್ತರವೆಂದು ತನ್ನಿಂದ ಅನೇಕ ತೇಜಲಹರಿಗಳನ್ನು ವೇಗದಿಂದ ಹೊರಸೂಸಿ ಆ ಕರ್ಕಶ ನಾದವನ್ನೇ ನಾಶ ಮಾಡುತ್ತದೆ ಮತ್ತು ಅದರಲ್ಲಿನ ನಾದವನ್ನು ಉತ್ಪನ್ನ ಮಾಡುವ ತೇಜಕಣಗಳನ್ನೂ ನಾಶ ಮಾಡುತ್ತದೆ. ಇದರಿಂದ ಆ ರಜತಮಾತ್ಮಕ ಲಹರಿಗಳಲ್ಲಿನ ತೇಜವು ಆಘಾತ ಮಾಡಲು ಸಾಮರ್ಥ್ಯಹೀನವಾಗುತ್ತದೆ; ಅಂದರೆ ಬಾಂಬ್‌ನಲ್ಲಿನ ಆಘಾತ ಮಾಡುವ ವಿಘಾತಕ ಸ್ವರೂಪದಲ್ಲಿ ಹೊರಸೂಸುವ ಶಕ್ತಿಯ ವಲಯಗಳು ಮೊದಲೇ ನಾಶವಾಗುವುದರಿಂದ ವಿಕಿರಣಗಳನ್ನು ಹೊರಸೂಸುವ ದೃಷ್ಟಿಯಿಂದ ಬಾಂಬ್ ನಿಷ್ಕ್ರೀಯ ವಾಗುತ್ತದೆ. ಆದುದರಿಂದ ಅದನ್ನು ಹಾಕಿದರೂ ಮುಂದೆ ಆಗುವ ಮನುಷ್ಯಹಾನಿಯು ಕೆಲವು ಪ್ರಮಾಣದಲ್ಲಿಯಾದರೂ ತಡೆಗಟ್ಟಲ್ಪಡುತ್ತದೆ. ಬಾಂಬ್ ಸ್ಫೋಟವಾದರೂ, ಅದರಿಂದ ವೇಗವಾಗಿ ಹೋಗುವ ತೇಜರೂಪಿ ರಜತಮಾತ್ಮಕ ಲಹರಿಗಳು ವಾಯುಮಂಡಲದಲ್ಲಿನ ಸೂಕ್ಷ ಅಗ್ನಿಕವಚಕ್ಕೆ ಅಪ್ಪಳಿಸಿ ಅಲ್ಲಿಯೇ ವಿಘಟನೆಯಾಗುತ್ತವೆ ಮತ್ತು ಅವುಗಳ ಸೂಕ್ಷ್ಮಪರಿಣಾಮವೂ ಅಲ್ಲಿಯೇ ಕೊನೆಗೊಳ್ಳುವುದರಿಂದ ವಾಯುಮಂಡಲವು ಮುಂದಿನ ಪ್ರದೂಷಣೆಯ ಅಪಾಯದಿಂದ ಮುಕ್ತವಾಗುತ್ತದೆ. – ಓರ್ವ ವಿದ್ವಾಂಸ (ಸನಾತನದ ಸದ್ಗುರು (ಸೌ.) ಅಂಜಲಿ ಗಾಡಗೀಳರ ಲೇಖನಗಳು ಓರ್ವ ವಿದ್ವಾಸ, ಗುರುತತ್ತ್ವ ಮುಂತಾದ ಹೆಸರಿನಿಂದ ಪ್ರಸಿದ್ಧವಾಗಿವೆ), ೧೮..೨೦೦೮, ಸಾಯಂ. .೫೫)

೧ ಇ. ಅಗ್ನಿಹೋತ್ರದ

. ಚೈತನ್ಯದಾಯಕ ಮತ್ತು ಔಷಧಿ ವಾತಾವರಣ ನಿರ್ಮಾಣವಾಗುತ್ತದೆ.

. ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ಆಹಾರಧಾನ್ಯಗಳು ಬೆಳೆಯುತ್ತವೆ: ಅಗ್ನಿಹೋತ್ರದಿಂದ ವನಸ್ಪತಿಗಳಿಗೆ ವಾತಾವರಣದಿಂದ ಪೋಷಕದ್ರವ್ಯಗಳು ಸಿಗುತ್ತವೆ ಮತ್ತು ಅವು ಒಳ್ಳೆಯ ರೀತಿಯಲ್ಲಿ ಬೆಳೆಯುತ್ತವೆ. ಅಗ್ನಿಹೋತ್ರದ ಭಸ್ಮದಿಂದ ಗದ್ದೆ ಮತ್ತು ವನಸ್ಪತಿಗಳ ಬೆಳವಣಿಗೆಯ ಮೇಲೆ ಉತ್ತಮ ಪರಿಣಾಮವಾಗುತ್ತದೆ. ಇದರ ಪರಿಣಾಮದಿಂದ ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ದವಸಧಾನ್ಯ, ಹಣ್ಣು, ಹೂವು ಮತ್ತು ಕಾಯಿಪಲ್ಲೆಗಳು ಬೆಳೆಯುತ್ತವೆ. – ಹೋಮಾ ಥೆರಪಿ ಹೆಸರಿನ ಕರ ಪತ, ಫೈವ್‌ಫೋಲ್ಡ್ ಪಾಥ ಮಿಶನ್, ೪೦, ಅಶೋಕ ನಗರ, ಧುಳೆ, ಮಹಾರಾಷ್ಟ್ರ.

. ಅಗ್ನಿಹೋತ್ರದ ವಾತಾವರಣದಿಂದ ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳು ಆಗುತ್ತವೆ.

. ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳಾಗಿ ಅವರ ಮೇಲೆ ಒಳ್ಳೆಯ ಸಂಸ್ಕಾರಗಳಾಗುತ್ತವೆ.

. ಸಿಡಿಮಿಡಿಗೊಳ್ಳುವ ಮತ್ತು ಹಠ ಮಾಡುವ ಮಕ್ಕಳು ಶಾಂತ ಮತ್ತು ಬುದ್ಧಿವಂತರಾಗುತ್ತಾರೆ.

. ಅಧ್ಯಯನದಲ್ಲಿ ಮಕ್ಕಳಿಗೆ ಏಕಾಗ್ರತೆ ಬರುತ್ತದೆ.

. ಮಂದಬುದ್ಧಿಯ ಮಕ್ಕಳು ಅವರ ಮೇಲೆ ಮಾಡಲಾಗುವ ಚಿಕಿತ್ಸೆಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಾರೆ.

. ಅಗ್ನಿಹೋತ್ರದಿಂದ ಪ್ರಬಲ ಇಚ್ಛಾಶಕ್ತಿ ನಿರ್ಮಾಣವಾಗಿ ಮನೋ ರೋಗಗಳು ಗುಣವಾಗುವವು ಮತ್ತು ಮಾನಸಿಕ ಬಲ ಪ್ರಾಪ್ತವಾಗುವುದು :

ನಿಯಮಿತವಾಗಿ ಅಗ್ನಿಹೋತ್ರವನ್ನು ಮಾಡುವ ವಿವಿಧ ಸ್ತರದಲ್ಲಿನ ಸ್ತ್ರೀಪುರುಷರಲ್ಲಿ ಮತ್ತು ಬಾಲವೃದ್ಧರಲ್ಲಿ ಒಂದುರೀತಿಯ ಹೆಚ್ಚಿನ ಸಮಾಧಾನ, ಜೀವನದ ಕಡೆಗೆ ನೋಡುವ ಸಕಾರಾತ್ಮಕ ದೃಷ್ಟಿಕೋನ, ಮನಃಶಾಂತಿ, ಆತ್ಮವಿಶ್ವಾಸ ಮತ್ತು ಕಾರ್ಯದ ಕಡೆಗೆ ಹೆಚ್ಚು ಒಲವು ಇಂತಹ ಗುಣಗಳು ನಿರ್ಮಾಣವಾಗಿ ಹೆಚ್ಚಳವಾಗುತ್ತಿರುವುದು ಅನುಭವಕ್ಕೆ ಬಂದಿರುತ್ತದೆ. ಸಾರಾಯಿ ಮತ್ತು ಇತರ ಹಾನಿಕರ ಮಾದಕದ್ರವ್ಯಗಳ ವ್ಯಸನಾಧೀನ ವ್ಯಕ್ತಿಗಳು ಅಗ್ನಿಹೋತ್ರದ ವಾತಾವರಣದಲ್ಲಿ ಆ ವ್ಯಸನಗಳಿಂದ ಮುಕ್ತರಾಗಬಲ್ಲರು; ಏಕೆಂದರೆ ಅವರಲ್ಲಿ ಪ್ರಬಲ ಇಚ್ಛಾಶಕ್ತಿ ನಿರ್ಮಾಣವಾಗುತ್ತದೆ, ಎಂಬುದು ಗಮನಕ್ಕೆ ಬಂದಿದೆ. – ಡಾ. ಶ್ರೀಕಾಂತ ಶ್ರೀಗಜಾನನಮಹಾರಾಜ ರಾಜೀಮವಾಲೆ, ಶಿವಪುರಿ, ಅಕ್ಕಲಕೋಟ.

. ನರವ್ಯೆಹದ ಮೇಲಾಗುವ ಪರಿಣಾಮ : ಜ್ವಾಲೆಯಿಂದ ಹೊರ ಬರುವ ಹೊಗೆಯು ಮೆದುಳು ಮತ್ತು ನರವ್ಯೆಹದ ಮೇಲೆ ಪ್ರಭಾವೀ ಪರಿಣಾಮವನ್ನು ಬೀರುತ್ತದೆ. – ಹೋಮಾ ಥೆರಪಿ ಹೆಸರಿನ ಕರಪತ, ಫೈವ್‌ಫೋಲ್ಡ್ ಪಾಥ ಮಿಶನ್, ೪೦, ಅಶೋಕನಗರ, ಧುಳೆ, ಮಹಾರಾಷ್ಟ್ರ.

. ರೋಗಜಂತುಗಳ ಪ್ರತಿರೋಧ : ಅಗ್ನಿಹೋತ್ರದ ಔಷಧಿಯುಕ್ತ ವಾತಾವರಣದಿಂದಾಗಿ ರೋಗಕಾರಿ ಜಂತುಗಳ ಬೆಳವಣಿಗೆಯ ಮೇಲೆ ಪ್ರತಿಬಂಧ ಬರುತ್ತದೆ ಎಂದು ಕೆಲವು ಸಂಶೋಧಕರಿಗೆ ತಿಳಿದುಬಂದಿದೆ. – ಡಾ. ಶ್ರೀಕಾಂತ ಶ್ರೀಗಜಾನನ ಮಹಾರಾಜ ರಾಜೀಮವಾಲೆ, ಶಿವಪುರಿ, ಅಕ್ಕಲಕೋಟ.

೧ ಈ. ಅಗ್ನಿಹೋತ್ರದ ಸ್ವರೂಪ ಮತ್ತು ಪ್ರಕ್ರಿಯೆ : ಸೂರ್ಯನು ಶಕ್ತಿಯನ್ನು ಕೊಡುತ್ತಾನೆ ಮತ್ತು ಶಕ್ತಿಯನ್ನು ತೆಗೆದುಕೊಳ್ಳುತ್ತಾನೆ. ಇದರಿಂದ ಪ್ರದೂಷಣೆಯನ್ನು ನಾಶಗೊಳಿಸಲು ಯಾವ ಸ್ಥಿತಿಯು ಆವಶ್ಯಕ ಮತ್ತು ಪೂರಕವಾಗಿರುತ್ತದೆಯೋ, ಅದು ತಾನಾಗಿಯೇ ನಿರ್ಮಾಣವಾಗುತ್ತದೆ. ಇದರಿಂದ ಪೃಥ್ವಿಗೆ ಶಾಂತಸ್ಥಿತಿ ಪ್ರಾಾಪ್ತವಾಗುತ್ತದೆ. ಅಗ್ನಿಹೋತ್ರವು ಜನಿತ್ರವಾಗಿದೆ (ಜನರೇಟರ್) ಮತ್ತು ಅದರಲ್ಲಿನ ಅಗ್ನಿಝೋತವು ಯಂತ್ರವಾಗಿದೆ (ಟರ್ಬೈನ್). ಅಗ್ನಿಯ ಮಾಧ್ಯಮದಿಂದ ಆಕಳ ಬೆರಣಿ, ಆಕಳ ತುಪ್ಪ ಮತ್ತು ಅಕ್ಷತೆಯ ಅಕ್ಕಿ ಈ ಘಟಕಗಳು ಪರಸ್ಪರ ಸಂಯೋಗಗೊಂಡು ಒಂದು ಅಪೂರ್ವ ಶಕ್ತಿಯು ನಿರ್ಮಾಣವಾಗುತ್ತದೆ. ಅದು ಸುತ್ತಮುತ್ತಲಿನ ವಸ್ತುಗಳ ಮೇಲೆ ಅಪ್ಪಳಿಸುತ್ತದೆ, ಅವುಗಳ ಸುತ್ತಲೂ ಹರಡುತ್ತದೆ, ಅವುಗಳಲ್ಲಿನ ವಿಘಾತಕ ಶಕ್ತಿಯನ್ನು ನಿಷ್ಕ್ರೀಯಗೊಳಿಸುತ್ತದೆ. ಇದರಿಂದ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಆಮೇಲೆ ಆ ವಾತಾವರಣದಲ್ಲಿನ ಸಾವಯವ (ಜೈವಿಕ) ದ್ರವ್ಯಗಳಿಗೆ ಬದುಕಲು, ವೃದ್ಧಿಯಾಗಲು ಮತ್ತು ವಿಸ್ತಾರವಾಗಲು ಪೂರಕ ಇಂಧನಗಳ ಪೂರೈಕೆಯನ್ನು ಮಾಡಲಾಗುತ್ತದೆ. ಈ ರೀತಿಯಲ್ಲಿ ಅಗ್ನಿಹೋತ್ರ ಪ್ರಕ್ರಿಯೆಯು ವಾಯುಮಂಡಲದ ಹಾನಿಯನ್ನು ಪರೋಕ್ಷವಾಗಿ ತುಂಬಿಸುತ್ತದೆ.

ಹೋಮಾ ಥೆರಪಿ ಹೆಸರಿನ ಕರಪತ್ರ, ಫೈವ್‌ಫೋಲ್ಡ್ ಪಾಥ ಮಿಶನ್, ೪೦, ಅಶೋಕನಗರ, ಧುಳೆ, ಮಹಾರಾಷ್ಟ್ರ.

೧ ಉ. ಹವನ

೧ ಉ ೧. ಹವನ ಪಾತ್ರೆ

೧ ಉ ೧ ಅ. ಪಿರಮಿಡ್ ಆಕಾರದ ತಾಮ್ರದ ಪಾತ್ರೆ : ಅಗ್ನಿಹೋತ್ರಕ್ಕಾಗಿ ವಿಶಿಷ್ಟ ಆಕಾರದ ತಾಮ್ರದ ಪಿರಮಿಡ್ ಪಾತ್ರೆಯು ಆವಶ್ಯಕವಾಗಿದೆ.

೧ ಉ ೨. ಹವನದ್ರವ್ಯಗಳು

೧ ಉ ೨ ಅ. ಗೋವಂಶದ ಬೆರಣಿ : ಆಕಳ ಸೆಗಣಿಯನ್ನು ತೆಗೆದು ಕೊಳ್ಳಬೇಕು. ಸೆಗಣಿಯಿಂದ ಚಪ್ಪಟೆ ಆಕಾರದಲ್ಲಿ ತೆಳುವಾದ ಬೆರಣಿಗಳನ್ನು ತಟ್ಟಬೇಕು ಮತ್ತು ಬಿಸಿಲಿನಲ್ಲಿ ಒಣಗಿಸಬೇಕು. ಒಣಗಿದ ಬೆರಣಿಗಳಿಂದ ಅಗ್ನಿಹೋತ್ರಕ್ಕಾಗಿ ಅಗ್ನಿಯನ್ನು ತಯಾರಿಸಬೇಕು.

೧ ಉ ೨ ಆ. ಅಕ್ಕಿ (ಅಕ್ಷತೆ) : ಅಕ್ಕಿಯನ್ನು ಪಾಲಿಶ್ ಮಾಡಿದಾಗ ಅದರಲ್ಲಿನ ಗುಣಧರ್ಮಗಳು ನಾಶವಾಗುತ್ತವೆ; ಆದುದರಿಂದ ಪಾಲಿಶ್ ಮಾಡಿದ ಅಕ್ಕಿಯನ್ನು ಉಪಯೋಗಿಸಬಾರದು. ಅಕ್ಕಿಕಾಳು ತುಂಡಾಗಿದ್ದರೆ ಅವುಗಳಲ್ಲಿನ ಸೂಕ್ಷ್ಮಶಕ್ತಿಯ ಅಂತರ್‌ರಚನೆಯು ನಾಶ ವಾಗುತ್ತದೆ. ಆದುದರಿಂದ ಅವು ಚೈತನ್ಯವನ್ನು ನೀಡುವ ಅಗ್ನಿಹೋತ್ರಕ್ಕೆ ಅಪಾತ್ರವಾಗುತ್ತವೆ. ಆದುದರಿಂದ ಪಾಲಿಶ್ ಮಾಡದ ಅಖಂಡ ಅಕ್ಕಿಯನ್ನೇ ಉಪಯೋಗಿಸಬೇಕು.

೧ ಉ ೨ ಇ. ಆಕಳ ತುಪ್ಪ : ಆಕಳ ಹಾಲಿನಿಂದ ತಯಾರಿಸಿದ ಬೆಣ್ಣೆಯನ್ನು ಮಂದ ಅಗ್ನಿಯ ಮೇಲೆ ಕಾಯಿಸಬೇಕು. ಕೆಳಭಾಗದಲ್ಲಿ ಬಿಳಿ ಬಣ್ಣದ ಪದಾರ್ಥವು ಕಾಣಿಸತೊಡಗಿದಾಗ ಅದನ್ನು ಸೋಸಿ ತೆಗೆಯಬೇಕು. ಉಳಿದ ದ್ರವ್ಯವೆಂದರೆ ತುಪ್ಪ. ಈ ತುಪ್ಪವನ್ನು ಶೀತಪೆಟ್ಟಿಗೆಯಲ್ಲಿ (ಫ್ರಿಿಜ್‌ನಲ್ಲಿ) ಇಡದಿದ್ದರೂ ಬಹಳ ದಿನಗಳವರೆಗೆ ಚೆನ್ನಾಗಿಯೇ ಉಳಿಯುತ್ತದೆ. ತುಪ್ಪವು ಒಂದು ವಿಶೇಷ ಔಷಧಿ ಪದಾರ್ಥವಾಗಿದೆ. ಅದನ್ನು ಅಗ್ನಿಹೋತ್ರದ ಅಗ್ನಿಯಲ್ಲಿ ಹವ್ಯ ಪದಾರ್ಥವೆಂದು ಉಪಯೋಗಿಸಿದರೆ ಅದು ವಹನ ಪ್ರತಿನಿಧಿಯಾಗಿ ಸೂಕ್ಷ್ಮ ಇಂಧನವನ್ನು (ಶಕ್ತಿಯನ್ನು) ತೆಗೆದುಕೊಂಡು ಹೋಗುವ ಕಾರ್ಯವನ್ನು ಮಾಡುತ್ತದೆ. ಆಕಳ ತುಪ್ಪದಲ್ಲಿ ಶಕ್ತಿಶಾಲೀ ಇಂಧನವು ಸುಪ್ತಾವಸ್ಥೆಯಲ್ಲಿರುತ್ತದೆ. – ಹೋಮಾ ಥೆರಪಿ ಹೆಸರಿನ ಕರಪತ್ರ, ಫೈವ್‌ಫೋಲ್ಡ್ ಪಾಥ ಮಿಶನ್, ೪೦, ಅಶೋಕನಗರ, ಧುಳೆ, ಮಹಾರಾಷ್ಟ್ರ.

೧ ಉ ೩. ಅಗ್ನಿಹೋತ್ರದ ಕೃತಿ

೧ ಉ ೩ ಅ. ಅಗ್ನಿಹೋತ್ರ ಮಾಡುವಾಗ ಪೂರ್ವದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು.

೧ ಉ ೩ ಆ. ಅಗ್ನಿಹೋತ್ರಕ್ಕಾಗಿ ಅಗ್ನಿಯನ್ನು ಪ್ರಜ್ವಲಿಸುವುದು

೧ ಉ ೩ ಆ ೧. ಅಗ್ನಿಯನ್ನು ಪ್ರಜ್ವಲಿಸುವ ಕೃತಿ : ಹವನಪಾತ್ರೆಯಲ್ಲಿ ಎಲ್ಲಕ್ಕಿಂತ ಕೆಳಗೆ ಸಣ್ಣ ಆಕಾರದ ಒಂದು ಬೆರಣಿಯ ಚಪ್ಪಟೆ ತುಂಡನ್ನು ಇಡಬೇಕು. ಅದರ ಮೇಲೆ ತುಪ್ಪವನ್ನು ಹಚ್ಚಿದ ಬೆರಣಿಗಳ ತುಂಡುಗಳನ್ನು (ಬೆರಣಿಯ ನೇರ ಮತ್ತು ಅಡ್ಡ ತುಂಡುಗಳ ೨೩ ಪದರು) ಇಡಬೇಕು. ಎರಡು ಬೆರಣಿಗಳ ನಡುವೆ ಗಾಳಿ ಓಡಾಡುವ ಹಾಗೆ ಟೊಳ್ಳುಗಳಿರಬೇಕು. ನಂತರ ಬೆರಣಿಯ ಒಂದು ತುಂಡಿಗೆ ಆಕಳ ತುಪ್ಪವನ್ನು ಹಚ್ಚಿ ಪ್ರಜ್ವಲಿಸಬೇಕು ಮತ್ತು ಆ ತುಂಡನ್ನು ಹವನಪಾತ್ರೆಯಲ್ಲಿಡಬೇಕು. ಸ್ವಲ್ಪ ಸಮಯದಲ್ಲಿ ಬೆರಣಿಗಳ ಎಲ್ಲ ತುಂಡುಗಳು ಪ್ರಜ್ವಲಿಸುವವು. ಅಗ್ನಿಯನ್ನು ಪ್ರಜ್ವಲಿಸಲು ಗಾಳಿ ಹಾಕಲು ಕೈಬೀಸಣಿಗೆಯನ್ನು ಉಪಯೋಗಿಸಬೇಕು; ಬಾಯಿಯಿಂದ ಊದಿ ಅಗ್ನಿಯನ್ನು ಪ್ರಜ್ವಲಿಸಬಾರದು, ಏಕೆಂದರೆ ಹೀಗೆ ಮಾಡುವುದರಿಂದ ಬಾಯಿಯಲ್ಲಿನ ರೋಗಜಂತುಗಳು ಅಗ್ನಿಯಲ್ಲಿ ಹೋಗುತ್ತವೆ. ಅಗ್ನಿಯನ್ನು ಪ್ರಜ್ವಲಿಸಲು ಸೀಮೆಎಣ್ಣೆಯಂತಹ ಜ್ವಲನಶೀಲ ಪದಾರ್ಥಗಳನ್ನು ಉಪಯೋಗಿಸಬಾರದು. ಅಗ್ನಿಯನ್ನು ಧೂಮರಹಿತವಾಗಿ ಪ್ರಜ್ವಲಿಸಬೇಕು, ಅಂದರೆ ಅದರಿಂದ ಹೊಗೆ ಬರಬಾರದು.

೧ ಉ ೩ ಇ. ಅಗ್ನಿಹೋತ್ರ ಮಂತ್ರ

೧ ಉ ೩ ಇ. . ಪಠಿಸಬೇಕಾದ ಮಂತ್ರ

. ಸೂರ್ಯೋದಯದ ಸಮಯದಲ್ಲಿ

. ಸೂರ್ಯಾಯ ಸ್ವಾಹಾ ಸೂರ್ಯಾಯ ಇದಮ್ ನ ಮಮ

. ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಮ್ ನ ಮಮ

. ಸೂರ್ಯಾಸ್ತದ ಸಮಯದಲ್ಲಿ

. ಅಗ್ನಯೇ ಸ್ವಾಹಾ ಅಗ್ನಯೇ ಇದಮ್ ನ ಮಮ

. ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಮ್ ನ ಮಮ

ಹೋಮಾ ಥೆರಪಿ ಹೆಸರಿನ ಕರಪತ, ಫೈವ್‌ಫೋಲ್ಡ್ ಪಾಥ ಮಿಶನ್, ೪೦, ಅಶೋಕನಗರ, ಧುಳೆ, ಮಹಾರಾಷ್ಟ್ರ.

ಮಂತ್ರವನ್ನು ಯಾವಾಗ ಮತ್ತು ಎಷ್ಟು ಸಮಯ ಹೇಳಬೇಕು ಹಾಗೂ ಅಗ್ನಿಹೋತ್ರದ ಪ್ರತ್ಯಕ್ಷ ಕೃತಿ, ಇವುಗಳಿಗಾಗಿ ಅಂಶ ೧ ಉ ೩ಉ. ಹವನದ್ರವ್ಯವನ್ನು ಅಗ್ನಿಯಲ್ಲಿ ಬಿಡುವುದು ನೋಡಬೇಕು.

೧ ಉ ೩ ಇ ೨. ಮಂತ್ರಗಳ ಉಚ್ಚಾರವನ್ನು ಹೇಗೆ ಮಾಡಬೇಕು ? : ಮಂತ್ರಗಳ ಉಚ್ಚಾರವು ಅಗ್ನಿಹೋತ್ರದ ಸ್ಥಳದಲ್ಲಿ ಝೇಂಕರಿಸುವಂತಹ ನಾದಮಯ ರೀತಿಯಲ್ಲಿ, ಹೆಚ್ಚು ಗಡಿಬಡಿಯಿಂದಲೂ ಅಲ್ಲ (ವೇಗವಲ್ಲದ)ಮತ್ತು ಹೆಚ್ಚು ನಿಧಾನವಾಗಿಯೂ ಅಲ್ಲ, ಹೀಗೆ ಸ್ಪಷ್ಟ ಮತ್ತು ಗಟ್ಟಿಧ್ವನಿಯಲ್ಲಿ ಹೇಳಬೇಕು.

೧ ಉ ೩ ಇ ೩. ಮಂತ್ರವನ್ನು ಹೇಳುವಾಗ ಭಾವ ಹೇಗಿರಬೇಕು ? : ಮಂತ್ರದಲ್ಲಿನ ಸೂರ್ಯ, ಅಗ್ನಿ, ಪ್ರಜಾಪತಿ ಈ ಶಬ್ದಗಳು ಈಶ್ವರ ವಾಚಕವಾಗಿವೆ. ಸೂರ್ಯ, ಅಗ್ನಿ, ಪ್ರಜಾಪತಿ ಇವರ ಆಂತರ್ಯದಲ್ಲಿರುವ ಪರಮಾತ್ಮನ ಶಕ್ತಿಗೆ ನಾನು ಆಹುತಿಯನ್ನು ಅರ್ಪಿಸುತ್ತಿದ್ದೇನೆ, ಇದು ನನ್ನದಲ್ಲ ಎಂಬ ಅರ್ಥದಲ್ಲಿ ಈ ಮಂತ್ರವಿದೆ. ಇಡೀ ಸೃಷ್ಟಿಯನ್ನು ನಿರ್ಮಿಸುವ, ಅದನ್ನು ಧಾರಣೆ ಮಾಡುವ ಮತ್ತು ಅದರ ಪೋಷಣೆ ಮಾಡುವ ಪರಮಾತ್ಮನ ಶಕ್ತಿಯ ಕುರಿತು ಶರಣಾಗತಭಾವವನ್ನು ಈ ಮಂತ್ರದಲ್ಲಿ ಹೇಳಲಾಗಿದೆ; ಆದುದರಿಂದ ಈ ಮಂತ್ರವನ್ನು ಶರಣಾಗತಭಾವದಿಂದ ಹೇಳಬೇಕು.

೧ ಉ ೩ ಇ ೪. ಮಂತ್ರವನ್ನು ಯಾರು ಹೇಳಬೇಕು ? : ಒಬ್ಬ ವ್ಯಕ್ತಿಯು ಅಗ್ನಿಹೋತ್ರವನ್ನು ಮಾಡುವಾಗ, ಮನೆಯಲ್ಲಿರುವ ಇತರ ಸದಸ್ಯರು ಆ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದು, ಆಹುತಿ ನೀಡುವ ವ್ಯಕ್ತಿಯೊಂದಿಗೆ ಅಗ್ನಿಹೋತ್ರದ ಮಂತ್ರವನ್ನು ಹೇಳಬಹುದು. – ಡಾ. ಶ್ರೀಕಾಂತ ಶ್ರೀಗಜಾನನಮಹಾರಾಜ ರಾಜೀಮವಾಲೆ, ಶಿವಪುರಿ, ಅಕ್ಕಲಕೋಟ.

೧ ಉ ೩ ಉ. ಹವನದ್ರವ್ಯಗಳನ್ನು ಅಗ್ನಿಯಲ್ಲಿ ಹಾಕುವುದು : ಎರಡು ಚಿಟಿಕೆ ಅಕ್ಕಿಯನ್ನು ಅಂಗೈಯಲ್ಲಿ ಅಥವಾ ಒಂದು ತಾಮ್ರದ ತಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಅದರ ಮೇಲೆ ಕೆಲವು ಹನಿ ಆಕಳ ತುಪ್ಪವನ್ನು ಹಾಕಬೇಕು. ಸೂರ್ಯೋದಯಕ್ಕೆ (ಹಾಗೂ ಸೂರ್ಯಾಸ್ತದ) ಸರಿಯಾದ ಸಮಯದಲ್ಲಿ ಮೊದಲನೆಯ ಮಂತ್ರವನ್ನು ಒಮ್ಮೆ ಹೇಳಬೇಕು ಮತ್ತು ಸ್ವಾಹಾ ಶಬ್ದವನ್ನು ಹೇಳಿದ ನಂತರ ಬಲಗೈಯ ಮಧ್ಯಮಾ (ಮಧ್ಯದ ಬೆರಳು), ಅನಾಮಿಕಾ (ಕಿರುಬೆರಳಿನ ಹತ್ತಿರದ ಬೆರಳು) ಮತ್ತು ಹೆಬ್ಬೆರಳಿನ ಚಿಟಿಕೆಯಲ್ಲಿ (ಈ ಸಮಯದಲ್ಲಿ ಹೆಬ್ಬೆರಳನ್ನು ಆಕಾಶದ ದಿಕ್ಕಿಗೆ ಮಾಡಬೇಕು) ಮೇಲಿನ ಅಕ್ಕಿತುಪ್ಪದ ಮಿಶ್ರಣವನ್ನು ತೆಗೆದುಕೊಂಡು ಅಗ್ನಿಯಲ್ಲಿ ಹಾಕಬೇಕು. (ಬೆರಳುಗಳ ಚಿಟಿಕೆಯಲ್ಲಿ ಹಿಡಿಸುವಷ್ಟು ಅಕ್ಕಿ ಸಾಕಾಗುತ್ತದೆ.) ಆಮೇಲೆ ಎರಡನೇ ಮಂತ್ರವನ್ನು ಒಮ್ಮೆ ಹೇಳಬೇಕು ಮತ್ತು ಸ್ವಾಹಾ ಶಬ್ದವನ್ನು ಹೇಳಿದ ನಂತರ ಬಲಗೈಯಿಂದ ಮೇಲಿನ ಅಕ್ಕಿತುಪ್ಪದ ಮಿಶ್ರಣವನ್ನು ಅಗ್ನಿಯಲ್ಲಿ ಹಾಕಬೇಕು. – ಹೋಮಾ ಥೆರಪಿ ಹೆಸರಿನ ಕರಪತ್ರ, ಫೈವ್‌ಫೋಲ್ಡ್ ಪಾಥ ಮಿಶನ್, ೪೦, ಅಶೋಕನಗರ, ಧುಳೆ.

೧ ಉ ೩ ಊ. ಸೂರ್ಯೋದಯದ ಮತ್ತು ಸೂರ್ಯಾಸ್ತದ ಮುಹೂರ್ತದ ಸಮಯದಲ್ಲಿಯೇ ಅಗ್ನಿಹೋತ್ರವನ್ನು ಮಾಡುವುದರ ಮಹತ್ವ : ಸೃಷ್ಟಿಯಲ್ಲಿರುವ ಪ್ರತಿಯೊಂದು ವಿಷಯವು ಸ್ಥಳ, ಕಾಲ ಮತ್ತು ಸಮಯಕ್ಕೆ ಬದ್ಧವಾಗಿರುತ್ತದೆ. ಕಾಲಕ್ಕನುಸಾರ ಪ್ರತಿಯೊಂದು ವಿಷಯದ ಸ್ಥಳ ಮತ್ತು ಅದಕ್ಕನುಸಾರ ಆ ಕೃತಿ ಘಟಿಸಲು ಬೇಕಾಗುವ ಸಮಯವು ಈಶ್ವರನ ಯೋಜನೆಯೇ ಆಗಿರುತ್ತವೆ. ಆದ್ದರಿಂದ ಯಾವುದಾದರೊಂದು ಕೃತಿಯನ್ನು ಕಾಲಕ್ಕನುಸಾರ (ಮುಹೂರ್ತಕ್ಕನುಸಾರ) ಮಾಡಿದರೆ ವ್ಯಕ್ತಿಗೆ ಅಪೇಕ್ಷಿತ ಲಾಭಸಿಗುತ್ತದೆ. ಯಾವುದೇ ಕೃತಿಯನ್ನು ಅಯೋಗ್ಯ ಮುಹೂರ್ತದಲ್ಲಿ ಮಾಡಿದರೆ ಅದರಿಂದ ವಿಪರೀತ ಪರಿಣಾಮಗಳಾಗುತ್ತವೆ, ಉದಾ. ಗ್ರಹಣಕಾಲದಲ್ಲಿ ಗರ್ಭಧಾರಣೆಯಾದರೆ ಜನಿಸುವ ಮಗುವು ಶಾರೀರಿಕದೃಷ್ಟಿಯಿಂದ ಅಂಗವಿಕಲವಾಗಿ ಜನಿಸಬಹುದು. ಹಾಗೆಯೇ ವಿವಾಹದ ವಿಧಿಯು ನಿಗದಿತ ಮುಹೂರ್ತದಲ್ಲಿ ಆಗದಿದ್ದರೆ ಕಾಲಕ್ರಮೇಣ ಪತಿಪತ್ನಿಯರಲ್ಲಿ ಜಗಳಗಳು ನಿರ್ಮಾಣವಾಗುತ್ತವೆ. ಆದುದರಿಂದ ಸೂರ್ಯೋದಯದ ಸಮಯದಲ್ಲಿ ಮತ್ತು ಸೂರ್ಯಾಸ್ತದ ಸಮಯದಲ್ಲಿ ಅಗ್ನಿಹೋತ್ರವನ್ನು ಮಾಡುವುದಕ್ಕೆ ಮಹತ್ವವಿದೆ. – ಕು. ಪ್ರಿಯಾಂಕಾ ಲೋಟಲೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

೧ ಊ. ಅಗ್ನಿಹೋತ್ರವನ್ನು ಸಾಧನೆ ಎಂದು ಪ್ರತಿದಿನ ನಿತ್ಯ ನೇಮದಿಂದ ಮಾಡುವುದು ಆವಶ್ಯಕವಿರುವುದು

ಅಗ್ನಿಹೋತ್ರ ಮಾಡುವುದು ನಿತ್ಯೋಪಾಸನೆಯಾಗಿದೆ. ಇದೊಂದು ವ್ರತವಾಗಿದೆ. ಈಶ್ವರನು ನಮಗೆ ಈ ಜೀವನವನ್ನು ನೀಡಿದ್ದಾನೆ. ಅದಕ್ಕಾಗಿ ಅವನು ನಮಗೆ ಪ್ರತಿದಿನ ಪೋಷಕವಾಗಿರುವಂತಹದ್ದು ಎಲ್ಲವನ್ನೂ ನೀಡಿರುತ್ತಾನೆ. ಆ ಪ್ರಯುಕ್ತ ಪ್ರತಿದಿನ ಕೃತಜ್ಞತೆ ವ್ಯಕ್ತಪಡಿಸಲು ಪ್ರತಿದಿನ ಅಗ್ನಿಹೋತ್ರ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅಲ್ಲದೇ ಅದನ್ನು ಸಾಧನೆ ಎಂದು ಪ್ರತಿದಿನ ಮಾಡುವುದು ಆವಶ್ಯಕವಾಗಿದೆ.

೧ ಎ. ಅಗ್ನಿಹೋತ್ರದ ನಂತರ ಮಾಡಬೇಕಾದ ಕೃತಿಗಳು

೧ ಎ ೧. ಧ್ಯಾನ : ಪ್ರತಿಯೊಂದು ಅಗ್ನಿಹೋತ್ರದ ನಂತರ ಸಾಧ್ಯವಿದ್ದಷ್ಟು ಹೆಚ್ಚು ಸಮಯವನ್ನು ಧ್ಯಾನಕ್ಕಾಗಿ ಇಡಬೇಕು. ಕನಿಷ್ಠ ಅಗ್ನಿಯು ಶಾಂತ ವಾಗುವವರೆಗಾದರೂ ಧ್ಯಾನವನ್ನು ಮಾಡಬೇಕು.

೩ ಔ ೨. ವಿಭೂತಿ (ಭಸ್ಮ) ತೆಗೆದಿಡಬೇಕು : ಮುಂದಿನ ಅಗ್ನಿಹೋತ್ರವನ್ನು ಮಾಡುವುದಕ್ಕಿಂತ ಸ್ವಲ್ಪ ಮೊದಲು ಹವನಪಾತ್ರೆಯಲ್ಲಿನ ವಿಭೂತಿ (ಭಸ್ಮ)ಯನ್ನು ತೆಗೆದು ಗಾಜಿನ ಅಥವಾ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿಡಬೇಕು. ಅದನ್ನು ವನಸ್ಪತಿಗಳಿಗೆ ಗೊಬ್ಬರವೆಂದು ಮತ್ತು ಔಷಧಗಳನ್ನು ತಯಾರಿಸಲು ಉಪಯೋಗಿಸಬಹುದು. – ಹೋಮಾ ಥೆರಪಿ ಹೆಸರಿನ ಕರಪತ್ರ, ಫೈವ್‌ಫೋಲ್ಡ್ ಪಾಥ ಮಿಶನ್, ೪೦, ಅಶೋಕನಗರ, ಧುಳೆ. (ಸವಿಸ್ತಾರ ವಿವೇಚನೆಗಾಗಿ ಓದಿ ಸನಾತನದ ಗ್ರಂಥ ಅಗ್ನಿಹೋತ್ರ)